ನವದೆಹಲಿ: ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ (JP Nadda), ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallaikarjun Kharge) ಮಧ್ಯೆ ಕೇಂದ್ರಿಯ ಕೈಗಾರಿಕಾ ಭದ್ರತಾ ಸಿಬ್ಬಂದಿ (CISF) ವಿಚಾರಕ್ಕೆ ಸಂಬಂಧಿಸಿದಂತೆ ವಾಕ್ಸಮರ ನಡೆದಿದೆ.
ಸದನದ ಬಾವಿ ಬಳಿ ಕೇಂದ್ರಿಯ ಕೈಗಾರಿಕಾ ಭದ್ರತಾ ಸಿಬ್ಬಂದಿ ನಿಯೋಜನೆ ಸರಿಯಲ್ಲ. ಸದಸ್ಯರು ತಮ್ಮ ಪ್ರಜಾಸತಾತ್ಮಕ ಹಕ್ಕುಗಳನ್ನು ಚಲಾಯಿಸುವಾಗ ಸಿಐಎಸ್‌ಎಫ್ ಇಟ್ಟು ಸದನ ನಡೆಸ್ತಿರುವುದು ಆಘಾತ ತಂದಿದೆ. ಜೇಟ್ಲಿ, ಸುಷ್ಮಾಸ್ವರಾಜ್ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ಕಲಾಪಕ್ಕೆ ಅಡ್ಡಿ ಅಂದಿದ್ದರು. ಅದನ್ನು ಮುಂದುವರಿಸುತ್ತೇವೆ ಎಂದು ಖರ್ಗೆ ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಸಾಲ ಸಂಘಗಳಲ್ಲಿ 125 ಸಂಘಗಳು ದಿವಾಳಿ ಅಂಚಿನಲ್ಲಿವೆ: ಅಮಿತ್ ಶಾ
ಖರ್ಗೆ ಹೇಳಿಕೆಯನ್ನು ರಾಜ್ಯಸಭಾ ಉಪಸಭಾಪತಿ ಹರಿವಂಶ್ ತಳ್ಳಿ ಹಾಕಿದರು. ಇದು ಸಿಐಎಸ್‌ಎಫ್ ಸಿಬ್ಬಂದಿಯಲ್ಲ, ಸಂಸತ್ತಿನ ಭದ್ರತಾ ಸಿಬ್ಬಂದಿ. ಮಾರ್ಷಲ್ ಮಾತ್ರ ಸಭಾಧ್ಯಕ್ಷರ ಆದೇಶ ಪಾಲಿಸುತ್ತಾರೆ ಎಂದು ಸ್ಪಷ್ಪಪಡಿಸಿದರು. ಹಾಗಾದರೆ, ಈ ಸದನವನ್ನು ಯಾರು ನಡೆಸುತ್ತಿದ್ದಾರೆ ನೀವಾ? ಅಥವಾ ಅಮಿತ್ ಶಾನ ಎಂದು ಖರ್ಗೆ ಮರು ಪ್ರಶ್ನಿಸಿದರು.
ಮಧ್ಯಪ್ರವೇಶಿಸಿದ ಕೇಂದ್ರ ಸಚಿವ ನಡ್ಡಾ, ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಸತ್ತಾತ್ಮಕವಲ್ಲ. ಪ್ರತಿಪಕ್ಷವಾಗಿ ಹೇಗೆ ಕೆಲಸ ಮಾಡಬೇಕೆಂದ ನನ್ನಿಂದ ಟ್ಯೂಷನ್ ತೆಗೆದುಕೊಳ್ಳಿ. ಇದೇ ರೀತಿ ಮಾತನಾಡುತ್ತಿದ್ದರೆ ಮುಂದಿನ 40 ವರ್ಷ ನೀವು ವಿರೋಧ ಪಕ್ಷದಲ್ಲಿಯೇ ಇರುತ್ತೀರಿ ಎಂದು ನಡ್ಡಾ ಗುಡುಗಿದರು.