ಆಡಿದ್ರೆ ದೇಹ ಪ್ರದರ್ಶನವಾಗುತ್ತೆ – ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಕ್ರೀಡೆ ನಿಷೇಧ

Public TV
1 Min Read
Taliban

ಕಾಬೂಲ್: ಅಫ್ಘಾನಿಸ್ತಾನದ ಹೆಸರನ್ನು ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ ಎಂದು ಬದಲಾಯಿಸಿ ಮಧ್ಯಂತರ ಸರ್ಕಾರ ರಚಿಸಿರುವ ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ.

ಈ ಸಂಬಂಧ ತಾಲಿಬಾನ್ ಸುಪ್ರೀಂ ಲೀಡರ್ ಮೌಲ್ವಿ ಹೈಬತುಲ್ಲಾ ಅಖುಂಡ್‍ಜಾದಾ ಹೆಸರಿನಲ್ಲಿ ಆಡಳಿತ ವಿಧಾನವನ್ನು ಪ್ರಕಟಿಸಿದೆ. ಯಾರು ಭವಿಷ್ಯದ ಬಗ್ಗೆ ಆತಂಕ ಪಡಬೇಕಿಲ್ಲ. ಎಲ್ಲಾ ಸಮಸ್ಯೆಗಳಿಗೂ ಸರಿಯಾದ ಪರಿಹಾರ ಹುಡುಕುತ್ತೇವೆ ಎಂದಿದೆ.

talibanies

ಷರಿಯತ್ ಕಾನೂನು ಅನುಸಾರವಾಗಿ ಅಫ್ಘಾನಿಗಳ ಜೀವನವನ್ನು ರೂಪಿಸುತ್ತೇವೆ. ಇದಕ್ಕೆ ಅಫ್ಘಾನ್ ಪ್ರಜೆಗಳು ತಾಲಿಬಾನ್ ಸರ್ಕಾರವನ್ನು ಬೆಂಬಲಿಸಬೇಕು. ತಜ್ಞರು ದೇಶ ಬಿಟ್ಟು ಹೋಗಬಾರದು ಎಂದು ಕೋರಿದೆ. ಇದನ್ನೂ ಓದಿ: ಕಾರವಾರದ ಕಡಲತೀರದಲ್ಲಿ ಅಪ್ರಾಪ್ತ ಪ್ರೇಮಿಗಳ ಕಾಮಕೇಳಿ ಆಟ- ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ 

ತಾಲಿಬಾನ್ ಆಡಳಿತದಲ್ಲಿ ಪಿಹೆಚ್‍ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ಇದನ್ನು ಅಲ್ಲಿನ ಶಿಕ್ಷಣ ಮಂತ್ರಿಯೇ ಅಧಿಕೃತವಾಗಿ ಘೋಷಿಸಿದ್ದಾರೆ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್‍ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರಲ್ಲಾ ಹೇಳಿದ್ದಾರೆ. ಇದನ್ನೂ ಓದಿ: ಕುಕ್ಕೆ, ಧರ್ಮಸ್ಥಳದಲ್ಲಿ ತೀರ್ಥ, ಪ್ರಸಾದ, ಅನ್ನ ಸಂತರ್ಪಣೆ ಆರಂಭ

Taliban Occupy Afghan Presidential Palace afghanistan

ಮಹಿಳೆಯರಿಗೆ ಟಫ್ ರೂಲ್ಸ್
ಕ್ರಿಕೆಟ್‍ನಂತಹ ಕ್ರೀಡೆ ಸೇರಿದಂತೆ ಯಾವುದೇ ಕ್ರೀಡೆಗಳಲ್ಲಿ ಮಹಿಳೆಯರು ಭಾಗಿಯಾಗಲು ಅನುಮತಿಯಿಲ್ಲ. ಕ್ರೀಡೆಗಳಲ್ಲಿ ಇಸ್ಲಾಮಿಕ್ ಡ್ರೆಸ್ ಕೋಡ್ ಪಾಲನೆ ಆಗುವುದಿಲ್ಲ. ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೇಹ ಪ್ರದರ್ಶನವಾಗುತ್ತದೆ. ಇದರಿಂದಾಗಿ ಮಹಿಳಾ ಕ್ರೀಡಾಪಟುಗಳಿಗೆ ಮುಖ, ಶರೀರ ಮುಚ್ಚಿಕೊಳ್ಳಲು ಸಾಧ್ಯವಿಲ್ಲ.

Share This Article
Leave a Comment

Leave a Reply

Your email address will not be published. Required fields are marked *