ಬೆಂಗಳೂರು: ಕಾಂಗ್ರೆಸ್ ಪಕ್ಷದ ವಿರುದ್ಧ ನಿರಂತರವಾಗಿ ಅಸಮಾಧಾನ ವ್ಯಕ್ತಪಡಿಸುತ್ತಾ, ಬಂಡಾಯದ ಭಾವುಟ ಹಿಡಿದಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಲೀಡರೇ ಅಲ್ಲ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಧಾನಕ್ಕೆ ಡಿಕೆ ಶಿವಕುಮಾರ್ ಸಿದ್ಧ ಎಂಬ ಹೇಳಿಕೆಗೆ ತಿರುಗೇಟು ನೀಡಿದರು. ಡಿಕೆ ಶಿವಕುಮಾರ್ ಲೀಡರೇ ಅಲ್ಲ. ನಮ್ಮ ರೇಂಜ್ ಏನಿದ್ರೂ ರಾಹುಲ್ ಗಾಂಧಿ ಎಂದು ಹೇಳಿದರು. ಆ ಮೂಲಕ ಮತ್ತೊಮ್ಮೆ ರಾಹುಲ್‍ರೊಂದಿಗೆ ಚರ್ಚೆ ನಡೆಸುತ್ತರಾ ಎನ್ನುವ ಪ್ರಶ್ನೆ ಎದ್ದಿದೆ.
Advertisement
Advertisement
ರಮೇಶ್ ಜಾರಕಿಹೊಳಿ ಅವರ ಈ ಹೇಳಿಕೆ ಆಪರೇಷನ್ ಕಮಲ ಈ ಬಾರಿಯೂ ವಿಫಲವಾಗಲಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದ್ದು. ರಾಹುಲ್ ಗಾಂಧಿ ಮನವೊಲಿಸಿದರೆ ಕಾಂಗ್ರೆಸ್‍ನಲ್ಲೇ ಉಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
Advertisement
ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್ ಅವರು, ಶಾಸಕ ರಮೇಶ್ ಜಾರಕಿಹೋಳಿ ರಾಜೀನಾಮೆ ವಿಚಾರವನ್ನ ಪಕ್ಷದ ನಾಯಕರು, ಜಿಲ್ಲಾ ಉಸ್ತುವಾರಿ ಸಚಿವರು ನೋಡಿಕೊಳ್ಳುತ್ತಾರೆ. ಅವರು ಎಲ್ಲವನ್ನೂ ಗಮನಿಸುತ್ತಾರೆ. ನಾವು ಮನವೊಲಿಸಲು ಪ್ರಯತ್ನ ಪಟ್ಟೆವು, ಆದರೆ ನಾನು ಮನವೊಲಿಸಲು ಅವರು ಸಿಕ್ಕರೆ ತಾನೇ? ಸಿಕ್ಕರೆ ನಾನು ಅವರ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಅಲ್ಲದೇ ಇಲ್ಲಿಯವರೆಗೂ ಅವರನ್ನ ಗೌರವದಿಂದ ಕಂಡಿದ್ದೇವೆ. ಪಕ್ಷ ಶಾಸಕ, ಸಚಿವ ಸ್ಥಾನ ಎಲ್ಲವನ್ನೂ ಅವರಿಗೆ ನೀಡಿದೆ. ಅವರಿಗೆ ಉಸಿರುಕಟ್ಟುವಂತೆ ಏನಾಗಿದೆಯೋ ಗೊತ್ತಿಲ್ಲ. ಭಗವಂತ ಅವರ ಆಸೆ ಈಡೇರಿಸುವಂತೆ ಮಾಡಲಿ ಎಂದು ಹೇಳಿ ಟಾಂಗ್ ನೀಡಿದ್ದರು.