ಮುಂಬೈ: ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಚಾಲೆಂಜ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇದೆ. ಈ ವೈರಲ್ ಚಾಲೆಂಜ್ಗಳಲ್ಲಿ ಪಿಲ್ಲೋ ಚಾಲೆಂಜ್ ಕೂಡ ಒಂದಾಗಿದ್ದು, ಲಾಕ್ಡೌನ್ನಲ್ಲಿ ಮನೆಯಲ್ಲೇ ಇದ್ದು ಬೋರ್ ಆಗುತ್ತಿರುವ ಅನೇಕ ನಟಿಯರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಇತ್ತೀಚೆಗೆ ಗಾಯಕಿ ನೇಹಾ ಕಕ್ಕರ್, ನಟಿ ಪಾಯಲ್ ರಜಪೂತ್ ಪಿಲ್ಲೋ ಚಾಲೆಂಜ್ ಮಾಡಿ ಸಖತ್ ಸುದ್ದಿಯಾಗಿದ್ದರು. ಇದೀಗ ಟಾಲಿವುಡ್ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಕೂಡ ಪಿಲ್ಲೋ ಚಾಲೆಂಜ್ ಸ್ವೀಕರಿಸಿದ್ದು, ತಮನ್ನಾ ಹಾಟ್ ಲುಕ್ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
Advertisement
ತಮನ್ನಾ ಬಟ್ಟೆ ಹಾಕದೇ ದಿಂಬು ಕಟ್ಟಿಕೊಂಡು, ನೆಲದ ಮೇಲೆ ಮಲಗಿರುವ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಮಿಲ್ಕಿ ಬ್ಯೂಟಿಯ ಹೊಸ ಅವತಾರ ನೋಡಿ ಅಭಿಮಾನಿಗಳು ಕಾಮೆಂಟ್ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ವಾವ್ ತಮನ್ನಾ ಎಂದು ಕಮೆಂಟ್ ಮಾಡಿದರೆ, ಇನ್ನು ಕೆಲವರು ಲಕ್ಕಿ ಪಿಲ್ಲೋ ಎಂದು ಬರೆದಿದ್ದಾರೆ. ಮಿಲ್ಕಿ ಬ್ಯೂಟಿಯ ಈ ಹಾಟ್ ಪಿಲ್ಲೋ ಚಾಲೆಂಜ್ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
https://www.instagram.com/p/B_Z6JNmJX9k/
Advertisement
ಲಾಕ್ಡೌನ್ದಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ತಮನ್ನಾ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬರುತ್ತಾ, ಅಭಿಮಾನಿಗಳೊಂದಿಗೆ ಮಾತನಾಡುತ್ತಿರುತ್ತಾರೆ. ಇತ್ತೀಚೆಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವುದು, ವರ್ಕ್ಔಟ್ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ತಮನ್ನಾ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡುತ್ತಿದ್ದಾರೆ. ಅಲ್ಲದೇ ಕೊರೊನಾ ಲಾಕ್ಡೌನ್ ಅವಧಿಯಲ್ಲಿ ಮುಂಬೈನ ಸ್ಲಂ ನಿವಾಸಿಗಳಿಗೆ, ವೃದ್ಧಾಶ್ರಮಗಳಿಗೆ ಸೇರಿದಂತೆ ಸುಮಾರು 10 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ನೀಡಿ ಸಹಾಯ ಮಾಡಿದ್ದಾರೆ.
Advertisement
https://www.instagram.com/p/B-_28uep0-m/
ಬಣ್ಣದ ಬಣ್ಣದ ದಿಂಬುಗಳನ್ನೇ ಬಟ್ಟೆಯಂತೆ ಬರೀ ಮೈಗೆ ಅಡ್ಡವಿಟ್ಟುಕೊಂಡು, ಸೊಂಟಕ್ಕೆ ದಿಂಬಿಗೆ ಸೇರಿಸಿ ಒಂದು ಬೆಲ್ಟ್ ಹಾಕಿಕೊಂಡು ಫೋಟೋಗೆ ಪೋಸ್ ಕೊಟ್ಟು, ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಹಂಚಿಕೊಳ್ಳುವುದಕ್ಕೇ ಪಿಲ್ಲೋ ಚಾಲೆಂಜ್ ಎನ್ನುತ್ತಾರೆ.
ಹಲವು ಹಾಲಿವುಡ್ ನಟಿಯರು ಕೂಡ ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲದೇ ಟಾಲಿವುಡ್ ನಟಿ ಪಾಯಲ್ ರಾಜ್ಪೂತ್, ಬಾಲಿವುಡ್ ಗಾಯಕಿ ನೇಹಾ ಕಕ್ಕರ್ ಕೂಡ ಈ ಚಾಲೆಂಜ್ ಸ್ವೀಕರಿಸಿ ಫೋಟೋಗಳನ್ನು, ವಿಡಿಯೋಗಳನ್ನು ಪೋಸ್ಟ್ ಮಾಡಿ ಸಖತ್ ಸುದ್ದಿಯಾಗಿದ್ದಾರೆ.