ಚೆನ್ನೈ: ಕಾಲಿವುಡ್ ಖ್ಯಾತ ನಟ ಜೀವ (Tamil Actor Jiiva) ಕಾರು ಅಪಘಾತವಾಗಿದೆ. ಪತ್ನಿಯೊಂದಿಗೆ ನಟ ಜೀವ ಪ್ರಯಾಣಿಸುತ್ತಿದ್ದ ವೇಳೆ, ಕಲ್ಲಕುರಿಚಿ ಜಿಲ್ಲೆಯ ಚಿನ್ನಸೇಲಂ ಬಳಿ ಕಾರು ಅಪಘಾತ (Car Accident) ಸಂಭವಿಸಿದೆ. ಇದನ್ನೂ ಓದಿ:ನನ್ನ ಗಮನಕ್ಕೆ ತರದೇ ಡಿವೋರ್ಸ್ ಘೋಷಿಸಿದ್ದಾರೆ: ಜಯಂ ರವಿ ವಿರುದ್ಧ ಆರತಿ ಆಕ್ರೋಶ
ಇಂದು (ಸೆ.11) ಮಧ್ಯಾಹ್ನ 3 ಗಂಟೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಅನಿರೀಕ್ಷಿತವಾಗಿ ಓರ್ವ ವ್ಯಕ್ತಿ ಅಡ್ಡ ಬಂದಿದ್ದಾನೆ. ಆತನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ನಟ ಜೀವ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾರೆ. ನಟ ಜೀವ ಮತ್ತು ಪತ್ನಿ ಸುಪ್ರಿಯಾಗೆ ಯಾವುದೇ ಗಾಯವಾಗಿಲ್ಲ. ಅವಘಡದಿಂದ ಇಬ್ಬರೂ ಪಾರಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಜೀವ ದಂಪತಿಯನ್ನು ಬೇರೆ ಕಾರಿನಲ್ಲಿ ಚೆನ್ನೈಗೆ ಕಳುಹಿಸಿ ಕೊಟ್ಟಿದ್ದಾರೆ.
ಅಂದಹಾಗೆ, ತಮಿಳು ನಟ, ನಿರ್ಮಾಪಕ ಜೀವ ಅವರು ರಾಮ್, ಡಿಶ್ಯೂಂ, ಸೀರು, ಯಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.