ಕಾಬೂಲ್: ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ಸೆಪ್ಟೆಂಬರ್ 11ಕ್ಕೆ ಪ್ರಮಾಣವಚನ ಸಮಾರಂಭ ನಡೆಯಲಿದೆ ಎನ್ನಲಾಗಿತ್ತು. ಆದರೆ ತಾಲಿಬಾನ್ ಸರ್ಕಾರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ರದ್ದುಗೊಳಿಸಿದೆ. ಸಂಪನ್ಮೂಲ ಹಾಗೂ ಹಣ ವ್ಯರ್ಥವಾಗುವ ಹಿನ್ನೆಲೆ ಕಾರ್ಯಕ್ರಮವನ್ನು ರದ್ದುಗೊಳಿಸಿರುವುದಾಗಿ ತಾಲಿಬಾನ್ ತಿಳಿಸಿದೆ.
Advertisement
ಪ್ರಮಾಣವಚನ ಸಮಾರಂಭ ನಡೆಸಿದರೆ ಸಂಪನ್ಮೂಲ ಹಾಗೂ ಹಣ ವ್ಯರ್ಥವಾಗುತ್ತದೆ ಎಂಬ ಉದ್ದೇಶದಿಂದ ರದ್ದುಗೊಳಿಸಲಾಗಿದೆ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ. ಸೆಪ್ಟೆಂಬರ್ 11ರಂದು ಅಫ್ಘಾನಿಸ್ತಾನದಲ್ಲಿನ ನೂತನ ತಾಲಿಬಾನ್ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ರದ್ದುಗೊಳಿಸಿರುವುದಾಗಿ ತಾಲಿಬಾನ್ ತಿಳಿಸಿದೆ. ಇದನ್ನೂ ಓದಿ: ತಾಲಿಬಾನಿಗಳ ಕ್ರೂರತ್ವ- ಮನೆ, ಮನೆಗೆ ನುಗ್ಗಿ ಯುವಕರ ಬರ್ಬರ ಹತ್ಯೆ
Advertisement
Advertisement
ಇತ್ತ ಪಾಕಿಸ್ತಾನ ಇಂಟರ್‍ನ್ಯಾಷನಲ್ ಏರ್‍ಲೈನ್ಸ್ ಕಾಬೂಲ್‍ಗೆ ವಿಮಾನ ಹಾರಾಟವನ್ನು ಮುಂದಿನ ವಾರ ಆರಂಭಿಸುತ್ತಿದೆ. ಇಸ್ಲಾಮಾಬಾದ್‍ನಿಂದ ಕಾಬೂಲ್‍ಗೆ ಮುಂದಿನ ವಾರ ಪಾಕಿಸ್ತಾನ ವಿಮಾನಗಳು ಹಾರಾಟ ನಡೆಸಲಿವೆ ಎಂದು ಪಾಕಿಸ್ತಾನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಮೂಲಕ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಮೊದಲ ಬಾರಿಗೆ ವಿದೇಶಿ ವಾಣಿಜ್ಯ ಸೇವೆಯನ್ನು ಆರಂಭಿಸಿದಂತಾಗುತ್ತದೆ.
Advertisement
ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಂತೆ ಶೇ.97ರಷ್ಟು ಆಫ್ಘನ್ನರು 2022ರ ಮಧ್ಯದಲ್ಲಿ ಬಡತನದಲ್ಲಿ ಸಿಲುಕಬಹುದು. ಅಲ್ಲದೆ ಅಫ್ಘಾನಿಸ್ತಾನದ ನೈಜ ಜಿಡಿಪಿ ಶೇ.13.2ರಷ್ಟು ಸಂಕುಚಿತಗೊಳ್ಳಬಹುದು ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ಇದನ್ನೂ ಓದಿ: ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ