ಒಟ್ಟಾವಾ: ತಮಿಳುನಾಡಿನ ಬ್ರಾಹ್ಮಣ ಕುಟುಂಬದ ಯುವತಿ ಬಾಂಗ್ಲಾದೇಶದ ಮಹಿಳೆಯೊಂದಿಗೆ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿರುವ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ.
ಕೆನಡಾದ ಕ್ಯಾಲ್ಗರಿಯಲ್ಲಿ ನೆಲೆಸಿರುವ ತಮಿಳುನಾಡಿನ ಯುವತಿ ಸುಭೀಕ್ಷಾ ಸುಬ್ರಮಣಿ (29) ಹಾಗೂ ಬಾಂಗ್ಲಾದೇಶದ ಮಹಿಳೆ ಟೀನಾ (35) ಇಬ್ಬರೂ ಕಳೆದ 6 ವರ್ಷಗಳ ಹಿಂದೆ ಡೇಟಿಂಗ್ ಆಪ್ ಮೂಲಕ ಪರಿಚಯವಾಗಿದ್ದಾರೆ. ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿದ್ದು, ಮದುವೆಯಾಗಲು ನಿರ್ಧರಿಸಿದ್ದರು. ಇದಕ್ಕೆ ಎರಡೂ ಕುಟುಂಬಸ್ಥರೂ ಪೂರ್ಣ ಸಹಕಾರ ನೀಡಿದ್ದರಿಂದಾಗಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ವ್ಯಕ್ತಿಯ ಪಾರ್ಥೀವ ಶರೀರದ ಮೆರವಣಿಗೆ ಕಂಡು ಡಿಜೆ ಬಂದ್ ಮಾಡಿದ ಗಣೇಶ ಭಕ್ತರು
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಭೀಕ್ಷಾ, ನಮ್ಮ ಪೋಷಕರು ಸಂಪ್ರದಾಯವಾದಿಗಳು, ಹಿಂದೂ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ನೀಡುತ್ತಾರೆಯೇ ಎಂಬ ಆತಂಕದಲ್ಲಿದ್ದೆ. ಆದರೆ ಅವರು ಯಾವುದೇ ವಿರೋಧವಿಲ್ಲದೇ ನಮ್ಮ ಬೆಂಬಲಕ್ಕೆ ನಿಂತರು. ಬ್ರಾಹ್ಮಣ ವಿವಾಹ ಕ್ರಮದಂತೆ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದರು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುರುಘಾ ಶ್ರೀಗಳ ಕೇಸ್ – 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ
ಟೀನಾ ಸಹ ಇದರಿಂದ ಹರ್ಷಗೊಂಡಿದ್ದು, ನನಗೆ 19 ವರ್ಷ ಇದ್ದಾಗಲೇ ಬೇರೆ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಆದರೆ ನನಗೆ ಸಲಿಂಗಿಗಳ ಕಡೆಗೆ ಒಲವಿತ್ತು. ತಾನು ಸುಭೀಕ್ಷಾಳನ್ನು ಮದುವೆಯಾಗಬೇಕು ಅಂದುಕೊಂಡಾಗ ಆಕೆಯ ಸಹೋದರಿ ವಿರೋಧಿಸಿದ್ದರು. ಆದರೆ ಸುಭೀಕ್ಷಾಳ 84 ವರ್ಷದ ಅಜ್ಜಿ ಮದುವೆಗೆ ಒಪ್ಪಿದ ನಂತರ ಎಲ್ಲರೂ ಒಪ್ಪಿಕೊಂಡು ಮದುವೆ ನೆರವೇರಿಸಿಕೊಟ್ಟರು.
ತಮಿಳುನಾಡಿನ ಮೂಲದ ಸುಭೀಕ್ಷಾ ಕೆನಡಾದಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಆಗಿ ಕೆಲಸ ಮಾಡುತ್ತಿದ್ದಾರೆ. ಬಾಂಗ್ಲಾದೇಶ ಮೂಲದ ಟೀನಾ 2003ರಲ್ಲಿ ಕೆನಡಾಕ್ಕೆ ಬಂದು ನೆಲೆಸಿದ್ದು, ಕ್ಯಾಲ್ಗರಿಯ ಫೂತ್‌ಹಿಲ್ಸ್ ಆಸ್ಪತ್ರೆಯ ಪೇಷೆಂಟ್ ಕೇರ್ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ.