ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ‘ಜೈಲರ್’ (Jailer) ಸಕ್ಸಸ್ ನಂತರ ಸಾಲು ಸಾಲು ಸಿನಿಮಾಗಳನ್ನ ಮಾಡ್ತಿದ್ದಾರೆ. ತಲೈವಾ 170ನೇ ಚಿತ್ರದಲ್ಲಿ ರಜನಿಕಾಂತ್‌ಗೆ ಬಿಗ್ ಬಿ ಜೊತೆಯಾಗುತ್ತಿದ್ದಾರೆ. 33 ವರ್ಷಗಳ ಬಳಿಕ ಮತ್ತೆ ಈ ಜೋಡಿ ಒಂದಾಗ್ತಿರೋದು ವಿಶೇಷ. ಈ ಬಗ್ಗೆ ಸ್ಪೆಷಲ್ ಪೋಸ್ಟ್‌ವೊಂದನ್ನ ತಲೈವಾ ಹಂಚಿಕೊಂಡಿದ್ದಾರೆ.
ಟಿ.ಜಿ ಜ್ಞಾನವೇಲ್ ನಿರ್ದೇಶನದ, ಲೈಕಾ ಪ್ರೋಡಕ್ಷನ್ಸ್ ನಿರ್ಮಾಣ ಮಾಡುತ್ತಿರುವ ‘ತಲೈವರ್ 170’ ಚಿತ್ರದಲ್ಲಿ 33 ವರ್ಷಗಳ ನಂತರ ನಾನು ನನ್ನ ಗುರು ಶ್ರೀ ಅಮಿತಾಭ್ ಬಚ್ಚನ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತೋಷದಿಂದ ಬಡಿದುಕೊಳ್ಳುತ್ತಿದೆ ಎಂದು ರಜನಿಕಾಂತ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ನಾನು ಧರಿಸಿದ್ದು ಕೃತಕ ಹುಲಿ ಉಗುರು: ನಟ ನಿಖಿಲ್ ಕುಮಾರ್ ಸ್ವಾಮಿ ಸ್ಪಷ್ಟನೆ
After 33 years, I am working again with my mentor, the phenomenon, Shri Amitabh Bachchan in the upcoming Lyca’s “Thalaivar 170” directed by T.J Gnanavel. My heart is thumping with joy!@SrBachchan @LycaProductions @tjgnan#Thalaivar170 pic.twitter.com/RwzI7NXK4y
— Rajinikanth (@rajinikanth) October 25, 2023
ರಜನಿಕಾಂತ್ ಅವರು ತಮಿಳು, ಕನ್ನಡ ಹಿಂದಿಯಲ್ಲೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಬಿಗ್ ಬಿ ಅವರೊಂದಿಗೆ ಅಂದಾ ಕಾನೂನ್, ಗಿರಫ್ತಾರ್- ಹಮ್ ಸಿನಿಮಾಗಳಲ್ಲಿ ನಟಿಸಿದ್ದರು. ಈ ಸಿನಿಮಾಗಳು ದೊಡ್ಡ ಹಿಟ್ ಆಗಿದ್ದವು. ಅಂದಾ ಕಾನೂನ್ ಸಿನಿಮಾದಲ್ಲಿ ರಜನಿಕಾಂತ್ ಹೀರೋ ಆಗಿದ್ದರೆ, ಅಮಿತಾಭ್ ಅತಿಥಿ ಪಾತ್ರ ಮಾಡಿದ್ದರು. ಹಮ್ ಚಿತ್ರದಲ್ಲಿ ಇಬ್ಬರು ಜೊತೆಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾ ಕೂಡ ಸೂಪರ್ ಹಿಟ್ ಎನಿಸಿಕೊಂಡಿತ್ತು.
ರಜನಿ 170ನೇ ಸಿನಿಮಾದಲ್ಲಿ ತಲೈವಾ-ಅಮಿತಾಭ್ ಒಟ್ಟಿಗೆ ನಟಿಸುತ್ತಿರೋದು ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ. 33 ವರ್ಷಗಳ ನಂತರ ಮತ್ತೆ ಬಿಗ್ ಬಿ- ರಜನಿ ಒಂದಾಗಿರೋದ್ರಿಂದ ಸಿನಿಮಾ ಬಗೆಗಿನ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]