ಕಾರವಾರ: ಮೈಸೂರು ಅತ್ಯಾಚಾರ ಪ್ರಕರಣ ನಡೆದ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ ಪ್ರವಾಸಿಗರು ಹೆಚ್ಚಾಗಿ ಬರುವ ಜಿಲ್ಲೆಗಳಲ್ಲಿ ಭದ್ರತೆ ಹೆಚ್ಚಿಸಲು ಆದೇಶ ಮಾಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆದೇಶಕ್ಕೆ ಕಿಮ್ಮತ್ತಿಲ್ಲದಂತಾಗಿದ್ದು, ಪ್ರವಾಸಿ ಸ್ಥಳವೀಗ ಅಪ್ರಾಪ್ತರ ಅಶ್ಲೀಲದಾಟಕ್ಕೆ ತಾಣವಾಗುತ್ತಿದೆ.
Advertisement
ಜಿಲ್ಲೆಯ ಕಾರವಾರದಲ್ಲಿ ಯಾರ ಭಯವೂ ಇಲ್ಲದೇ ಗಾಂಧಿ ಪಾರ್ಕ್, ಮಕ್ಕಳ ಉದ್ಯಾನವನ, ಕಡಲತೀರ ಭಾಗದ ಪ್ರದೇಶದಲ್ಲಿ ಮಳೆಯ ನಡುವೆಯೂ ಅಪ್ರಾಪ್ತ ಜೋಡಿಗಳು ಕಾಮಕೇಳಿ ಆಟದಲ್ಲಿ ತೊಡಗುತ್ತಿವೆ. ಕಾಲೇಜು, ಶಾಲೆಗೆ ಹೋಗುವ ವಿದ್ಯಾರ್ಥಿಗಳೇ ಬೆಳಗಿನಿಂದ ಸಂಜೆ ವರೆಗೆ ಅಶ್ಲೀಲವಾಗಿ ನಡೆದುಕೊಳ್ಳುತಿದ್ದು, ಯಾರ ಭಯವಿಲ್ಲದೇ ಬೇಕಾಬಿಟ್ಟಿ ವರ್ತಿಸುತ್ತಿದ್ದಾರೆ. ಇದರಲ್ಲಿ 18 ವರ್ಷ ಸಹ ಆಗದ ಅಪ್ರಾಪ್ತರೇ ಹೆಚ್ಚಿದ್ದಾರೆ.
Advertisement
Advertisement
ರವೀಂದ್ರನಾಥ ಕಡಲತೀರ, ಗಾಂಧಿ ಪಾರ್ಕ್, ಮಕ್ಕಳ ಉದ್ಯಾನವನ, ರಾಕ್ ಗಾರ್ಡನ್ ಹಿಂಭಾಗ, ದಿವೇಕರ್ ಕಾಲೇಜು ಹಿಂಭಾಗದ ಸ್ಥಳ ಕಾಲೇಜು ವಿದ್ಯಾರ್ಥಿಗಳ ಕಾಮಕೇಳಿ ಆಟದ ಹಾಟ್ ಸ್ಪಾಟ್ ಆಗಿವೆ. ದೂರದಲ್ಲಿ ಜನ ಬಂದರೆ ಕೆಲವರು ಅಡಗಿ ಕುಳಿತರೆ, ಇನ್ನೂ ಕೆಲವರು ಭಯವಿಲ್ಲದೇ ತಮ್ಮ ಆಟದಲ್ಲಿ ಮಗ್ನರಾಗಿರುತ್ತಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ
Advertisement
ಜಿಲ್ಲೆಯ ಗೋಕರ್ಣ, ಕುಮಟಾ, ಹೊನ್ನಾವರ ಕಡಲತೀರದಲ್ಲೂ ಸಹ ಇದೇ ದೃಶ್ಯಗಳು ಕಂಡುಬರುತ್ತವೆ. ಅಲ್ಲದೆ ಈ ಸ್ಥಳಗಳು ಮದ್ಯ ಸೇವಿಸುವವರ, ಗಾಂಜಾ ಹೊಡೆಯುವವರ ಅಡ್ಡ ಸಹ ಆಗಿವೆ. ಈ ಭಾಗಗಳಲ್ಲಿ ಸಿಸಿಟಿವಿಯಾಗಲಿ ಪೊಲೀಸರಾಗಲಿ ಇಲ್ಲದಿರುವುದು ಕೆಟ್ಟ ಕೆಲಸ ಮಾಡುವವರಿಗೆ ರತ್ನಗಂಬಳಿ ಹಾಕಿದಂತಾಗಿದೆ.
ಕೈ ಚಲ್ಲುವ ಪೊಲೀಸರು
ಜಿಲ್ಲಾಡಳಿತದಿಂದ ಕಡಲತೀರದ ಆಯಾಕಟ್ಟು ಪ್ರದೇಶದಲ್ಲಿ ಪ್ರವಾಸಿ ಮಿತ್ರ ಮತ್ತು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸಾಲದು ಎಂಬಂತೆ ಶರಾವತಿ ಕಾರ್ಯಪಡೆ ಸಹ ಅಸ್ತಿತ್ವದಲ್ಲಿದೆ. ಆದರೆ ಇದು ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಜಿಲ್ಲೆಯ ಮುರಡೇಶ್ವರ, ಗೋಕರ್ಣ ಹೊರತುಪಡಿಸಿ ಉಳಿದ ಭಾಗದಲ್ಲಿ ನಿಯೋಜನೆಗೊಂಡ ಸಿಬ್ಬಂದಿ ಕಾರ್ಯ ಶೂನ್ಯವಾಗಿದೆ. ಕಳೆದ ಕೆಲವು ದಿನಗಳ ಹಿಂದೆ ತೋರಿಕೆಗೆ ಪ್ರವಾಸಿ ಸ್ಥಳಗಳಲ್ಲಿ ಪೊಲೀಸರು ರೌಂಡ್ ಹೊಡೆದಿದ್ದಾರೆ. ಇದನ್ನೂ ಓದಿ: ಒಂದೇ ಗ್ರಾಮದ 51 ಜನರಿಗೆ ಕೊರೊನಾ ಪಾಸಿಟಿವ್- ಗ್ರಾಮಸ್ಥರಲ್ಲಿ ಆತಂಕ
ಇದೀಗ ಜಿಲ್ಲೆಯ ಹಲವು ಪ್ರವಾಸಿ ಸ್ಥಳಗಳಲ್ಲಿ ಪ್ರೇಮಿಗಳ ಏಕಾಂತದಾಟ ಮುಂದುವರಿದಿದೆ. ಅಪ್ರಾಪ್ತರೇ ಹೆಚ್ಚಾಗಿ ಇರುವುದರಿಂದ ಕಾನೂನಿನಲ್ಲಿ ಶಿಕ್ಷಿಸುವ ಅವಕಾಶ ಇದೆ. ಬುದ್ಧಿ ಹೇಳಿ ಕಳುಹಿಸುವ ಕಾರ್ಯವನ್ನಾದರೂ ಮಾಡಬಹುದು. ಆದರೆ ಇದ್ಯಾವುದನ್ನೂ ನಿಯೋಜಿತ ಸಿಬ್ಬಂದಿ ಮಾಡುತ್ತಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೇಳುವುದೇನು?
ಮೈಸೂರಿನ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿ ಕಾಲೇಜುಗಳಲ್ಲಿ ಹೆಣ್ಣುಮಕ್ಕಳ, ಪೋಷಕರ ಮೊಬೈಲ್ ನಂಬರ್ ಪಡೆಯಲಾಗಿದೆ. ಹೈವೇ ಪ್ಯಾಟ್ರೋಲಿಂಗ್ ಸಿಬ್ಬಂದಿ ಸಹ ಅನುಮಾನ ಬಂದವರನ್ನು ತಡೆದು ಪ್ರಶ್ನಿಸುತ್ತಾರೆ. ಶರಾವತಿ ಕಾರ್ಯಪಡೆ ಸಹ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುತಿದ್ದು, ಜನರು ಹೆಚ್ಚು ತೆರಳದ ಪ್ರವಾಸಿ ಸ್ಥಳದ ಕಡೆ ಪೊಲೀಸರು ಬೀಟ್ ಮಾಡುತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಅವರು ಮಾಹಿತಿ ನೀಡಿದ್ದಾರೆ.