ಲಕ್ನೋ: ಹುಡುಗಿ ಮನೆಯವರು ವರದಕ್ಷಿಣೆ ಕೊಡಲಿಲ್ಲವೆಂದು ಮದುವೆಯಾದ ಮರುದಿನವೇ ಪತ್ನಿಗೆ ವಾಟ್ಸಾಪ್‌ನಲ್ಲೇ ತ್ರಿವಳಿ ತಲಾಖ್ ನೀಡಿ ನವ ವರ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಖೋಡಾ ಪ್ರದೇಶದಲ್ಲಿ ನಡೆದಿದೆ.
ನವ ವರನ ಮನೆಯವರು ವರದಕ್ಷಿಣೆಯಾಗಿ ಕಾರು, 2 ಲಕ್ಷ ರೂಪಾಯಿ ನಗದು ಹಾಗೂ ಚಿನ್ನಾಭರಣಗಳಿಗೆ ಬೇಡಿಕೆಯಿಟ್ಟಿದ್ದರು. ಆದರೆ ಹುಡುಗಿ ಮನೆಯವರು ವರದಕ್ಷಿಣೆ ಕೊಡಲು ನಿರಾಕರಿಸಿದ್ದರಿಂದಾಗಿ ಪತಿಯು ವಾಟ್ಸಾಪ್‌ನಲ್ಲಿಯೇ ತ್ರಿವಳಿ ತಲಾಖ್ ನೀಡಿ ಪರಾರಿಯಾಗಿದ್ದಾನೆ. ಇದರಿಂದ ಗಾಬರಿಗೊಂಡ ನವ ವಧು ಮನೆಯವರು ತಕ್ಷಣವೇ ಆರೋಪಿ ವಿರುದ್ಧ ಖೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕನ್ನಡದಲ್ಲೂ ನಿಖಿಲ್ ಸಿದ್ಧಾರ್ಥ್ ನಟನೆಯ ‘ಕಾರ್ತಿಕೇಯ-2’ ಸಿನಿಮಾದ ಟೀಸರ್
Advertisement
Advertisement
ಪೋಷಕರು ನೀಡಿದ ದೂರಿನಲ್ಲಿ ಏನಿದೆ?
ತಮ್ಮ ಮಗಳು ಎಮ್‌ಐಟಿ ಕಾಲೇಜಿನಲ್ಲಿ ಬಿ-ಟೆಕ್ ಓದಿದ್ದಾಳೆ. ಅವಳಿಗೆ ಗಾಜಿಪುರದ ಮೊಹಮ್ಮದ್ ದಿಲ್ಶಾದ್ ಕುಟುಂಬದಿಂದ ಒಂದು ಸಂಬಂಧ ಬಂದಿತು. ಹೆಚ್ಚು ಯೋಚನೆ ಮಾಡದೇ ಸಂಬಂಧವನ್ನು ಒಪ್ಪಿ ಮದುವೆ ಮಾಡಿಸಲು ನಿಶ್ಚಯಿಸಲಾಯಿತು. ನಿಶ್ಚಯದ ಬಳಿಕ ವರನ ಕುಟುಂಬದಿಂದ ವರದಕ್ಷಿಣೆ ಕೇಳಲು ಪ್ರಾರಂಭಿಸಿದರು. ಅಗ ಹುಡುಗಿಯ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದರು. ಅಲ್ಲದೆ ನಾವು ಮದುವೆ ಮಾಡುವುದಿಲ್ಲ ಎಂದೂ ಹೇಳಿದ್ದರು. ಇದನ್ನೂ ಓದಿ: ಅಮೆರಿಕದಲ್ಲಿ ಇಬ್ಬರು ಮಕ್ಕಳಲ್ಲಿ ಕಾಣಿಸಿಕೊಂಡ ಮಂಕಿಪಾಕ್ಸ್ – ಈವರೆಗೆ 2,500ಕ್ಕೂ ಹೆಚ್ಚು ಕೇಸ್ ದಾಖಲು
Advertisement
Advertisement
ಕೆಲವು ದಿನಗಳ ನಂತರ ಹುಡುಗನ ಕಡೆಯವರೇ ಮತ್ತೆ ವರದಕ್ಷಿಣೆ ಇಲ್ಲದೆ ಮದುವೆ ಮಾಡಿಕೊಳ್ಳುವುದಾಗಿ ಒಪ್ಪಿದರು. ಮಗಳ ಮದುವೆ ಬಳಿಕ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ಮದುವೆಯಾದ ಮರುದಿನವೇ ದಿಲ್ಶಾದ್ ಮತ್ತು ಆತನ ಕುಟುಂಬಸ್ಥರು ವರದಕ್ಷಿಣೆಗಾಗಿ ಆಕೆಯನ್ನು ಥಳಿಸಿದ್ದರು. ನಂತರ ವಾಟ್ಸಾಪ್‌ನಲ್ಲಿ ತ್ರಿವಳಿ ತಲಾಖ್ ಕೂಡ ನೀಡಿದ್ದು, ಪರಾರಿಯಾಗಿದ್ದಾನೆ ಎಂದು ಹೆಣ್ಣಿನ ಮನೆಯವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಖೋಡಾ ಪೊಲೀಸರು ಆರೋಪಿ ಪತ್ತೆಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ. ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆ ಕೊಡಿಸುವುದಾಗಿ ತಿಳಿಸಿದ್ದಾರೆ.