ಕೊಪ್ಪಳ: ತಮ್ಮ ಅಭಿನಯದಿಂದ ಗಮನ ಸೆಳೆದಿರುವ ಚಿತ್ರನಟ ಯಶ್ (Yash) ರೈತರ ಅನುಕೂಲಕ್ಕಾಗಿ ಕೈಗೊಂಡಿರುವ ಕಾರ್ಯ ಈಗ ಆಕರ್ಷಣೆಯ ಕೇಂದ್ರವಾಗಿದೆ. ಯಶ್ ಅವರ ʻಯಶೋಮಾರ್ಗʼದ (Yasho Marga Foundation) ಸೇವಾ ಕಾರ್ಯ ಈಗ ಯಶಸ್ಸು ಕಂಡಿದೆ. ಯಶ್ ಕಾರ್ಯಕ್ಕೆ ರೈತರು ಖುಷಿಗೊಂಡಿದ್ದಾರೆ. ಕಳೆದ 14 ವರ್ಷದ ನಂತರ ಕೆರೆಯ ಕೊಡಿ ಬಿದ್ದಿದೆ. ಕೆರೆಯಿಂದ ನೀರು ಹರಿಯುತ್ತಿರುವುದು ಸಂತಸ ತಂದಿದೆ.
ಚಿತ್ರನಟ ಯಶ್ 2016 ರಲ್ಲಿ ಏನಾದರೂ ಸಮಾಜಿಕ ಕಾರ್ಯ ಮಾಡಬೇಕೆಂದು ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಕೆರೆ ಅಭಿವೃದ್ಧಿ ಪಡಿಸಿದರು. ಅವರ ಯಶೋಮಾರ್ಗ ಫೌಂಡೇಶನ್‌ನಿಂದ ಕೆರೆ ಅಭಿವೃದ್ದಿಗೆ ಚಾಲನೆ ನೀಡಿದ್ದರು. ಇದನ್ನೂ ಓದಿ: ಯಶ್ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ ಕೋಡಿ ಬಿತ್ತು – ಗ್ರಾಮಸ್ಥರಿಗೆ ಸಂತಸ
Advertisement
Advertisement
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ. ಈ ಭಾಗ ಒಣ ಭೂಮಿ ಪ್ರದೇಶವಾಗಿತ್ತು. ಅಂತರ್ಜಲ ಮಟ್ಟ ತೀರಾ ಕುಸಿದಿತ್ತು. ಈ ಸಂದರ್ಭದಲ್ಲಿ ಯಶ್ ಈ ಕೆರೆಯನ್ನು ಅಭಿವೃದ್ದಿ ಪಡಿಸಲು ಮುಂದಾದರು. ಅಂತರ್ಜಲಮಟ್ಟ ಹೆಚ್ಚಿಸಲು ಸ್ಥಳೀಯರು, ಜಲಮೂಲ ಸಂರಕ್ಷಣಾ ಮುಖಂಡರೊಂದಿಗೆ 2017 ರಲ್ಲಿ ತಲ್ಲೂರು ಕೆರೆಯನ್ನು 4 ಕೋಟಿ ರೂಪಾಯಿಯಲ್ಲಿ ಅಭಿವೃದ್ದಿ ಪಡಿಸಿದ್ದಾರೆ.
Advertisement
96 ಎಕರೆ ವಿಸ್ತಾರವಿರುವ ತಲ್ಲೂರು ಕೆರೆಯು (Tallur Lake) 1,038 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಇಲ್ಲಿರುವ ಕೆರೆಯು ಹೂಳು ತುಂಬಿತ್ತು. ಸುತ್ತಲಿನ 14 ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದಿತ್ತು. ಕೆರೆ ಅಭಿವೃದ್ದಿಪಡಿಸಿದ ನಂತರ ಈಗ ಅಂತರ್ಜಲಮಟ್ಟ ಹೆಚ್ಚಳವಾಗಿದೆ. ಈ ಮಧ್ಯೆ ಈಗ ಇದೇ ಕೆರೆಯು ಭರ್ತಿಯಾಗಿ ಕೊಡಿ ಬಿದ್ದಿದೆ. ಇದರಿಂದ ರೈತರು ಸಂತಸಗೊಂಡಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು
Advertisement
ಈ ಕೆರೆಯು 2008 ರಲ್ಲಿ ಭರ್ತಿಯಾಗಿ ಕೊಡಿ ಬಿದ್ದಿತ್ತು. ಅದರ ನಂತರ ಯಶ್ ಕೆರೆ ಅಭಿವೃದ್ದಿ ಪಡಿಸಿದರು. ಇದೇ ವೇಳೆ ಕಳೆದು ಮೂರು ನಾಲ್ಕು ವರ್ಷದಿಂದ ಉತ್ತಮ ಮಳೆಯಾಗುತ್ತಿದೆ. ಈ ಮಳೆಗೆ ಕೆರೆ ಭರ್ತಿಯಾಗಿತ್ತು. ಆದರೆ ಕೊಡಿ ಬಿದ್ದಿರಲಿಲ್ಲ. ಈ ಮಧ್ಯೆ ಕಳೆದ ಎರಡು ದಿನಗಳಿಂದ ಭರ್ಜರಿ ಮಳೆಯಾದ ಕಾರಣ ಕೆರೆಯಲ್ಲಿ ಕೊಡಿ ಬಿದ್ದಿದೆ. ಇದರಿಂದ ತಲ್ಲೂರು ಸೇರಿ ಸುತ್ತಲಿನ ಗ್ರಾಮಸ್ಥರು ಸಂತಸಗೊಂಡಿದ್ದಾರೆ.
ಇಂದು ಮುಂಜಾನೆ ನೂರಾರು ಜನ ಕೆರೆಗೆ ಭೇಟಿ ನೀಡಿ ದೃಶ್ಯ ನೋಡಿ ಆನಂದಿಸಿದ್ದಾರೆ. ಒಟ್ನಲ್ಲಿ ಯಶೋಮಾರ್ಗದ ಮೂಲಕ ನಟ ಯಶ್ ಅವರ ಸಂಕಲ್ಪ ಈಗ ಫಲ ಕಂಡಿದೆ. ಹತ್ತಾರು ಗ್ರಾಮಗಳ ರೈತರ ಬದುಕಿಗೆ ಆಸರೆಯಾಗಿದೆ.