ಕಾಬೂಲ್: ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಕಾಬೂಲ್ ಮತ್ತು ಇತರ ಪ್ರಾಂತ್ಯಗಳಲ್ಲಿ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ (ವಾಹನ ಪರವಾನಗಿ) ನೀಡುವುದನ್ನು ನಿಲ್ಲಿಸಿದೆ.
ಆಹಾರ ಮತ್ತು ಇತರ ಅಗತ್ಯ ವಸ್ತುಗಳ ಸರಬರಾಜುಗಳ ತೀವ್ರ ಕೊರತೆಯೊಂದಿಗೆ ದೇಶವು ವಿನಾಶಕಾರಿ ಮಾನವೀಯ ಬಿಕ್ಕಟ್ಟಿನಿಂದ ಬಳಲುತ್ತಿರುವ ಸಂದರ್ಭದಲ್ಲಿ ಈ ನಿಷೇಧವನ್ನು ಹೇರಲಾಗಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ
Advertisement
Advertisement
ತಾಲಿಬಾನ್ ವಶಪಡಿಸಿಕೊಳ್ಳುವ ಮೊದಲು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಕಾಬೂಲ್ ಸೇರಿದಂತೆ ದೇಶದ ಕೆಲವು ಪ್ರಮುಖ ನಗರಗಳಲ್ಲಿ ವಾಹನ ಚಲಾಯಿಸುವ ಹಕ್ಕು ಹೊಂದಿದ್ದರು. ಆದರೆ ತಾಲಿಬಾನ್ ಈಗ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್ ವಿತರಿಸುವುದನ್ನು ನಿಲ್ಲಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
Advertisement
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಆಫ್ಘನ್ ಸರ್ಕಾರದ ಪತನ ಮತ್ತು ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಆಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಹದಗೆಟ್ಟಿದೆ. ದೇಶದಲ್ಲಿ ಹೋರಾಟ ಕೊನೆಗೊಂಡಿದ್ದರೂ, ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಮಹಿಳೆಯರ ಹಕ್ಕುಗಳನ್ನೂ ಕಸಿಯಲಾಗುತ್ತಿದೆ. ಇದನ್ನೂ ಓದಿ: 11 ಲಕ್ಷ ಪ್ರಜೆಗಳು ಇದೀಗ ರಷ್ಯಾದ ಒತ್ತೆಯಾಳುಗಳು: ಉಕ್ರೇನ್ ಆರೋಪ
Advertisement
ಈಚೆಗಷ್ಟೇ ತಾಲಿಬಾನ್ ಆಡಳಿತವು, ಆಫ್ಘಾನಿಸ್ತಾನದಲ್ಲಿ 6ನೇ ತರಗತಿ ಮುಗಿಸಿದ ನಂತರ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಿತು. ಈ ನಡೆ ವಿಶ್ವಾದ್ಯಂತ ಖಂಡನೆಗೆ ಕಾರಣವಾಯಿತು. ‘ಶಿಕ್ಷಕರ ಕೊರತೆ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಶೀಘ್ರದಲ್ಲೇ 6ನೇ ತರಗತಿ ನಂತರವೂ ಹೆಣ್ಣುಮಕ್ಕಳು ಶಾಲೆಗಳಲ್ಲಿ ಶಿಕ್ಷಣ ಕಲಿವುದನ್ನು ಪುನಾರಂಭಿಸಲಾಗುವುದು ಎಂದು ತಾಲಿಬಾನ್ ಹೇಳಿತ್ತು.
ಆಫ್ಘಾನಿಸ್ತಾನ ಈಗ ವಿಶ್ವದಲ್ಲೇ ಅತಿ ಹೆಚ್ಚು ತುರ್ತು ಆಹಾರ ಅಭದ್ರತೆಯ ಸಮಸ್ಯೆ ಎದುರಿಸುತ್ತಿದೆ. ದೇಶದಲ್ಲಿ ಶೇ.95ರಷ್ಟು ಜನತೆ ಆಹಾರ ಕೊರತೆಯಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಪುಟಿನ್‌ಗೆ ಕ್ಯಾನ್ಸರ್ – ಯುದ್ಧದ ವೇಳೆ ಅಧಿಕಾರ ಹಸ್ತಾಂತರ ಸಾಧ್ಯತೆ!