ತಮಿಳಿನ ಜನಪ್ರಿಯ ನಟಿ ಅರುಂಧತಿ ನಾಯರ್‌ಗೆ (Arundathi Nair) ಭೀಕರ ರಸ್ತೆ ಅಪಘಾತವಾಗಿದ್ದು, ಈ ಘಟನೆಯಲ್ಲಿ ನಟಿಗೆ ಗಂಭೀರ ಗಾಯಗಳಾಗಿದೆ. ತಿರುವನಂತಪುರನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಕ್‌ನಲ್ಲಿ ತನ್ನ ಸಹೋದರನ ಜೊತೆ ಅರುಂಧತಿ ಹೋಗುತ್ತಿದ್ದಾಗ, ಕೋವಲಂ ಬೈಪಾಸ್ ಬಳಿ ಕಾರು ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ಇಬ್ಬರೂ ಗಂಭೀರ ಗಾಯಗಳಾಗಿ ವೈಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ:ಮದುವೆ ಸಿದ್ಧತೆಯಲ್ಲಿ ನಟಿ ತಮನ್ನಾ ಭಾಟಿಯಾ
ಅರುಂಧತಿ ನಾಯರ್ ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಬಗ್ಗೆ ತಿಳಿಸಿ ಚಿಕಿತ್ಸೆಗೆ ನೆರವಾಗಲು ಸೋಷಿಯಲ್ ಮೀಡಿಯಾದಲ್ಲಿ ನಟಿ ಗೋಪಿಕಾ ಅನಿಲ್ (Gopika Anil) ಮನವಿ ಮಾಡಿದ್ದಾರೆ. ನನ್ನ ಸ್ನೇಹಿತೆ ಆಕ್ಸಿಡೆಂಟ್ ಆಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ. ಆಕೆ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಆಕೆಯ ಪ್ರತಿನಿತ್ಯದ ಚಿಕಿತ್ಸೆ ವೆಚ್ಚ ಭರಿಸಲು ಅವರ ಕುಟುಂಬದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
View this post on Instagram
ಆದರೆ ನಾವು ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತಿದ್ದೇವೆ. ಅದು ಆಕೆಯ ಚಿಕಿತ್ಸೆಗೆ ಸಾಲುವುದಿಲ್ಲ. ನೀವು ಕೂಡ ಸಹಾಯ ಮಾಡಿದರೆ ಉತ್ತಮ ಚಿಕಿತ್ಸೆಗೆ ನೆರವಾಗುತ್ತದೆ ಎಂದು ನಟಿ ಮಾನವಿ ಮಾಡಿದ್ದಾರೆ. ಹಾಗೆಯೇ ಬ್ಯಾಂಕ್ ವಿವರ ಕೂಡ ತಿಳಿಸಿದ್ದಾರೆ.
ವಿಜಯ್ ಆಂಟೋನಿ ಜೊತೆ ಸೈತಾನ್ ಸೇರಿದಂತೆ ತಮಿಳಿನ ಹಲವು ಸಿನಿಮಾಗಳಲ್ಲಿ ಅರುಂಧತಿ ನಾಯರ್ ನಟಿಸಿದ್ದಾರೆ.