ಚೆನ್ನೈ: ತಮಿಳಿನ ಹಾಸ್ಯ ನಟ ವಡಿವೇಲು ಅವರು ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ.
ವಡಿವೇಲು ಅವರು ಇತ್ತೀಚೆಗಷ್ಟೇ ಲಂಡನ್ ನಿಂದ ವಾಪಸ್ಸಾಗಿದ್ದರೆ. ಸೋಂಕು ಅಲ್ಲಿಂದಲೇ ವಡಿವೇಲು ಅವರಿಗೆ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
Advertisement
Advertisement
ತಮಿಳಿನ ನಾಯ್ ಶೇಖರ್ ರಿಟರ್ನ್ಸ್ ಚಿತ್ರದ ಚಿತ್ರೀಕರಣಕ್ಕೆಂದು ವಡಿವೇಲು ಲಂಡನ್ಗೆ ತೆರಳಿದ್ದರು. ವಿದೇಶದಿಂದ ವಾಪಸ್ ಆದಾಗಲೇ ಅವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿತ್ತು ಎಂದು ವಡಿವೇಲು ಮನೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಯನ್ ರಾಜ್ ಸರ್ಜಾ ಕ್ರಿಸ್ಮಸ್ ಸಂಭ್ರಮ ಹೇಗಿತ್ತು ಗೊತ್ತಾ?
Advertisement
ವಡಿವೇಲು ಅವರ ಆರೋಗ್ಯ ತೀರಾ ಹದಗೆಟ್ಟಿದ್ದು, ವಡಿವೇಲು ಅವರಿಗೆ ಓಮಿಕ್ರಾನ್ ಸೋಂಕು ಕೂಡ ತಗುಲಿರುವ ಶಂಕೆ ವ್ಯಕ್ತವಾಗಿದೆ. ವಡಿವೇಲು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅದ್ಭುತ ನಟನೆಯಿಂದ ಸಾಕಷ್ಟು ಪ್ರಶಸ್ತಿಗಳು ಇವರ ಪಾಲಾಗಿವೆ. ಇದನ್ನೂ ಓದಿ: 1.83 ಕೋಟಿ ಮೌಲ್ಯದ 3.6 ಕೆ.ಜಿ ಚಿನ್ನ ತಿರುಪತಿ ತಿಮ್ಮಪ್ಪನಿಗೆ ಅರ್ಪಣೆ