ತಮಿಳು ನಟ ಸಿದ್ಧಾರ್ಥ್ (Actor Siddarth) ಇದೀಗ ಭಾವಿ ಪತ್ನಿ ಅದಿತಿ ರಾವ್ ಹೈದರಿ (Aditi Rao Hydari) ಬದಲು ಕನ್ನಡತಿ ಆಶಿಕಾ ರಂಗನಾಥ್‌ಗೆ (Ashika Ranganath) ‘ಮಿಸ್ ಯೂ’ ಎಂದಿದ್ದಾರೆ. ರಿಯಲ್ ಲೈಫ್ ಬದಲು ರೀಲ್ ಲೈಫ್‌ನಲ್ಲಿ ಆಶಿಕಾಗೆ ಮಿಸ್ ಯೂ ಎಂದಿದ್ದಾರೆ. ಲವರ್ ಬಾಯ್ ಸಿದ್ಧಾರ್ಥ್ ಇದೀಗ ಆಶಿಕಾ ಜೊತೆ ಹೊಸ ಸಿನಿಮಾ ಮಾಡ್ತಿದ್ದಾರೆ. ಹಾಗಾಗಿ ನಟನ ಪಾತ್ರದ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ.
ಟ್ರಾವೆಲ್ ಮೂಡ್‌ನಲ್ಲಿರುವ ಸಿದ್ಧಾರ್ಥ್ ಬ್ಯಾಗ್ ಹಿಡಿದು ಬರುತ್ತಿರುವ ಲುಕ್ ಅನ್ನು ‘ಮಿಸ್ ಯೂ’ ಚಿತ್ರತಂಡ ರಿವೀಲ್ ಮಾಡಿದೆ. ನಟನ ಫಸ್ಟ್ ಲುಕ್‌ಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಡಾಲಿ ಧನಂಜಯ ನಟನೆಯ ’ಕೋಟಿ’ ಟ್ರೈಲರ್ ಔಟ್
View this post on Instagram
‘ಮಿಸ್ ಯೂ’ ಸಿನಿಮಾದ ಮೂಲಕ ಮತ್ತೆ ಸಿದ್ಧಾರ್ಥ್ ಹೊಸ ಪ್ರೇಮ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ಕನ್ನಡದ ನಟಿ ಆಶಿಕಾ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿರುವ ಕಾರಣ, ಸಿನಿಮಾ ಬಗ್ಗೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
7 ಮೈಲ್ಸ್ ಪರ ಸೆಕೆಂಡ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸ್ಯಾಮ್ಯುಯೆಲ್ ಮ್ಯಾಥ್ಯೂ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕರುಣಾಕರನ್, ಬಾಲಾ, ಸಾಸ್ತಿಕಾ ರಾಜೇಂದ್ರನ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.