ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ರಾಜೇಶ್ (Aishwarya Rajesh) ಉತ್ತರಕಾಂಡ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಉತ್ತರಕಾಂಡ ಒಂದು ಬಹು ನಿರೀಕ್ಷಿತ ಚಿತ್ರವಾಗಿದ್ದು, ಚಿತ್ರದಲ್ಲಿ ಡಾ. ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ ಜೋಡಿಯಾಗಿ ‘ದುರ್ಗಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟಿ ಆರುಷಿ ಶರ್ಮಾ
ದಿ ಗ್ರೇಟ್ ಇಂಡಿಯನ್ ಕಿಚನ್, ದಿ ವರ್ಲ್ಡ್ ಫೇಮಸ್ ಲವರ್, ವಡಾ ಚೆನ್ನೈ, ಕಾಕ ಮುತ್ತೈ, ಜೋಮೋಂಟೇ ಸುವಿಶೇಷಂಗಳ್, ಟಕ್ ಜಗದೀಶ್, ವಾನಂ ಕೊಟ್ಟಾಟುಂ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಐಶ್ವರ್ಯ ತಮ್ಮ ಅಭಿನಯದ ಮೂಲಕ ಛಾಪನ್ನು ಮೂಡಿಸಿ ಇದೀಗ ಕನ್ನಡದ ‘ಉತ್ತರಕಾಂಡ’ (Uttarakaanda Film) ಸಿನಿಮಾಗೆ ಎಂಟ್ರಿ ನೀಡಿದ್ದಾರೆ.
View this post on Instagram
ಪ್ರಸ್ತುತ ಚಿತ್ರದ ಪ್ರಥಮ ಶೆಡ್ಯೂಲ್ ಚಿತ್ರೀಕರಣ ವಿಜಯಪುರದಲ್ಲಿ ನಡೆಯುತ್ತಿದ್ದು, ಈ ಆ್ಯಕ್ಷನ್ ಡ್ರಾಮಾಗೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ. ಮಲಯಾಳಂ ನಟ ವಿಜಯ್ ಬಾಬು, ರಂಗಾಯಣ ರಘು, ಚೈತ್ರ ಜೆ ಆಚಾರ್, ಉಮಾಶ್ರೀ, ಯೋಗರಾಜ್ ಭಟ್, ದಿಗಂತ್ ಮಂಚಾಲೆ, ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ಬಹು ದೊಡ್ಡ ತಾರಾಬಳಗವನ್ನು ಚಿತ್ರ ಹೊಂದಿದೆ.
ಬಾಲಿವುಡ್ ಗಾಯಕ ಹಾಗೂ ಸಂಗೀತ ಸಂಯೋಜಕ ಅಮಿತ್ ತ್ರಿವೇದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ.