ನವದೆಹಲಿ: ಅಧಿಕೃತ ಎನ್ನುವುದಕ್ಕಿಂತ ಹೆಚ್ಚಿನದ್ದನ್ನು ಅಥವಾ ಅಧಿಕೃತವಲ್ಲದ್ದನ್ನು ಹೇಳಿ ಜನರ ದಾರಿ ತಪ್ಪಿಸಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್ ಅವರನ್ನು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಈ ಹಿಂದೆ ಅಲೋಪತಿ ವಿರುದ್ಧ ರಾಮದೇವ್ ಹೇಳಿಕೆ ನೀಡಿದ್ದರು. ವಿವಿಧ ವೈದ್ಯರ ಸಂಘಗಳು ಅವರ ವಿರುದ್ಧ ಮೊಕದ್ದಮೆ ಸಲ್ಲಿಸಿವೆ. ಇದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಭಂಬಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಲಸಿಕೆ ಹಾಕಿಸಿಕೊಂಡಿದ್ದರೂ ಕೋವಿಡ್-19 ಪಾಸಿಟಿವ್ ಬಂದಿದೆ. ಇದು ವೈದ್ಯಕೀಯ ವಿಜ್ಞಾನದ ವೈಫಲ್ಯವಾಗಿದೆ ಎಂಬ ಯೋಗ ಗುರು ಬಾಬಾ ರಾಮದೇವ್ ಅವರ ಇತ್ತೀಚಿನ ಹೇಳಿಕೆ ನೀಡಿದ್ದರು. ಇದನ್ನು ದೆಹಲಿ ಹೈಕೋರ್ಟ್ ಬುಧವಾರ ಪ್ರಶ್ನಿಸಿದೆ. ಇದನ್ನೂ ಓದಿ: ಪತ್ನಿಯನ್ನು ಇತರ ಮಹಿಳೆಯರಿಗೆ ಹೋಲಿಸುವುದು ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್
Advertisement
Advertisement
ಆಯುರ್ವೇದಕ್ಕಿದ್ದ ಒಳ್ಳೆಯ ಹೆಸರು ಈಗ ಕುಂದುತ್ತಿರುವ ಬಗ್ಗೆ ನನಗೆ ಕಾಳಜಿ ಇದೆ. ನಾನು ಅದರ ಬಗ್ಗೆ ಚಿಂತಿಸುತ್ತಿದ್ದೇನೆ. ಆಯುರ್ವೇದವು ಪ್ರಾಚೀನ ವೈದ್ಯಕೀಯ ಪದ್ಧತಿಯಾಗಿದೆ. ಆಯುರ್ವೇದದ ಒಳ್ಳೆಯ ಹೆಸರಿಗೆ ಧಕ್ಕೆ ತರುವಂತಹ ಕೆಲಸವನ್ನು ನಾವು ಮಾಡಬಾರದು ಎಂದು ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಬಾನಿ ಹೇಳಿದ್ದಾರೆ.
Advertisement
ಕೆಲವೊಮ್ಮೆ ವಿದೇಶಿ ನಾಯಕರ ಹೆಸರುಗಳನ್ನು ಉಲ್ಲೇಖಿಸಲಾಗುತ್ತಿದೆ. ಇದು ವಿದೇಶಗಳೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂದಿದ್ದಾರೆ. ಇದನ್ನೂ ಓದಿ: ರೋಹಿಂಗ್ಯಾ ಮುಸ್ಲಿಮರಿಗೆ ಫ್ಲ್ಯಾಟ್ : ಯೂಟರ್ನ್ ಹೊಡೆದ ಕೇಂದ್ರ