ಗಡ್ಡ ಬೆಳೆಸಲಿಲ್ಲ ಅಂತಾ 280 ಭದ್ರತಾ ಸಿಬ್ಬಂದಿ ವಜಾಗೊಳಿಸಿದ ತಾಲಿಬಾನ್‌

Public TV
1 Min Read
Talibans morality ministry

ಕಾಬೂಲ್: ಗಡ್ಡ ಬೆಳೆಸಲು ವಿಫಲರಾದರು ಎಂಬ ಕಾರಣಕ್ಕೆ ಭದ್ರತಾ ಪಡೆಯ 280 ಕ್ಕೂ ಹೆಚ್ಚು ಸಿಬ್ಬಂದಿಯನ್ನು ತಾಲಿಬಾನ್‌ (Taliban) ನೈತಿಕತೆ ಸಚಿವಾಲಯವು ವಜಾಗೊಳಿಸಿದೆ.

ಕಳೆದ ವರ್ಷದಲ್ಲಿ ‘ಅನೈತಿಕ ಕೃತ್ಯಗಳಿಗಾಗಿ’ ಅಫ್ಘಾನಿಸ್ತಾನದಲ್ಲಿ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದುರ್ಗುಣ ತಡೆಗಟ್ಟುವಿಕೆ ಮತ್ತು ಸದ್ಗುಣ ಪ್ರಸರಣದ ಸಚಿವಾಲಯವು ತನ್ನ ವಾರ್ಷಿಕ ಕಾರ್ಯಾಚರಣೆಗಳ ನವೀಕರಣದಲ್ಲಿ ಬಂಧಿತರಲ್ಲಿ ಅರ್ಧದಷ್ಟು ಜನರನ್ನು 24 ಗಂಟೆಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಯುಎಸ್ ಕಾರು ಅಪಘಾತ; ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಸಾವು

Taliban Pakistan Why are Afghanistan and Pakistan enemies 1

ಸಚಿವಾಲಯದ ಯೋಜನೆ ಮತ್ತು ಶಾಸನದ ನಿರ್ದೇಶಕ ಮೊಹಿಬುಲ್ಲಾ ಮೊಖ್ಲಿಸ್, ಅಧಿಕಾರಿಗಳು ಕಳೆದ ವರ್ಷದಲ್ಲಿ 21,328 ಸಂಗೀತ ಉಪಕರಣಗಳನ್ನು ನಾಶಪಡಿಸಿದ್ದಾರೆ. ಸಾವಿರಾರು ಕಂಪ್ಯೂಟರ್ ಆಪರೇಟರ್‌ಗಳು ಮಾರುಕಟ್ಟೆಯಲ್ಲಿ ‘ಅನೈತಿಕ’ ಚಲನಚಿತ್ರಗಳ ಕ್ಯಾಸೆಟ್‌ ಮಾರಾಟ ಮಾಡುವುದನ್ನು ತಡೆಯುತ್ತಾರೆ ಎಂದು ತಿಳಿಸಿದ್ದಾರೆ.

281 ಭದ್ರತಾ ಪಡೆ ಸಿಬ್ಬಂದಿ ಗಡ್ಡ ಬೆಳೆಸದಿದ್ದಕ್ಕಾಗಿ ಅವರನ್ನು ಗುರುತಿಸಿ, ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನಕ್ಕೆ ಅನುಗುಣವಾಗಿ ವಜಾಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ ಟೆರರ್ ಅಟ್ಯಾಕ್ – ಪಾಕ್ ಮೂಲದ ರಾಣಾ ಹಸ್ತಾಂತರಕ್ಕೆ ಯುಎಸ್ ಕೋರ್ಟ್ ಅಸ್ತು

ನೈತಿಕತೆಯ ಸಚಿವಾಲಯದ ಅಧಿಕಾರಿಗಳು ಇಸ್ಲಾಮಿಕ್ ವಸ್ತ್ರಸಂಹಿತೆ ನಿಯಮ ಪೂರೈಸದ ಕಾರಣಕ್ಕಾಗಿ ಕೆಲವು ಗಂಟೆಗಳ ಕಾಲ ಮಹಿಳೆಯರನ್ನು ನಿಲ್ಲಿಸುವ ಮತ್ತು ಬಂಧಿಸುವ ಪ್ರಕರಣಗಳ ಬಗ್ಗೆ ವರದಿಯಾಗಿದೆ.

Share This Article