ಬಿಗ್ ಬಾಸ್ (Bigg Boss) ಮನೆಯಲ್ಲಿ ರಕ್ಷಿತಾ-ಸ್ಪಂದನಾ (Rakshitha-Spandana) ಕಿತ್ತಾಟ ತಾರಕಕ್ಕೇರಿದೆ. ಮಾಳು ವಿಚಾರವನ್ನು ಮುಂದಿಟ್ಟುಕೊಂಡು ಇಬ್ಬರೂ ಜಗಳ ಮಾಡಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ, ಸ್ಪಂದನಾಗೆ ರಕ್ಷಿತಾ ಟಾಂಗ್ ಕೊಟ್ಟಿದ್ದಾರೆ. ಅದಕ್ಕೆ ಪ್ರತಿಯಾಗಿ ಸ್ಪಂದನಾ ಕೂಡ ಕೌಂಟರ್ ಕೊಟ್ಟಿದ್ದಾರೆ. ಮನೆಯಿಂದ ಎಲಿಮಿನೇಟ್ ಆಗಿರುವ ಮಾಳು ವಿಚಾರವನ್ನು ಮುಂದಿಟ್ಟುಕೊಂಡು ಇಬ್ಬರೂ ಕಿತ್ತಾಡಿಕೊಂಡಿದ್ದಾರೆ. ಇದನ್ನೂ ಓದಿ: ಕೆಲ್ಸ ಮಾಡದೇ ಕೆಲ್ಸ ಮಾಡ್ಸೋಕೆ ನಿಂತ ಗಿಲ್ಲಿ – ಕಿಚನ್ ವಾರ್‌ನಲ್ಲಿ ಕ್ಯಾಪ್ಟನ್ Vs ಅಶ್ವಿನಿ
ಮಾಳು ಮನೆಯಂದ ಹೊರಹೋಗೋಕೆ ರಕ್ಷಿತಾ ಕಾರಣನಾ?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9:30 | ಶನಿ-ಭಾನು ರಾತ್ರಿ 9#BiggBossKannada12 #BBK12 #ColorsKannada #AdeBeruHosaChiguru #ಕಲರ್‌ಫುಲ್‌ಕತೆ #colorfulstory #KicchaSudeep #ExpectTheUnexpected #CKPromo pic.twitter.com/gTOLYGrTgj
— Colors Kannada (@ColorsKannada) December 30, 2025
ಇತ್ತೀಚಿನ ದಿನಗಳಲ್ಲಿ ಕಾವ್ಯ ಮತ್ತು ಸ್ಪಂದನಾ ಇಬ್ಬರನ್ನೂ ರಕ್ಷಿತಾ ಹೆಚ್ಚಾಗಿ ಟಾರ್ಗೆಟ್ ಮಾಡ್ತಿದ್ದಾರೆ. ಸೋಮವಾರದ ನಾಮಿನೇಟ್‌ಗೆ ಇವರಿಬ್ಬರ ಹೆಸರನ್ನೇ ತೆಗೆದುಕೊಂಡಿದ್ದರು. ಈಗಲೂ ಅದೇ ಆಟವನ್ನು ಮುಂದುವರಿಸಿದ್ದಾರೆ. ವ್ಯಕ್ತಿತ್ವದಲ್ಲಿ ಸ್ಪಂದನಾಗಿಂತ ಮಾಳು ಅಣ್ಣ ಬೆಟರ್ ಇದ್ರು ಅಂತ ರಕ್ಷಿತಾ ಹೇಳ್ತಾರೆ. ಅದಕ್ಕೆ ಸ್ಪಂದನಾ ರಿಯಾಕ್ಟ್ ಮಾಡಿ, ‘ಬೇರೆಯವರನ್ನು ಪೋರ್ಟ್ರೇ ಮಾಡೋದು.. ಆಟ ಆಡೋದು’ ಅಂತ ಹೇಳ್ತಾರೆ.
ಮತ್ತೆ ರಕ್ಷಿತಾ ಮಾತನಾಡಿ, ‘ಮನೆಯಲ್ಲಿ ನನ್ನ ಅಭಿಪ್ರಾಯ ಪ್ರಶ್ನೆ ಮಾಡೋದಕ್ಕೆ ಯಾರಿಗೂ ಅಧಿಕಾರ ಕೊಟ್ಟಿಲ್ಲ’ ಅಂತ ಹೇಳ್ತಾರೆ. ರೇಜಿಗೆ ಹೋದ ಸ್ಪಂದನಾ, ‘ಮನೆಯಲ್ಲಿ ನಿನ್ನ ಅಭಿಪ್ರಾಯವನ್ನ ನೀನು ಹೆಂಗೆ ಕೊಡ್ತೀಯೋ.. ನನ್ನ ಅಭಿಪ್ರಾಯವನ್ನೂ ನಾನು ಕೊಡ್ಬೋದು.. ಮಾಳು ಅಣ್ಣ ಹೊರಗೆ ಹೋಗೋದಕ್ಕೆ ನೀನೇ ಕಾರಣ.. ಮಾಳು ಅಣ್ಣ ಮಾತಾಡ್ಬೇಕಾದ ಜಾಗದಲ್ಲಿ ನೀನೇ ಮಾತಾಡಿ, ಅವರನ್ನ ಮನೆಗೆ ಕಳಿಸಿದ್ದೀಯಾ’ ಅಂತ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: BBK 12 | ಬೆಂಗ್ಳೂರಿಗೆ ಬಂದಾಗ ಇರೋಕೆ ಜಾಗ ಇರಲಿಲ್ಲ – ದೊಡ್ಮನೆಯಲ್ಲಿ ಕಣ್ಣೀರಿಟ್ಟ ಸ್ಪಂದನಾ
ಒಟ್ನಲ್ಲಿ ರಕ್ಷಿತಾ ವರ್ಸಸ್ ಸ್ಪಂದನಾ-ಕಾವ್ಯ ಜಗಳ ಮನೆಯಲ್ಲಿ ಮುಗಿಯದಂತೆ ಕಾಣ್ತಿದೆ. ಒಂದಲ್ಲ ಒಂದು ವಿಚಾರಕ್ಕೆ ಪರಸ್ಪರರು ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದಾರೆ. ಟಾರ್ಗೆಟ್ ಮಾಡ್ತಿದ್ದಾರೆ. ಈ ಜಿದ್ದಿನಲ್ಲಿ ಗೆಲ್ಲೋದ್ಯಾರು, ಸೋಲೋದ್ಯಾರು ಕಾದುನೋಡಬೇಕಿದೆ.

