ರಾಮನಗರ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಅವರಿಗೆ ಅಭದ್ರತೆ ಕಾಡುತ್ತಿದೆ. ಹಾಗಾಗಿ ಒಕ್ಕಲಿಗರನ್ನು ಓಲೈಸಲು ಬೇರೆ ಸಮುದಾಯಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ (CP Yogeshwar) ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದಲ್ಲಿ ಸ್ವಾಭಿಮಾನಿ ಸಂಕಲ್ಪ ನಡಿಗೆ ಕಾರ್ಯಕ್ರಮದ ವೇಳೆ ಬ್ರಾಹ್ಮಣ ಸಮುದಾಯದ ಬಗ್ಗೆ ಹೆಚ್‌ಡಿಕೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಒಕ್ಕಲಿಗರನ್ನು ಓಲೈಸಲು ಬೇರೆ ಬೇರೆ ಸಮುದಾಯಗಳನ್ನು ಕುಮಾರಸ್ವಾಮಿ ಒಡೆಯುತ್ತಿದ್ದಾರೆ. ಇದು ಬಹಳ ದಿನಗಳ ಕಾಲ ನಡೆಯಲ್ಲ. ಹಿಂದೆಯೂ ಹೀಗೆ ಮಾಡಿದ್ದರು. ಸಿದ್ದರಾಮಯ್ಯನ ವಿರುದ್ಧ ಹೇಳಿಕೆ ಕೊಟ್ಟು ಕೊಟ್ಟು ಒಕ್ಕಲಿಗರ ಪ್ರಚೋದನೆ ಮಾಡಿ ಒಂದಷ್ಟು ಸೀಟ್‌ಗಳನ್ನು ಗೆದ್ದಿದ್ದರು. ಆದರೆ ಈಗ ಜನ ಅರ್ಥ ಮಾಡಿಕೊಂಡಿದ್ದಾರೆ. ಈ ರೀತಿಯ ದ್ವೇಷದ ರಾಜಕಾರಣದಿಂದ ಏನೂ ಪ್ರಯೋಜನ ಆಗಲ್ಲ ಎಂದು ತಿರುಗೇಟು ನೀಡಿದರು.
ಪ್ರಹ್ಲಾದ್ ಜೋಶಿಯವರನ್ನ (Pralhad Joshi) ಸಿಎಂ ಮಾಡ್ತಾರೆ ಎಂಬ ವಿಚಾರದ ಬಗ್ಗೆ ಮಾತನಾಡಿ, ಬಿಜೆಪಿಯಲ್ಲಿ (BJP) ಯಾರು ಬೇಕಾದ್ರೂ ಸಿಎಂ ಆಗ್ತಾರೆ. ನಮ್ಮದು ರಾಷ್ಟ್ರೀಯ ಪಕ್ಷ. ನಮಗೆ ಬಹುಮತ ಬಂದಾಗ ಯಾರು ಸಿಎಂ ಅಂತ ವರಿಷ್ಠರು ತೀರ್ಮಾನ ಮಾಡುತ್ತಾರೆ. ಪ್ರಹ್ಲಾದ್ ಜೋಶಿ ಯಾಕೆ ಸಿಎಂ ಆಗಬಾರದು. ಅವರು ಈಗಾಗಲೇ ಕೇಂದ್ರ ಸಚಿವರಾಗಿದ್ದಾರೆ. ಒಳ್ಳೆಯ ಆಡಳಿತ ಕೊಡುತ್ತಿದ್ದಾರೆ. ಅವ್ರು ಸಿಎಂ ಆದ್ರೂ ತಪ್ಪೇನು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂಪರ್ ಕೊಡುಗೆ ಸುಳಿವು ನೀಡಿದ ಸಚಿವ ಸುಧಾಕರ್
ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಭಯ ಶುರುವಾಗಿದೆ. ಅವರಿಗೆ ಯಾವುದೇ ಸಮುದಾಯದ ಪೂರ್ಣ ಬೆಂಬಲ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬಲಿಷ್ಠವಾಗುತ್ತಿದೆ. ಹಾಗಾಗಿ ಅವರಿಗೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿ ಏನೇನೋ ಹೇಳಿಕೆ ಕೊಡ್ತಿದ್ದಾರೆ ಎಂದು ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: BJP ಮುಖಂಡನಿಂದ ಭರ್ಜರಿ ಆಫರ್ – ಸೀರೆಗಾಗಿ ನಾರಿಯರ ನೂಕು ನುಗ್ಗಲು
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k