ತಮನ್ನಾ ಭಾಟಿಯಾ (Tamannaah Bhatia) ಬಾಲಿವುಡ್‍ನಲ್ಲಿ `ಆಜ್ ಕಿ ರಾತ್’ ಅಂತಾ ಸೊಂಟ ಬಳುಕಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು. ಸ್ತ್ರೀ-2 ಸಿನಿಮಾದ ಹಾಡಿನ ಮೂಲಕ ಬಾಲಿವುಡ್‍ನಲ್ಲೂ (Bollywood) ಕಮಾಲ್ ಮಾಡಿದ್ದರು. ಇದಾದ ಬಳಿಕ ಒಂದರ ಮೇಲೊಂದರಂತೆ ತಮನ್ನಾ ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಒಡೆಲಾ-2 ಹಾಗೂ ರೇಡ್-2 ಸಿನಿಮಾದ ನಂತರ ಇದೀಗ ಮತ್ತೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರಂತೆ ಮಿಲ್ಕಿ ಬ್ಯೂಟಿ.
ಇನ್ನೊಂದು ವಿಶೇಷ ಅಂದರೆ ತಮನ್ನಾ ಬಾಲಿವುಡ್‍ನಲ್ಲೇ ಸೆಟ್ಲ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ 4 ಹಿಂದಿ ಸಿನಿಮಾಗಳನ್ನ ಒಪ್ಪಿಕೊಂಡಿರುವ ತಮನ್ನಾ, ರಾಗಿಣಿ ಎಂಎಂಎಸ್-3 (Ragini MMS 3) ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಸದ್ಯ ಸಂಚಲನವನ್ನ ಸೃಷ್ಟಿಸಿದೆ. ರಾಗಿಣಿ ಎಂಎಂಎಸ್-2 ಸಿನಿಮಾದಲ್ಲಿ ಮಾಜಿ ನೀಲಿತಾರೆ ಸನ್ನಿ ಲಿಯೋನ್ ನಟಿಸಿದ್ದರು. ಹಸಿ ಬಿಸಿ ದೃಶ್ಯಗಳ ಜೊತೆಗೆ ಹಾರರ್ ಟಚ್ ಕಥೆಯಾಧಾರಿತ ಈ ಸಿನಿಮಾ ಸಖತ್ ಸೌಂಡ್ ಮಾಡಿತ್ತು. ಇದನ್ನೂ ಓದಿ: ಬಾಲಿವುಡ್ ನಟ ಗೋವಿಂದ ಸಂಸಾರದಲ್ಲಿ ಬಿರುಕು; ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ
ಇದೀಗ ಈ ಸಿನಿಮಾದ ಪಾರ್ಟ್-3 ಬಗ್ಗೆ ನಿರ್ಮಾಪಕ ಏಕ್ತಾ ಕಪೂರ್ ಯೋಜನೆಯನ್ನ ಹಾಕಿಕೊಂಡಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕಾಗಿ ತಮನ್ನಾ ಅವರನ್ನ ಅಪ್ರೋಚ್ ಮಾಡಲಾಗಿದೆಯಂತೆ. ಈ ಸಿನಿಮಾ ಬಗ್ಗೆ ವ್ಯಾನ್ ಚಿತ್ರದ ಸೆಟ್‍ನಲ್ಲಿ ಏಕ್ತಾ ಕಪೂರ್ ಚರ್ಚಿಸಿದ್ದಾರಂತೆ. ಅಲ್ಲದೇ ಈ ಸಿನಿಮಾವನ್ನ ಬೇಗನೇ ಶುರುಮಾಡಿ, 2025ಡಿ ವರ್ಷಾಂತ್ಯಕ್ಕೆ ರಿಲೀಸ್ ಮಾಡುವ ಪ್ಲ್ಯಾನ್ ಹಾಕಿಕೊಂಡಿದ್ದಾರೆ ಎನ್ನಲಾಗ್ತಿದೆ. ತಮನ್ನಾ ಕೂಡಾ ಈ ಸಿನಿಮಾವನ್ನ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗ್ತಿದೆ. ಮಿಲ್ಕಿ ಬ್ಯೂಟಿ, ಬೋಲ್ಡ್ ಅವತಾರದಲ್ಲಿ ತಮನ್ನಾ ಕಾಣಿಸಿಕೊಳ್ತಾರಾ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಇದನ್ನೂ ಓದಿ: ಮೆಗಾಸ್ಟಾರ್‌ಗೆ 70ರ ಸಂಭ್ರಮ: ರಾಮ್ ಚರಣ್ ಸೆಲಬ್ರೇಷನ್