Dakshina KannadaDistrictsKarnatakaLatestMain Post

ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು

- ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರಿಗೂ ತರಬೇತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಫ್‍ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಸ್ಫೋಟಕ ವಿಚಾರವೊಂದು ಬಯಲಾಗಿದೆ.

ಹೌದು. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ವಿವಿಧ ಕಡೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಟೆರರ್ ಆಕ್ಟಿವಿಟೀಸ್ ನಡೆಯುತ್ತಿತ್ತು. ಬಂಟ್ವಾಳ, ಪುತ್ತೂರು, ಸುಳ್ಯದ ಕೆಲ ಅಜ್ಞಾತ ಪ್ರದೇಶಗಳಲ್ಲಿ ಟ್ರೈನಿಂಗ್ ನೀಡಲಾಗುತ್ತಿತ್ತು. ಇದರಲ್ಲಿ ಬಂಟ್ವಾಳ ತಾಲೂಕಿನ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್ (Freedom Community Hall) ಕೂಡ ಒಂದು. ಟ್ರಸ್ಟ್ ಹೆಸರಿನಲ್ಲಿ ಇಲ್ಲಿ ಸಾಕಷ್ಟು ಯುವಕರಿಗೆ ಇಲ್ಲಿ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ.  ಇದನ್ನೂ ಓದಿ: ಬ್ಯಾನ್ ಆದ ಪಿಎಫ್‌ಐ ಹೆಸರಲ್ಲಿ ಚಟುವಟಿಕೆ ನಡೆಸಿದ್ರೆ ಕಾನೂನು ಕ್ರಮ: ಆರಗ ಜ್ಞಾನೇಂದ್ರ

ಟ್ರಸ್ಟ್ ಹೆಸರಿನಲ್ಲಿ ಈ ಹಾಲ್ 2007 ರಲ್ಲಿ ಆರಂಭವಾಗಿದ್ದು, ಅಂದಿನಿಂದ ಈವರೆಗೂ ಸಾವಿರಾರು ಯುವಕರಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಕೋರರು ಕೂಡ ಇಲ್ಲೇ ತರಬೇತಿ ಆಗಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ (NIA) ಯಿಂದ ಈ ಹಾಲ್ ಗೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಓರ್ವ ಟ್ರಸ್ಟಿ ಅಯೂಬ್ ಅಗ್ನಾಡಿಯನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಟ್ರಸ್ಟಿಗಳು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಹಿನ್ನೆಲೆಯಲ್ಲಿ ಹಾಲ್ ನ್ನು ಸೀಜ್ ಮಾಡಲು ಎನ್‍ಐಎ ಸೂಚನೆ ನೀಡಿದೆ ಎನ್ನಲಾಗಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಮುಖಂಡ ಶರತ್ ಮಡಿವಾಳ ಹತ್ಯೆಗೂ ಫ್ರೀಡಂ ಕಮ್ಯುನಿಟಿ ಹಾಲ್ ಗೂ ಲಿಂಕ್ ಇದೆ ಎನ್ನಲಾಗುತ್ತಿದೆ. ಶರತ್ ಮಡಿವಾಳ (Sharath Madivvala) ಹಂತಕರು ಕೂಡ ಇಲ್ಲೇ ಟ್ರೈನಿಂಗ್ ಪಡೆದಿದ್ದು, ಇದೇ ಹಾಲ್ ನಲ್ಲಿ ಮೀಟಿಂಗ್ ಮಾಡಿ ಹತ್ಯೆಗೆ ಪ್ಲಾನ್ ಮಾಡಲಾಗಿದೆ ಎನ್ನುವ ಹಳೆಯ ಸತ್ಯ ಎನ್‍ಐಎ ತನಿಖೆಯಲ್ಲಿ ಹೊರಬರುತ್ತಿದೆ.

Live Tv

Leave a Reply

Your email address will not be published. Required fields are marked *

Back to top button