ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು?

Public TV
2 Min Read
VIRAT KOHLI SIMBU

ಚಿತ್ರರಂಗದಲ್ಲಿ ಈಗಾಗಲೇ ಹಲವು ಘಟಾನುಘಟಿಗಳ ಜೀವನ ಚರಿತ್ರೆ ಸಿನಿಮಾ ರೂಪದಲ್ಲಿ ಬಂದು ಸಕ್ಸಸ್‌ ಕಂಡಿದೆ. ಈಗ ವಿರಾಟ್‌ ಕೊಹ್ಲಿ ಜೀವನ ಚರಿತ್ರೆ ಬಗ್ಗೆ ಸಿನಿಮಾ ಮಾಡೋದರ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆಲ್ಲಾ ಕಾರಣವಾಗಿರೋದು ವಿರಾಟ್‌ ಕೊಹ್ಲಿ ನೀಡಿರುವ ಹೇಳಿಕೆ. ವಿರಾಟ್‌ ಬಯೋಪಿಕ್‌ನಲ್ಲಿ ಸಿಂಬು ನಟಿಸುತ್ತಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಇದನ್ನೂ ಓದಿ:ಭಾಗ್ಯಶ್ರೀ ಜೊತೆ ವಿಜಯ್ ದೇವರಕೊಂಡ ಲಿಪ್‌ಲಾಕ್- ‘ಕಿಂಗ್‌ಡಮ್’ ಸಾಂಗ್ ಔಟ್

ನಟ ಸಿಂಬು ಅಭಿನಯದ ‘ಪಾಥು ಥಾಲಾ’ ಚಿತ್ರದ ‘ನೀ ಸಿಂಗಮ್ ಧಾನ’ ಸಾಂಗ್ ವಿರಾಟ್‌ಗೆ ಇಷ್ಟವಂತೆ ಹಾಗಂತ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ. ವಿರಾಟ್‌ ಮೈದಾನದಲ್ಲಿ ಅಭ್ಯಾಸ ಮಾಡುವಾಗ, ವಿಮಾನದಲ್ಲಿ ಪ್ರಯಾಣ ಮಾಡುವಾಗ ‘ನೀ ಸಿಂಗಮ್ ಧಾನ’  ಹಾಡನ್ನು ಪದೇ ಪದೇ ಕೇಳುತ್ತಿರೋದಾಗಿ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ. ವಿರಾಟ್ ತಮ್ಮ ನೆಚ್ಚಿನ ಹಾಡನ್ನು ರಿವೀಲ್‌ ಮಾಡಿರುವ ವಿಡಿಯೋವನ್ನು ಸಿಂಬು ಎಕ್ಸ್‌ನಲ್ಲಿ ಶೇರ್‌ ಮಾಡಿದ್ದಾರೆ. ಹೀಗಾಗಿ ವಿರಾಟ್‌ ಜೀವನ ಚರಿತ್ರೆಯಲ್ಲಿ ಸಿಂಬು ನಟಿಸುತ್ತಾರೆ ಎಂಬ ಸುದ್ದಿ ಈಗ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಶಾರುಖ್ ಖಾನ್ ಬಳಿಕ ಮತ್ತೊಂದು ಬಿಗ್ ಪ್ರಾಜೆಕ್ಟ್‌ಗೆ ದೀಪಿಕಾ ಪಡುಕೋಣೆ ನಾಯಕಿ

Virat Kohli

ತಮಿಳಿನ ನಟ ಸಿಲಂಬರಸನ್ ಅಲಿಯಾಸ್ ಸಿಂಬು ಬಹಳ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಒಂದೊಳ್ಳೆಯ ಅಭಿಮಾನಿ ವರ್ಗವನ್ನೂ ಸಂಪಾದಿಸಿದ್ದಾರೆ. ಇದೀಗ ಸಿಂಬು ಅವರು ವಿರಾಟ್‌ ಕೊಹ್ಲಿ ಬಯೋಪಿಕ್‌ಗೆ ಸೂಕ್ತ ಎಂಬ ಚರ್ಚೆ ಶುರುವಾಗಿದೆ.

simbuವಿರಾಟ್‌ ಕೊಹ್ಲಿ ಫಿಟ್ನೆಸ್‌, ಅವರ ಸ್ಟೈಲ್‌, ನೋಟವನ್ನು ಸಿಂಬು ಹೋಲುತ್ತಾರೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಹೀಗಾಗಿ ವಿರಾಟ್‌ ಬಯೋಪಿಕ್‌ ಪ್ಲ್ಯಾನ್‌ ನಡೆದರೆ ಅವರ ಪಾತ್ರವನ್ನು ನಿಭಾಯಿಸೋದಿಕ್ಕೆ ಸಿಂಬು ಬೆಸ್ಟ್‌ ಎಂಬ ಮಾತು ಬಾಲಿವುಡ್‌, ಕಾಲಿವುಡ್‌ ಗಲ್ಲಿಯಲ್ಲಿ ಕೇಳಿ ಬರುತ್ತಿದೆ.

ಕ್ರಿಕೆಟ್‌ನಲ್ಲಿ ವಿರಾಟ್‌, ಸಿನಿಮಾದಲ್ಲಿ ಸಿಂಬು ಸದ್ಯ ಮಿಂಚುತ್ತಿದ್ದಾರೆ. ಸಿಂಬು ‘ಥಗ್ ಲೈಫ್’ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ STR49, STR50 ಮತ್ತು 51 ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಸಿಂಬು ಬ್ಯುಸಿಯಾಗಿದ್ದಾರೆ.

Share This Article