ಬೆಂಗಳೂರು: ನಿರೀಕ್ಷೆಯಂತೆ ಸದನದಲ್ಲಿ ಪಿಎಸ್‍ಐ (PSI) ನೇಮಕಾತಿ ಹಗರಣ ಪ್ರತಿಧ್ವನಿಸಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಸರ್ಕಾರದ ಮೇಲೆ ಮುಗಿಬಿದ್ರು. ಪ್ರಕರಣದಲ್ಲಿ ಪಾಲ್ಗೊಂಡಿರೋ ರಾಜಕಾರಣಿಗಳ ಬಂಧನಕ್ಕೆ ಒತ್ತಾಯಿಸಿದ್ರು.
Advertisement
ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒತ್ತಾಯಿಸಿದರು. ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಜೋರು ವಾಗ್ಯುದ್ಧ ನಡೆಯಿತು. ಸದನದ ಬಾವಿಗಿಳಿದು ಕಾಂಗ್ರೆಸ್ (Congress) ಸದಸ್ಯರು ಪ್ರತಿಭಟನೆ ನಡೆಸಿದ್ರು. ಉದ್ಯೋಗಾಂಕ್ಷಿಗಳು ನೀಡಿದ್ದ ಅಕ್ಕಿ, ಬೇಳೆಯ ಗಂಟನ್ನು ಸಿದ್ದರಾಮಯ್ಯ ತೋರಿಸಿದ್ದಕ್ಕೆ ಇದೆಲ್ಲಾ ಇವೆಂಟ್ ಮ್ಯಾನೇಜ್‍ಮೆಂಟ್ ಎಂದು ಸಿಎಂ ತಿರುಗೇಟು ನೀಡಿದರು. ಆಗ ನೀವೆಷ್ಟೇ ಹೆದರಿಸಲು ನೋಡಿದ್ರೂ ನಾನು ಹೆದರಲ್ಲ. 2006ರಿಂದಲೂ ತನಿಖೆ ಮಾಡಿಸಿ, ಐ ಡೋಂಟ್ ಕೇರ್ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ರು. ಇದನ್ನೂ ಓದಿ: ಯಾರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡ್ತೀನಿ: ಭವಾನಿ ರೇವಣ್ಣ
Advertisement
ಇರುವ ದಾಖಲೆಗಳನ್ನು ಸಾಕ್ಷಿ ಎಂದು ಒಪ್ಪಿಕೊಳ್ಳದ @siddaramaiah ಅವರು ತಮ್ಮ ಕಾಲದ ಹಗರಣಗಳನ್ನು ಪ್ರಸ್ತಾಪಿಸುತ್ತಿದ್ದಂತೆ ತಾಳ್ಮೆ ಕಳೆದುಕೊಳ್ಳುತ್ತಾರೆ. ತನಿಖೆ ನಡೆಸಿ ಎಂದು ಹೇಳುವ @INCKarnataka ಇದುವರೆಗಿನ ತಮ್ಮ ಮೇಲಿನ ಎಲ್ಲಾ ತನಿಖೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದೆ.#ಭ್ರಷ್ಟಕಾಂಗ್ರೆಸ್ pic.twitter.com/GAv58FAJs5
— BJP Karnataka (@BJP4Karnataka) September 20, 2022
Advertisement
ಜನರ ಬಳಿಗೆ ಹೋಗೋಣ ಬನ್ನಿ ಎಂಬ ಸಿಎಂ ಮಾತಿಗೆ, ಸಿದ್ದರಾಮಯ್ಯ ಕೂಡ ಸೈ ಅಂದ್ರು. ಪೊಲೀಸ್ ನೇಮಕಾತಿ ಹಗರಣ ನಿಮ್ ಕಾಲದಲ್ಲಿ ಆಗಿತ್ತು ಎಂಬ ಸಿಎಂ ಮಾತಿಗೆ, ಸಿದ್ದರಾಮಯ್ಯ ಗರಂ ಆದ್ರು. ಹೌದಪ್ಪ.. ಆಗ ನೀವೇನು ಮಾಡ್ತಿದ್ರಿ ಎಂದು ಪ್ರಶ್ನೆ ಮಾಡಿದರು. ಕೊನೆಗೂ ಒಪ್ಕೊಂಡ್ರಲ್ಲಾ ಎಂದು ಬಸವರಾಜ್ ಬೊಮ್ಮಾಯಿ (Basavaraj Bommai) ಕಾಲೆಳೆದ್ರು. ದಡೆಸುಗೂರ್ ಪ್ರಕರಣವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಆದರೆ ಅದು ಬರೀ ಆರೋಪ ಅಷ್ಟೇ ಎಂದ ದಡೆಸುಗೂರ್, ನಿಮ್ ಕಾಲದಲ್ಲಿ ಏನೇನೋ ಆಗಿದೆ ಎನ್ನುತ್ತಾ ಸ್ಕ್ಯಾಮ್‍ರಾಮಯ್ಯ ಎಂಬ ಭಿತ್ತಿ ಪತ್ರ ತೋರಿಸಿದ್ರು.
Advertisement
ಕೊನೆಗೆ ತನಿಖೆ ಮಾಡಿಸೋ ಭರವಸೆಯನ್ನು ಸಿಎಂ ನೀಡಿದ್ರು. ಆದರೆ ಆರೋಪಿ ರಾಜಕಾರಣಿಗಳ ಬಂಧನ ಆಗ್ಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ರು. ಮಾಜಿ ಸಿಎಂ ಪುತ್ರನ ಪಾತ್ರ ಬಗ್ಗೆ ಯತ್ನಾಳ್ (Basana gouda patil yatnal) ಆರೋಪಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ರು. ಯಾರು ಆ ಮಾಜಿ ಸಿಎಂ ಮಗ ಎಂದು ಪ್ರಶ್ನಿಸಿದರು. ಈ ಮಧ್ಯೆ ತನಿಖೆ ಬಿಗಿಯಾಗಿ ನಡೀತಿದೆ ಅಂತಾ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಶಹಬ್ಬಾಶ್‍ಗಿರಿ ಕೊಟ್ರು. ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ (BJP) ಸದ್ಯರು ಭಿತ್ತಿಪತ್ರ ಪ್ರದರ್ಶನ ಮಾಡಿದ್ರು. ಇದಕ್ಕೆ ಪ್ರಿಯಾಂಕ್ (Priyank Kharge), ಸಿದ್ದರಾಮಯ್ಯ ಸಿಟ್ಟಾದ್ರು. ಕಾಂಗ್ರೆಸ್ ವಿರುದ್ಧ ಸಚಿವ ಸುಧಾಕರ್, ಅಶೋಕ್ ವಾಗ್ದಾಳಿ ನಡೆಸಿದ್ರು.