ರಾಮಾಚಾರಿಯ ಜೀವನವನ್ನು 5 ನಿಮಿಷದಲ್ಲಿ ಬಿಚ್ಚಿಟ್ಟ ನಟ ವಿಶಾಲ್

Public TV
2 Min Read
VISHAL

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಬಿಡುಗಡೆಕ್ಕಿಂತ ಮೊದಲಿನಿಂದಲೂ ತಮಿಳು ನಟ ವಿಶಾಲ್ ರಾಮಾಚಾರಿಯ ಬೆನ್ನಿಗೆ ನಿಂತು ಬೆಂಬಲ ನೀಡಿದ್ದರು. ಈಗ ರಾಮಾಚಾರಿಯ ಜೀವನವನ್ನು 5 ನಿಮಿಷದ ವಿಡಿಯೋ ಮೂಲಕ ತಮಿಳುನಾಡಿನ ಜನತೆಗೆ ತಿಳಿಸಿದ್ದಾರೆ.

ನಟ ವಿಶಾಲ್, ತಮ್ಮ ಸ್ನೇಹಿತ ಯಶ್ ಅವರಿಗಾಗಿ ಒಂದು ವಿಶೇಷವಾದ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ ಯಶ್ ಯಾರು, ಅವರು ರಾಕಿಂಗ್ ಸ್ಟಾರ್ ಸ್ಥಾನಕ್ಕೇರಲು ಪಟ್ಟಂತಹ ಕಷ್ಟ ಎಂತಹದು ಎಂಬ ಯಶೋಗಾಥೆಯನ್ನ ವಿಡಿಯೋ ಮೂಲಕ ತಮಿಳುನಾಡಿನ ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.

YASH VISHAL

ವಿಡಿಯೋದಲ್ಲಿ ಏನಿದೆ?
10 ವರ್ಷಗಳ ಹಿಂದೆ ಒಬ್ಬ ಸಾಧಾರಣ ಬಸ್ ಕಂಡಕ್ಟರ್ ಮಗನೊಬ್ಬ ನವೀನ್ ಕುಮಾರ್ ಅಂದು ನಾನು ಸೂಪರ್ ಸ್ಟಾರ್ ಆಗುತ್ತೇನೆ ಎಂದಾಗ ಎಲ್ಲರೂ ಕೈ ಬಡಿದುಕೊಂಡು ನಕ್ಕಿದ್ದರು. ಆದರೆ ಇಂದು ಅವರಿಗಾಗಿ ಇದೇ ಜನರು ಕೈ ತಟ್ಟುತ್ತಿದ್ದಾರೆ. ರಾಕಿಂಗ್ ಸ್ಟಾರ್ ಪಟ್ಟಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದಾರೆ. ಜೀವನದಲ್ಲಿ ಎದುರಾದ ಅವಮಾನ, ನೋವು, ಅನುಭವಿಸಿ ಎದುರಿಸಿ ಇಂದು ರಾಕಿಂಗ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

ಬೆಳ್ಳಿ ಪರದೆಯ ಮೇಲೆ ಯಾರು ಬಂದರೆ ಸಿಳ್ಳೆ ಹೊಡೆಯುತ್ತಾರೋ ಅವರೇ ಯಶ್. ಮೊಗ್ಗಿನ ಮನಸ್ಸು ಸಿನಿಮಾದಿಂದ ಚಿತ್ರರಂಗದ ಪಯಣ ಆರಂಭವಾಗಿದೆ. ವಯಸ್ಸು 32 ಆದರೂ ಅವರು ಮಾಡಿರುವ ಸಾಧನೆ ವಯಸ್ಸಿಗೂ ಮೀರಿದ್ದಾಗಿದೆ. ನಟನಾಗಿ ಮಾತ್ರವಲ್ಲದೇ ರೈತರ ಕಷ್ಟದ ಕೂಗಿ ತಕ್ಷಣಗೆ ಓಗೊಟ್ಟು ಯಶೋಮಾರ್ಗದ ಮೂಲಕ ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಸಮಾಜ ಸೇವೆ ಬಲಗೈಯಲ್ಲಿ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂಬ ಮನೋಭಾವದವರು ಯಶ್.

vishal DN

ಯಶ್ ಒಮ್ಮೆ ಸ್ಟಾರ್ ಪಟ್ಟಕ್ಕೇರಲಿಲ್ಲ. ಅವರ ಪ್ರಯತ್ನ, ಶ್ರಮ, ಛಲ ಮತ್ತು ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮೊಗ್ಗಿನ ಮನಸ್ಸು ಮಾತ್ರವಲ್ಲದೇ, ರಾಮಾಚಾರಿ, ಮಾಸ್ಟರ್ ಪೀಸ್, ರಾಜಹುಲಿ ಎಲ್ಲ ಸಿನಿಮಾಗಳು ಯಶಸ್ವಿಯಾಗಿವೆ. ಇಂದು ಮಾಸ್ ಆಗಿ ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿರಂಗದ ಹೀರೋ ಆಗಿದ್ದಾರೆ. ಇಂದು ಪ್ರತಿಯೊಬ್ಬ ನಟರು ಅವರ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ವಿಡಿಯೋದಿಂದ ಯಶ್ ಬಗ್ಗೆ ಅನೇಕ ವಿಚಾರಗಳ ಬಗ್ಗೆ ತಮಿಳು ಜನರಿಗೆ ತಿಳಿಸಿಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *