– ಪ್ರಜ್ವಲ್ ಪ್ರಕರಣದಲ್ಲಿ ಪ್ರಧಾನಿಗೆ ಪತ್ರ ಬರೆದಿದ್ದು ರಾಜಕೀಯ
ವಿಜಯಪುರ: ಮಹಿಳೆಯರಿಗೆ ರಕ್ಷಣೆ ಹಾಗೂ ನೆಮ್ಮದಿ ಸಿಕ್ಕಿದ್ದು ಮೋದಿಯವರ (Narendra Modi) 10 ವರ್ಷದ ಆಡಳಿತದಲ್ಲಿ ಎಂದು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಹೇಳಿದ್ದಾರೆ.
ವಿಜಯಪುರದಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‍ಡ್ರೈವ್ ಪ್ರಕರಣದ (Prajwal Revanna Pendrive Case) ಬಗ್ಗೆ ಪ್ರಧಾನಿ ಮೋದಿ ಮಾತಾಡುತ್ತಿಲ್ಲ ಎಂಬ ರಾಹುಲ್ ಗಾಂಧಿಯವರ (Rahul Gandhi) ಆರೋಪಕ್ಕೆ ತಿರುಗೇಟು ನಿಡಿದ್ದಾರೆ. ಪ್ರಕರಣದ ಬಗ್ಗೆ ಅಮಿತ್ ಶಾ ಮಾತನಾಡಿ, ತೀವ್ರವಾಗಿ ಖಂಡಿಸಿದ್ದಾರೆ ಎಂದರು. ಇದನ್ನೂ ಓದಿ: ಪ್ರಜ್ವಲ್ ಕೇಸ್ – ಜಡ್ಜ್ ಮುಂದೆ ಸಂತ್ರಸ್ತೆಯಿಂದ ಹೇಳಿಕೆ: ಏನಿದು ಸಿಆರ್ಪಿಸಿ ಸೆಕ್ಷನ್ 164? ಹೇಳಿಕೆಗೆ ಯಾಕಿಷ್ಟು ಮಹತ್ವ?
ರಾಜ್ಯದಲ್ಲಿ ಕಾಂಗ್ರೆಸ್‍ನವರದ್ದೇ ಸರ್ಕಾರ ಇದೆ. ಈಗ ಎಸ್‍ಐಟಿ ಯಾರ ಕೈಯಲ್ಲಿದೆ? ಅವರ ತನಿಖೆಗೆ ಯಾರಾದರೂ ತಡೆ ಒಡ್ಡಿದ್ದಾರಾ? ಯಾರಾದರೂ ಅವರ ಮೇಲೆ ಒತ್ತಡ ಹೇರಿದ್ದಾರಾ? ಅವರದೇ ಸರ್ಕಾರ ಇಟ್ಟುಕೊಂಡು ಸಿಎಂ, ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಇದು ರಾಜಕೀಯಕ್ಕೆ ಮಾತ್ರ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದೇವೇಗೌಡರದ್ದು ಪೆನ್‌ಡ್ರೈವ್ ಕುಟುಂಬ: ಡಿ.ಕೆ.ಸುರೇಶ್ ವಾಗ್ದಾಳಿ