ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಗಣಿಸಿ ಅಲ್ಪಸಂಖ್ಯಾತರಾದ ಹಿಂದೂಗಳು ಮತ್ತು ಸಿಖ್ಖರು ದೇಶಕ್ಕೆ ಮರಳುವಂತೆ ಕೇಳಲಾಗುತ್ತಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಮುಲ್ಲಾ ಅಬ್ದುಲ್ ವಾಸಿ ಅವರು ಜುಲೈ 24 ರಂದು ಅಫ್ಘಾನಿಸ್ತಾನದ ಹಿಂದೂ ಮತ್ತು ಸಿಖ್ ಕೌನ್ಸಿಲ್‍ನ ಹಲವಾರು ಸದಸ್ಯರನ್ನು ಭೇಟಿಯಾದ ನಂತರ, ಅಫ್ಘಾನಿಸ್ತಾನದ ಮುಖ್ಯಸ್ಥರ ಕಚೇರಿ ಟ್ವೀಟ್ ಮಾಡುವ ಮೂಲಕ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಯಿಗಳಿಗೂ ಏರ್ ಕಂಡೀಷನ್ ಫ್ಲ್ಯಾಟ್ ಒದಗಿಸಿದ್ದ ಪಾರ್ಥ
Advertisement
Advertisement
ವಾಸಿ ಅವರು ಕಾಬೂಲ್‍ನಲ್ಲಿ ಹಿಂದೂ ಮತ್ತು ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿ, ಭದ್ರತಾ ಸಮಸ್ಯೆಗಳಿಂದಾಗಿ ದೇಶವನ್ನು ತೊರೆದ ಎಲ್ಲ ಭಾರತೀಯ ಮತ್ತು ಸಿಖ್ ದೇಶಬಾಂಧವರು ಈಗ ಅಫ್ಘಾನಿಸ್ತಾನಕ್ಕೆ ಮರಳಬಹುದು. ಏಕೆಂದರೆ ದೇಶದಲ್ಲಿ ಭದ್ರತೆಯನ್ನು ಸ್ಥಾಪಿಸಲಾಗಿದೆ ಎಂದು ಕೇಳಿಕೊಂಡಿದ್ದಾರೆ.
Advertisement
ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ಮಾಡಲಾಗಿತ್ತು. ಈ ಹಿನ್ನೆಲೆ ಹಲವು ಹಿಂದೂಗಳು ಮತ್ತು ಸಿಖ್‍ರು ಪ್ರಾಣ ಉಳಿಸಿಕೊಳ್ಳಲು ಬೇರೆ ಕಡೆ ಪಲಾಯನ ಮಾಡಿದ್ದರು. ಈ ಹಿನ್ನೆಲೆ ಅವರನ್ನು ತಾಲಿಬಾನ್ ಮರಳಿ ಬರುವಂತೆ ಕೇಳಿಕೊಂಡಿದೆ.
Advertisement
ತಾಲಿಬಾನ್ ಬಿಡುಗಡೆ ಮಾಡಿದ ಪ್ರಕಟಣೆ ಪ್ರಕಾರ, ಕಾಬೂಲ್‍ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ(ಐಎಸ್‍ಕೆಪಿ) ದಾಳಿಯನ್ನು ತಡೆಗಟ್ಟಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್‍ಗೆ ಧನ್ಯವಾದ ಅರ್ಪಿಸಿದರು.
ನಡೆದಿದ್ದೇನು?
ಜೂನ್ 18 ರಂದು, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ(ISKP) ಕಾಬೂಲ್‍ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತು. ಮಾರಣಾಂತಿಕ ದಾಳಿಯ ಸಮಯದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡರು. ಇದನ್ನೂ ಓದಿ: ಒರಾಯನ್ ಮಾಲ್ ಮುಂಭಾಗ ನಡೆಯಿತು ಅಚಾತುರ್ಯ: ಅಮಲಿನ ಶೋಕಿಗೆ ಬಡಜೀವ ಬಲಿ
ಮೂಲಗಳ ಪ್ರಕಾರ, ದಾಳಿಕೋರರು ಆವರಣವನ್ನು ಪ್ರವೇಶಿಸಿದಾಗ ಸುಮಾರು 25 ರಿಂದ 30 ಜನರು ತಮ್ಮ ಬೆಳಗಿನ ಪ್ರಾರ್ಥನೆಗಾಗಿ ಗುರುದ್ವಾರಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಉಗ್ರರು ದಾಳಿ ಗುರುದ್ವಾರದ ಸಿಬ್ಬಂದಿಯಾಗಿದ್ದ ಅಹ್ಮದ್‍ನನ್ನು ಹತ್ಯೆ ಮಾಡಿದ್ದರು.