ಕಾಬೂಲ್: ಯುಎಸ್ ಪಡೆಗಳ ಟಾರ್ಗೆಟ್‌ನಿಂದ ತಪ್ಪಿಸಿಕೊಳ್ಳಲು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಬಳಸಿದ ಕಾರನ್ನು ಪೂರ್ವ ಆಫ್ಘಾನಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದೆ. ಸುಮಾರು 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಈ ಕಾರನ್ನು ಸಮಾಧಿ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9/11 ದಾಳಿಯ ನಂತರ ಯುಎಸ್ ಪಡೆಗಳು ಓಮರ್‌ನನ್ನು ಟಾರ್ಗೆಟ್ ಮಾಡಿದ್ದವು. ತಪ್ಪಿಸಿಕೊಳ್ಳಲು ಓಮರ್ ಬಳಸಿದ್ದ ಕಾರನ್ನು ಪೂರ್ವ ಅಫ್ಘಾನಿಸ್ತಾನದಲ್ಲಿ ಉತ್ಕನನ ಮಾಡಲಾಗಿದೆ. ಬಿಳಿ ಟೊಯೊಟಾ ಕೊರೊಲ್ಲಾ ಕಾರನ್ನು ಜಬುಲ್ ಪ್ರಾಂತ್ಯದ ಹಳ್ಳಿಯ ಉದ್ಯಾನದಲ್ಲಿ ಮಾಜಿ ತಾಲಿಬಾನ್ ಅಧಿಕಾರಿ ಅಬ್ದುಲ್ ಜಬ್ಬಾರ್ ಒಮಾರಿ ಹೂತುಹಾಕಿದ್ದರು. ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ರಾಜೀನಾಮೆ ಘೋಷಣೆ
Advertisement
Advertisement
ʼಇದು ಇನ್ನೂ ಉತ್ತಮ ಸ್ಥಿತಿಯಲ್ಲಿದೆ, ಅದರ ಮುಂಭಾಗ ಮಾತ್ರ ಸ್ವಲ್ಪ ಹಾನಿಯಾಗಿದೆʼ ಎಂದು ಜಬುಲ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿಯ ನಿರ್ದೇಶಕ ರಹಮತುಲ್ಲಾ ಹಮ್ಮದ್ AFP ಗೆ ತಿಳಿಸಿದ್ದಾರೆ. ಈ ವಾಹನವು ಯಾರ ಕೈಗೂ ಸಿಗಬಾರದೆಂದು ಅದನ್ನು ಸಮಾಧಿ ಮಾಡಲಾಗಿತ್ತು ಎಂದು ಅಹ್ಮದ್ ಹೇಳಿದ್ದಾರೆ
Advertisement
ರಾಜಧಾನಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಕಾರನ್ನು ʼದೊಡ್ಡ ಐತಿಹಾಸಿಕ ಸ್ಮಾರಕʼ ಎಂದು ಹೆಸರಿಸಿ ಪ್ರದರ್ಶಿಸಲು ತಾಲಿಬಾನ್ ಬಯಸಿದೆ ಎಂದು ಅವರ ತಿಳಿಸಲಾಗಿದೆ. 1996 ರಲ್ಲಿ ಕಠಿಣ ಇಸ್ಲಾಮಿಸ್ಟ್ ಚಳುವಳಿಯನ್ನು ಅಧಿಕಾರಕ್ಕೆ ತಂದ ಮುಲ್ಲಾ ಒಮರ್ ಅವರು ಕಂದಹಾರ್‌ನಲ್ಲಿ ತಾಲಿಬಾನ್ ರೂಪಿಸಿದರು. ನಂತರ ದೇಶದ ಜನತೆ ಮೇಲೆ ತಾಲಿಬಾನ್ ನೀತಿ-ನಿಯಮಗಳ ಕಟ್ಟುನಿಟ್ಟನ್ನು ಹೇರಿದರು.
Advertisement
ಸೆಪ್ಟೆಂಬರ್ 11ರ ದಾಳಿ ನಂತರ ಅಪ್ಘಾನಿಸ್ತಾನವು ಒಸಾಮಾ ಬಿನ್ ಲಾಡೆನ್, ಅಲ್ ಖೈದಾ ಸೇರಿದಂತೆ ಜಿಹಾದಿಸ್ಟ್ ಗುಂಪುಗಳಿಗೆ ಆಶ್ರಯತಾಣವಾಯಿತು. ಇದನ್ನೂ ಓದಿ: ಆರ್ಥಿಕ ಹಿಂಜರಿತ ಭೀತಿ – ಅಂತಾರಾಷ್ಟ್ರೀಯ ತೈಲಬೆಲೆ ಭಾರೀ ಇಳಿಕೆ
ಬಿನ್ ಲಾಡೆನ್‌ನನ್ನು ಹಸ್ತಾಂತರಿಸಲು ತಾಲಿಬಾನ್ ನಿರಾಕರಿಸಿದಾಗ, ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳು ಅಫ್ಘಾನಿಸ್ತಾನದ ಮೇಲೆ ವೈಮಾನಿಕ ದಾಳಿ ನಡೆಸಿದವು. ಆಕ್ರಮಣಕ್ಕೂ ಮೊದಲು ತಾಲಿಬಾನ್ ಕಿತ್ತೊಗೆದು ಅಪ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ರಚಿಸಿದ್ದವು.
ನಂತರ ಓಮರ್ ತಲೆಮರೆಸಿಕೊಂಡಿದ್ದ. ನಂತರ ಓಮರ್ ಸಾವಿಗೀಡಾದ. ಅಧಿಕಾರಿಗಳು ಹಲವಾರು ವರ್ಷಗಳವರೆಗೆ ಅವರ ಸಾವನ್ನು ರಹಸ್ಯವಾಗಿಟ್ಟಿದ್ದರು.
ಅಮೆರಿಕ ಕಳೆದ ವರ್ಷ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿತು. ತಾಲಿಬಾನ್ ದೇಶಾದ್ಯಂತ ವ್ಯಾಪಿಸಿ, ಕಾಬೂಲ್ ಅನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಮರಳಿತು.