ಅಫ್ಘಾನಿಸ್ತಾನ: ಟಿಕ್‍ಟಾಕ್, ಪಬ್‍ಜಿ ಅಫ್ಘಾನ್ ಯುವಕರನ್ನು ದಾರಿತಪ್ಪಿಸುತ್ತೆ ಎಂದು ತಾಲಿಬಾನ್ ಅಫ್ಘಾನ್‍ನಿಂದಲ್ಲೇ ಅಪ್ಲಿಕೇಶನ್‍ಗಳನ್ನು ಬ್ಯಾನ್ ಮಾಡಿದೆ.
ತಾಲಿಬಾನ್ ಸರ್ಕಾರ ಅಫ್ಘಾನಿಸ್ತಾನದಲ್ಲಿ ವೀಡಿಯೋ ಶೇರ್ ಮಾಡಿಕೊಳ್ಳುವ ಮೂಲಕ, ಟಿಕ್‍ಟಾಕ್ ಅಪ್ಲಿಕೇಶನ್ ನಿಷೇಧಿಸಿರುವ ಸುದ್ದಿಯನ್ನು ತಿಳಿಸಿದೆ. ಇದು ಅಫ್ಘಾನಿಸ್ತಾನದ ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದು ಒತ್ತಿ ಹೇಳಿದರು. ಇದರ ಜೊತೆಗೆ ಜನಪ್ರಿಯ ಮೊಬೈಲ್ ಗೇಮ್ ಪಬ್‍ಜಿ ಸಹ ನಿಷೇಧಿಸಲಾಗಿದೆ ಎಂದು ಘೋಷಿಸಿದರು. ಇದನ್ನೂ ಓದಿ: ಅಂತ್ಯಸಂಸ್ಕಾರಕ್ಕೆ ಜಾಗ ಸಿಗದೇ ಪರದಾಡಿದ ಕುಟುಂಬಸ್ಥರು
Advertisement
Advertisement
ಕಳೆದ ವರ್ಷ ಆಗಸ್ಟ್‍ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ, ತಾಲಿಬಾನ್ ಈಗಾಗಲೇ ಸಂಗೀತ, ಚಲನಚಿತ್ರಗಳು ಮತ್ತು ದೂರದರ್ಶನ ಸೋಪ್‍ಗಳನ್ನು ನಿಷೇಧಿಸಿದೆ. ಗುರುವಾರ ಈ ಕುರಿತು ಕ್ಯಾಬಿನೆಟ್ ಅರ್ಜಿಗಳು ತಿಳಿಸಿದ್ದು, ಅಪಾಯಕಾರಿ ಆ್ಯಪ್‍ಗಳು ಯುವಪೀಳಿಗೆಯನ್ನು ದಾರಿತಪ್ಪಿಸಿದೆ. ಅದಕ್ಕೆ ಈ ಆ್ಯಪ್‍ಗಳನ್ನು ಮುಚ್ಚಬೇಕು ಎಂದು ದೂರಸಂಪರ್ಕ ಸಚಿವಾಲಯಕ್ಕೆ ಆದೇಶಿಸಲಾಗಿದೆ ಎಂದು ಮಾಧ್ಯಮಗಳ ವರದಿಗಳ ಮೂಲಕ ತಿಳಿದುಬಂದಿದೆ.
Advertisement
Advertisement
ಸರ್ಕಾರಿ ಸುದ್ದಿ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸುದ್ದಿಯನ್ನು ಟಿವಿಯಲ್ಲಿ ಪ್ರದರ್ಶನ ಮಾಡುವುದನ್ನು ತಾಲಿಬಾನ್ ನಿಷೇಧಿಸಿದೆ. ಈ ಪ್ರಸಾರವನ್ನು ನಿಲ್ಲಿಸುವಂತೆ ಸಚಿವಾಲಯಕ್ಕೆ ತಾಲಿಬಾನ್ ಆದೇಶ ನೀಡಿದೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಎಂಟ್ರಿ – 14 ದಿನಗಳ ಕಸ್ಟಡಿಗೆ ಒಳಗಾದ ಸಂಸದೆ, ಶಾಸಕ ದಂಪತಿ
ಫೆಬ್ರವರಿಯಲ್ಲಿ ಗಲ್ಲುರ್ ಸಮೀಕ್ಷೆಯ ಫಲಿತಾಂಶಗಳ ಪ್ರಕಾರ, ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಬಹುತೇಕ ಎಲ್ಲ ಆಫ್ಘನ್ನರು ತಮ್ಮ ಜೀವನ ಅತ್ಯಂತ ದುಃಖದಿಂದ ಕೂಡಿದೆ ಎಂದು ಪರಿಗಣಿಸುವಷ್ಟು ಕೆಟ್ಟದಾಗಿದೆ ಎಂದು ರೇಟ್ ಮಾಡಿದ್ದರು.