ಗರ್ಭಕಂಠದ ಕ್ಯಾನ್ಸರ್ (Cervical cancer) ಜಾಗೃತಿಗಾಗಿ ನಿನ್ನೆಯಷ್ಟೇ ಸತ್ತಿರುವುದಾಗಿ ಹುಚ್ಚಾಟ ಮಾಡಿರುವ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇದು ಜಾಗೃತಿಯಲ್ಲ, ಆಕೆ ಮಾಡಿರೋ ಹುಚ್ಚಾಟ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪೋಸ್ಟ್ ಹಾಕುತ್ತಿದ್ದಾರೆ.
ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಪೂನಂ ಪಾಂಡೆ ನಿಧನರಾಗಿದ್ದಾರೆ (Death) ಎಂದು ಈ ನಟಿಯ ಮ್ಯಾನೇಜರ್ ನಿನ್ನೆಯಷ್ಟೇ ಪೂನಂ ಅವರ ಅಧಿಕೃತ ಇನ್ಸ್ಟಾ ಪೇಜ್ ನಲ್ಲಿ ಹಾಕಲಾಗಿತ್ತು. ಈ ಸುದ್ದಿ ಓದಿ ಅನೇಕರು ಶಾಕ್ ಆಗಿದ್ದರು. ಅದರಲ್ಲೂ ಈ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆತಂಕಕ್ಕೀಡಾಗಿದ್ದರು.
ಇಂದು ಬೆಳಗ್ಗೆ ಅದೇ ಇನ್ಸ್ಟಾ ಪೇಜ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಪೂನಂ, ಇದೊಂದು ಜಾಗೃತಿಗಾಗಿ ಮಾಡಿರುವ ಗಿಮಿಕ್ ಎಂದು ಒಪ್ಪಿಕೊಂಡಿದ್ದಾರೆ. ಗಿಮಿಕ್ ಮಾಡಿ ಐಯಾಮ್ ಸಾರಿ ಎಂದೂ ಕೇಳಿದ್ದಾರೆ. ಈ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಪೂನಂ ವಿರುದ್ಧ ಕಾನೂನು ಕ್ರಮಕ್ಕೆ ಅನೇಕರು ಆಗ್ರಹ ಮಾಡಿದ್ದಾರೆ.
ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹರಡಿ ಜನರ ಭಾವನೆ ಜೊತೆ ಚೆಲ್ಲಾಟ ಆಡಬಾರದು. ಇದು ಗಂಭೀರ ವಿಚಾರ. ಜೊತೆಗೆ ಪೂನಂ ಪಾಂಡೆ ಸಾವಿನ ಸುಳ್ಳಿನಿಂದ ಇತರೆ ಗರ್ಭಕಂಠದ ಕ್ಯಾನ್ಸರ್ನಿಂದ ಬಳಲುತ್ತಿರುವವರು ಮಹಿಳೆಯರು ಕೂಡ ಶಾಕ್ ಗೆ ಒಳಗಾಗಿರುತ್ತಾರೆ. ಹೀಗಾಗಿ ಈ ರೀತಿ ಸುಳ್ಳು ಸುದ್ದಿ ಹರಡಿಸಿ ಗಿಮಿಕ್ ಮಾಡಿದ ಪೂನಂ ವಿರುದ್ಧ ಕ್ರಮ ತಗೆದುಕೊಳ್ಳಿ ಎಂದಿದ್ದಾರೆ ಅನೇಕರು.
ಕ್ಯಾನ್ಸರ್ ಬಗ್ಗೆ ಜಾಗೃತಿಯನ್ನು ಅನೇಕ ಸಲಬ್ರೇಟಿಗಳು ಮೂಡಿಸ್ತಾರೆ. ಆದ್ರೇ ಈ ರೀತಿ ಸಾವಿನ ಸುಳ್ಳು ಸುದ್ದಿ ಹರಡಿಸಿ ಜಾಗೃತಿ ಮೂಡಿಸೋದು ಅಲ್ಲ. ಜಾಗೃತಿ ಮೂಡಿಸೋಕೆ ನಾನಾ ದಾರಿಗಳಿವೆ. ಆದರೆ, ಈ ರೀತಿ ಮಾಡಿದ್ದು ಎಷ್ಟರಚ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.