ದೂರದರ್ಶನ ನಿರೂಪಕಿಯರೇ, ಮುಖ ಮುಚ್ಚಿ ನಿರೂಪಣೆ ಮಾಡಿ: ತಾಲಿಬಾನ್

Public TV
1 Min Read
TALIBAN WOMEN

ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದಿನೇ ದಿನೇ ಮಹಿಳೆಯರ ಸ್ವತಂತ್ರ್ಯವನ್ನು ಕಸಿದುಕೊಳ್ಳುತ್ತಲೇ ಇದೆ. ಚಾಲನಾ ಪರವಾನಗಿ ಕಸಿದುಕೊಂಡಾಯ್ತು, ಪುರುಷರೊಂದಿಗೆ ಉದ್ಯಾನವನ, ಉಪಹಾರಗೃಹಕ್ಕೆ ಹೋಗುವುದನ್ನೂ ನಿಷೇಧಿಸಿತು. ಇದೀಗ ದೂರದರ್ಶನಗಳಲ್ಲಿ ಕೆಲಸ ಮಾಡುವ ನಿರೂಪಕಿಯರಿಗೂ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳುವಂತೆ ಆದೇಶಿಸಿದೆ.

ದೂರದರ್ಶನ, ಸುದ್ದಿ ವಾಹಿನಿಗಳಲ್ಲಿ ಮಹಿಳಾ ನಿರೂಪಕಿಯರು ಸುದ್ದಿ ಪ್ರಸಾರ ಮಾಡುವ ಸಂದರ್ಭ ತಮ್ಮ ಮುಖವನ್ನು ಮುಚ್ಚಿಕೊಳ್ಳುವಂತೆ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ದೂರದರ್ಶನ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಸೆಕ್ಸ್‌ನಿಂದಲೂ ಹರಡಬಹುದು ಮಂಕಿಪಾಕ್ಸ್- ತಜ್ಞರಿಂದ ಎಚ್ಚರಿಕೆ

afghanistan taliban

ಕೆಲವು ದಿನಗಳ ಹಿಂದೆ ತಾಲಿಬಾನ್ ಅಫ್ಘಾನಿಸ್ತಾನದ ಎಲ್ಲಾ ಮಹಿಳೆಯರೂ ಅಡಿಯಿಂದ ಮುಡಿ ವರೆಗೆ ತಮ್ಮ ದೇಹವನ್ನು ಮುಚ್ಚಿಕೊಳ್ಳಬೇಕಾಗಿ ಆದೇಶ ನೀಡಿತ್ತು. ಇದೀಗ ಸುದ್ದಿ ನಿರೂಪಕಿಯರಿಗೂ ಮುಖ ಮುಚ್ಚಿಕೊಳ್ಳುವಂತೆ ಹೇಳಿದ್ದು, ಮೇ 21ರ ಒಳಗಾಗಿ ಎಲ್ಲಾ ನಿರೂಪಕಿಯರೂ ಈ ನಿಯಮವನ್ನು ಪಾಲಿಸಬೇಕಾಗಿ ಗಡುವು ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 124 ಮಂದಿಗೆ ಕೊರೊನಾ -159 ಮಂದಿ ಡಿಸ್ಚಾರ್ಜ್

ತಾಲಿಬಾನ್ ಮತ್ತೆ ಈ ಹಿಂದೆ ವಿಧಿಸುತ್ತಿದ್ದ ಕಠಿಣ ಕ್ರಮಗಳನ್ನು ಮುಂದುವರಿಸಲಾರಂಭಿಸಿದೆ. ತಾಲಿಬಾನ್‌ನ ಈ ಕಠಿಣ ನಿಯಮಗಳಿಂದ ಅಫ್ಘಾನಿಸ್ತಾನ ಮಾತ್ರವಲ್ಲದೇ ವಿದೇಶಗಳಲ್ಲೂ ಜನರು ಕೆಂಗಣ್ಣು ತೋರಿದ್ದಾರೆ. ಮುಖ್ಯವಾಗಿ ಮಹಿಳೆಯರ ಸ್ವತಂತ್ರ್ಯವನ್ನು ಕಿವುಚಿ ಹಾಕುತ್ತಿರುವ ತಾಲಿಬಾನ್ ಬಗ್ಗೆ ಎಲ್ಲೆಲ್ಲೂ ಟೀಕೆಗಳು ಗ್ರಾಸವಾಗುತ್ತಿವೆ.

Share This Article