-ಅಮರುಲ್ಲಾ ಸಲೇಹ್ ಸಹೋದರ ವಶ
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೂರತ್ವ ಮಿತಿಮೀರಿ ಹೋಗುತ್ತಿದೆ. ಪಂಜ್‍ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ವಿರೋಧಿ ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ತಾಲಿಬಾನಿಗಳು ಪಂಜ್‍ಶೀರ್ ಗೆ ನುಗ್ಗಿದ್ದಾರೆ. ಅಲ್ಲದೆ ಮನೆ, ಮನೆಗೆ ನುಗ್ಗಿ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿ ಮಾರಣಹೋಮ ನಡೆಸುತ್ತಿದ್ದಾರೆ.
Advertisement
ತಾಲಿಬಾನಿಗಳಿಂದ ತಪ್ಪಿಸಿಕೊಳ್ಳಲು ಅಲ್ಲಿಯ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ. ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಅನ್ನು ಮುನ್ನಡೆಸುತ್ತಿರುವ ಅಮರುಲ್ಲಾ ಸಲೇಹ್ ಸದ್ಯ ಪಂಜ್‍ಶೀರ್ ಅನ್ನು ತೊರೆದಿದ್ದಾರೆ. ಅಲ್ಲಿ ಸಿಕ್ಕ ಸಲೇಹ್ ಸಹೋದರ ರೋಹುಲ್ಲಾ ಸಲೇಹ್ ರನ್ನು ವಶಕ್ಕೆ ಪಡೆದ ತಾಲಿಬಾನಿಗಳು ಚಿತ್ರಹಿಂಸೆ ನೀಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ
Advertisement
Advertisement
ಇಂದು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ. 2001 ಇದೇ ದಿನ ಅಮೆರಿಕಾ ಮೇಲೆ ಅಲ್‍ಕೈದಾ ದಾಳಿ ನಡೆಸಿತ್ತು. ಹೀಗಾಗಿ ಅಮೆರಿಕಾಗೆ ಠಕ್ಕರ್ ಕೊಡುವುದಕ್ಕಾಗಿ ಅಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಇಂದೇ ಬರುವ ನಿರೀಕ್ಷೆ ಇದೆ. ಇದನ್ನೂ ಓದಿ: ತಾಲಿಬಾನ್‍ನಲ್ಲಿ ಸರ್ಕಾರ ಘೋಷಣೆ – ಮೋಸ್ಟ್ ವಾಂಟೆಡ್ ಉಗ್ರ ಈಗ ಆಂತರಿಕ ಸಚಿವ
Advertisement
ಪದವಿಗಳಿಗೆ ಬೆಲೆ ಇಲ್ಲ:
ತಾಲಿಬಾನ್ ಆಡಳಿತದಲ್ಲಿ ಪಿಹೆಚ್‍ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ಇದನ್ನು ಅಲ್ಲಿನ ಶಿಕ್ಷಣ ಮಂತ್ರಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್‍ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರಲ್ಲಾ ಹೇಳಿದ್ದಾರೆ.