– ದಲಿತರನ್ನು ಸೋಲಿಸಿದ್ದೀರಿ ಎಂದು ಖರ್ಗೆ ಅಳುತ್ತಾರೆ
– ಆ ಕ್ಷೇತ್ರದ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ
– ಆ ಕ್ಷೇತ್ರದ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ
ನವದೆಹಲಿ: 1.70 ಕೋಟಿ ಜನ್ ಧನ್ (Jan Dhan) ಖಾತೆಯನ್ನು ತೆರೆಯಲಾಗಿದೆ. ಕಲಬುರಗಿಯಲ್ಲಿ 8 ಲಕ್ಷ ಖಾತೆಗಳು ತೆರೆದಿವೆ. ದಲಿತರನ್ನು ಸೋಲಿಸಿದ್ದೀರಿ ಎಂದು ಖರ್ಗೆ ಅಳುತ್ತಾರೆ. ಆದರೆ ಅಲ್ಲಿಯ ಜನರು ಮತ್ತೊಬ್ಬ ದಲಿತನನ್ನು ಆಯ್ಕೆ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆಗೆ (Mallikarjun Kharge) ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದರು.
ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಕಳೆದ 3-4 ವರ್ಷಗಳಲ್ಲಿ ಸುಮಾರು 11 ಕೋಟಿ ಮನೆಗಳು ನಲ್ಲಿ ನೀರಿನ ಸಂಪರ್ಕ ಪಡೆದಿವೆ. ನಾವು ಜನ್ ಧನ್ ಖಾತೆ ಆಂದೋಲನವನ್ನು ಪ್ರಾರಂಭಿಸಿದ್ದೇವೆ. ಕಳೆದ 9 ವರ್ಷಗಳಲ್ಲಿ ದೇಶಾದ್ಯಂತ 48 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ. ಕರ್ನಾಟಕದಲ್ಲಿ 1.70 ಕೋಟಿ ಖಾತೆ ತೆರೆದಿವೆ. ನಾವು ಶಾಶ್ವತ ಪರಿಹಾರಗಳತ್ತ ಸಾಗುತ್ತಿದ್ದೇವೆ. ವಿಷಯಗಳನ್ನು ಎತ್ತಿಕೊಂಡು ಸಮಸ್ಯೆಗಳನ್ನು ಸೃಷ್ಟಿಸಿದ ನಂತರ ನಾವು ಓಡಿಹೋಗುವುದಿಲ್ಲ. ನಾವು ದೇಶದ ಪ್ರಮುಖ ಅಗತ್ಯಗಳ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಪರಿಹಾರಗಳನ್ನು ಹುಡುಕುತ್ತೇವೆ ಎಂದು ಹೇಳಿದರು.
Advertisement
Advertisement
ಪ್ರತಿ ಬಾರಿ ನಾನು ಕಲಬುರಗಿಗೆ ಭೇಟಿ ನೀಡಿದಾಗ ದಲಿತನನ್ನು ಸೋಲಿಸಲಾಗಿದೆ ಎಂದು ಖರ್ಗೆ ಆರೋಪ ಮಾಡುತ್ತಾರೆ. ಖರ್ಗೆ ಅವರು ಕಲಬುರಗಿಯಲ್ಲಿ ಆಗಿರುವ ಕೆಲಸವನ್ನು ನೋಡಬೇಕು. ಕರ್ನಾಟಕದಲ್ಲಿ (Karnataka) 1.70 ಕೋಟಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ. ಅದರಲ್ಲೂ ಕಲಬುರಗಿಯಲ್ಲಿ 8 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ತೆರೆಯಲಾಗಿದೆ. ಎಷ್ಟೋ ಜನರು ಖಾತೆ ತೆರೆಯುತ್ತಿರುವಾಗ ಯಾರದ್ದೋ ಒಬ್ಬರದ್ದು ಖಾತೆ ಮುಚ್ಚುತ್ತಿದೆ. ನನಗೆ ನೋವು ಅರ್ಥವಾಗುತ್ತದೆ ಎಂದು ಹೇಳಿ ಕಾಲೆಳೆದರು.
Advertisement
ತಂತ್ರಜ್ಞಾನದ ಶಕ್ತಿಯಿಂದ ನಾವು ಕಾರ್ಮಿಕ ಸಂಸ್ಕೃತಿಯನ್ನು ಪರಿವರ್ತಿಸಿದ್ದೇವೆ. ವೇಗವನ್ನು ಹೆಚ್ಚಿಸುವುದು ಮತ್ತು ಪ್ರಮಾಣವನ್ನು ಹೆಚ್ಚಿಸುವುದರ ಮೇಲೆ ನಮ್ಮ ಗಮನವಿದೆ. ಸಬ್ ಕಾ ಸಬ್ ಕಾ ವಿಕಾಸ್ ಅರ್ಥ ಎಲ್ಲರಿಗೂ ಯೋಜನೆಗಳನ್ನು ತಲುಪಿಸುವುದಾಗಿದೆ ಎಂದರು.
Advertisement
ಆದಿವಾಸಿಗಳ ವಿಚಾರದಲ್ಲಿ ಹಿಂದಿನ ಸರ್ಕಾರದ ನಿಯತ್ತಾಗಿ ಕೆಲಸ ಮಾಡಿದ್ದರೆ, ಇಂದು ನಾನು ಇಷ್ಟು ಶ್ರಮ ಹಾಕುವ ಪ್ರಮೇಯ ಬರುತ್ತಿರಲಿಲ್ಲ. ಇಂದು ನಾವು ಆದಿವಾಸಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿದೆ. 3 ಕೋಟಿ ಆದಿವಾಸಿ ಜನರ ಜೀವನದಲ್ಲಿ ಬದಲಾವಣೆ ತಂದಿದ್ದೇವೆ. ನಿಜವಾದ ಜಾತ್ಯತೀತತೆ ಎಂದರೆ ಸರ್ಕಾರಿ ಯೋಜನೆಗಳ ಪ್ರಯೋಜನಗಳು ಎಲ್ಲಾ ಅರ್ಹ ಫಲಾನುಭವಿಗಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.
ಈ ವೇಳೆ ಪ್ರತಿಪಕ್ಷಗಳ ಸಂಸದರು ಮೋದಿ- ಅದಾನಿ ಭಾಯಿ- ಭಾಯಿ ಎಂದು ಘೋಷಣೆ ಕೂಗುತ್ತಿದ್ದಾಗ ಖರ್ಗೆ ಅವರು ಪ್ರಧಾನಿ ಏನು ಹೇಳುತ್ತಿದ್ದಾರೆ ಎಂಬುದರ ಬಗ್ಗೆ ತಮ್ಮ ಹೆಡ್‍ಫೋನ್ ಅನ್ನು ಕಿವಿಗೆ ಒತ್ತಿಕೊಂಡಿರುವುದು ಕಂಡುಬಂತು.
ಖರ್ಗೆ ಹೇಳಿದ್ದೇನು?: ಪ್ರಧಾನಿ ಅವರು ಸದನದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕು. ಆದರೆ ನಾನಿಲ್ಲಿ ಸದನದಲ್ಲಿ ಮಾತನಾಡುತ್ತಿದ್ದರೆ ಮೋದಿ ನನ್ನ ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ ಎಂದು ಕಿಡಿಕಾರಿದ್ದರು. ಇದನ್ನೂ ಓದಿ: ಹೆಚ್‌ಡಿಕೆ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನ ಒಡೆಯುತ್ತಿದ್ದಾರೆ : ಸಿಪಿವೈ
ನಮ್ಮ ಜವಾಬ್ದಾರಿಯುತ ಸಚಿವರು, ಸಂಸದರು ಹಿಂದೂ- ಮುಸ್ಲಿಂ ವಿಚಾರ ವಿವಾದ ಸೃಷ್ಟಿಸುತ್ತಿದ್ದಾರೆ. ಅವರಿಗೆ ಬೇರೆ ಯಾವುದೇ ವಿಷಯ ಸಿಗುವುದಿಲ್ಲವೇ? ಪರಿಶಿಷ್ಟ ಜಾತಿಯವರು ದೇವಸ್ಥಾನ ಪ್ರವೇಶಿಸಿದಕ್ಕೆ ಹಲ್ಲೆ ಮಾಡಲಾಗುತ್ತಿದೆ. ಅವರನ್ನು ಹಿಂದೂ ಎಂದು ಪರಿಗಣಿಸಿದ್ದರೆ, ಎಸ್‍ಸಿಗಳಿಗೆ ದೇವಾಲಯ ಪ್ರವೇಶಿಸಲು ಏಕೆ ಅವಕಾಶ ನೀಡುತ್ತಿಲ್ಲ ಅಥವಾ ಅವರಿಗೆ ಸುಶಿಕ್ಷಿತರಾಗಲು ಏಕೆ ಬಿಡುತ್ತಿಲ್ಲ? ಎಸ್‍ಸಿಗಳ ಮನೆಗಳಲ್ಲಿ ಊಟ ಮಾಡುವ ಫೋಟೋಗಳೊಂದಿಗೆ ಅನೇಕ ಸಚಿವರು ಶೋ ಆಫ್ ಮಾಡುತ್ತಿದ್ದಾರೆ ಎಂದು ಖರ್ಗೆ ಟೀಕಾಪ್ರಹಾರ ನಡೆಸಿದ್ದರು. ಇದನ್ನೂ ಓದಿ: ಹೆಚ್‌ಡಿಕೆಯ ಬ್ರಾಹ್ಮಣ ಸಿಎಂ ಹೇಳಿಕೆಗೆ ಮಹತ್ವ ಕೊಡುವ ಅಗತ್ಯವಿಲ್ಲ: ಬಿಎಸ್‌ವೈ
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k