ಪ್ರೀತಿಗೆ ಕಣ್ಣಿಲ್ಲ ಎಂಬ ಮಾತು ಮತ್ತೆ ನಿಜವಾಗಿದೆ. ಕಾಲಿವುಡ್‌ನಲ್ಲಿ(Kollywood) ಈ ಹೊಸ ಜೋಡಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. 56 ವರ್ಷದ ಹಿರಿಯ ನಟ ಪೃಥ್ವಿರಾಜ್(Prithviraj) ತಮಗಿಂತ 33 ವರ್ಷ ಕಿರಿಯಯವಳ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
View this post on Instagram
Advertisement
ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಪೃಥ್ವಿರಾಜ್ ತನ್ನ ಜಿಮ್ ಟ್ರೈನರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. 24 ವರ್ಷದ ಜಿಮ್ ಟ್ರೈನರ್ ಶೀತಲ್ ಜೊತೆ ಪ್ರೀತಿಯಲ್ಲಿರುವ ವಿಚಾರವನ್ನು ಸ್ವತಃ ಪೃಥ್ವಿರಾಜ್ ಅವರೇ ಬಹಿರಂಗ ಪಡಿಸಿದ್ದಾರೆ. ಇಬ್ಬರು ಅನೇಕ ಸಮಯದಿಂದ ಒಟ್ಟಿಗೆ ಸುತ್ತಾಡುತ್ತಿದ್ದಾರೆ.
Advertisement
View this post on Instagram
Advertisement
ಜಿಮ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಬಳಿಕ ಉತ್ತಮ ಸ್ನೇಹಿತರಾಗಿದ್ದರು. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿದೆ. ಸದ್ಯದಲ್ಲೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಈ ಮೊದಲು ಬೀನಾ ಅವರನ್ನು ಪೃಥ್ವಿರಾಜ್ 1994ರಲ್ಲಿ ಮದುವೆ ಆಗಿದ್ದರು. ಆರು ವರ್ಷಗಳ ಹಿಂದೆ ಇಬ್ಬರೂ ಬೇರೆ ಆಗಿದ್ದಾರೆ. ಇದನ್ನೂ ಓದಿ:ಬಹುಭಾಷಾ ಹಿರಿಯ ನಟಿ ವಿನಯ ಪ್ರಸಾದ್ ಮನೆ ದೋಚಿದ ಖದೀಮರು
Advertisement
View this post on Instagram
ಒಬ್ಬಂಟಿಯಾಗಿ ಬದುಕುತ್ತಿದ್ದ ಪೃಥ್ವಿರಾಜ್ ತನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿಗಾಗಿ ಕಾಯುತ್ತಿದ್ದರು ಜಿಮ್ ಟ್ರೈನರ್ ಶೀತಲ್ ಹತ್ತಿರವಾಗಿದ್ದಾರೆ. ವಯಸ್ಸಿನ ಅಂತರಕ್ಕೆ ಮನ್ನಣೆ ಕೊಡದೇ ಮದುವೆಗೆ ಶೀತಲ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 33 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿ, ಗಾಸಿಪ್ ಪ್ರಿಯರ ಹಾಟ್ ಟಾಪಿಕ್ ಆಗಿದ್ದಾರೆ.