ಬಹುಭಾಷಾ ನಟಿ ತಮನ್ನಾ ಭಾಟಿಯಾ (Tamannah Bhatia) ಅವರು ಸಿನಿಮಾ ವಿಚಾರವಾಗಿ ಅದೆಷ್ಟು ಸುದ್ದಿ ಮಾಡ್ತಿದ್ದಾರೋ ಅಷ್ಟೇ ಬಾಯ್ ಫ್ರೆಂಡ್ ವಿಜಯ್ ವರ್ಮಾ (Vijay Varma) ವಿಷ್ಯವಾಗಿಯೂ ಸೌಂಡ್ ಮಾಡಿದ್ದಾರೆ. ಸದ್ಯ ಬಿಟೌನ್ ನಯಾ ಕಪಲ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ. ಈ ಕುರಿತ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ‘ಪಾರು’ ಸೀರಿಯಲ್ ನಟಿ
- Advertisement 2
ಕನ್ನಡದ ಜಾಗ್ವರ್, ಕೆಜಿಎಫ್ನಲ್ಲಿ (KGF) ಸೊಂಟ ಬಳುಕಿಸಿದ್ದ ನಟಿ ಹಿಂದಿ, ಮರಾಠಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. 50 ಪ್ಲಸ್ ಸ್ಟಾರ್ ನಾಯಕರಿಗೂ ನಾಯಕಿಯಾಗಿ ತಮನ್ನಾ ಅವರೇ ಬೇಕು ಅನ್ನೋವಷ್ಟರ ಮಟ್ಟಿಗೆ ಮಿಲ್ಕಿ ಬ್ಯೂಟಿ ಹವಾ ಕ್ರಿಯೇಟ್ ಮಾಡಿದ್ದಾರೆ.
- Advertisement 3
- Advertisement 4
ಸದ್ಯ ‘ಜೀ ಕರ್ದಾ’ (Jee kardha) ವೆಬ್ ಸಿರೀಸ್ನಲ್ಲಿ ಹಾಟ್ & ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಅನೇಕರ ಕೆಂಗಣ್ಣಿಗೆ ತಮನ್ನಾ ಗುರಿಯಾಗಿದ್ದಾರೆ. ಸದ್ಯ ‘ಲಸ್ಟ್ ಸ್ಟೋರಿಸ್ 2’ (Lust Stories 2) ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ವಿಜಯ್ ವರ್ಮಾ ಜೊತೆಗಿನ ಪ್ರೀತಿಯ ಬಗ್ಗೆ ತಮನ್ನಾ ಅಧಿಕೃತಗೊಳಿಸಿದ ಬೆನ್ನಲ್ಲೇ ಈ ಜೋಡಿ ಮಸ್ತ್ ಫೋಟೋಶೂಟ್ ಮಾಡಿಸಿದ್ದಾರೆ. ತಮನ್ನಾ ತೊಡೆ ಮೇಲೆ ವಿಜಯ್ ಮಲ್ಕೊಂಡಿದ್ದಾರೆ.
ಇತ್ತೀಚಿಗೆ ನಟಿ ವಿಜಯ್ ನನ್ನ ಖುಷಿಯ ಖಜಾನೆ ಎಂದು ಲವ್ ಬಗ್ಗೆ ರಿವೀಲ್ ಮಾಡಿದ್ರು. ಈಗ ಹೊಸ ಫೋಟೋಶೂಟ್ ಮೂಲಕ ವಿಜಯ್- ತಮನ್ನಾ ಸಂಚಲನ ಮೂಡಿಸಿದ್ದಾರೆ. ಕಪ್ಪು ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಈ ಜೋಡಿಯ ಹೊಸ ಫೋಟೋ ನೋಡ್ತಿದ್ದಂತೆ ಮದುವೆ ಯಾವಾಗ ಅಂತಾ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
‘ಲಸ್ಟ್ ಸ್ಟೋರಿಸ್ 2’ ಶೂಟಿಂಗ್ ಸಮಯದಲ್ಲಿ ವಿಜಯ್- ತಮನ್ನಾಗೆ ಪ್ರೇಮಾಂಕುರವಾಯಿತು. ಅಂದಿನಿಂದ ಈ ಜೋಡಿ ಡೇಟಿಂಗ್ ಮಾಡ್ತಿದ್ದಾರೆ. ಲಸ್ಟ್ ಸ್ಟೋರಿಸ್ನಲ್ಲಿ ಜೋಡಿಯಾಗಿ ನಟಿಸಿದ್ದಾರೆ.