ಬೇಸಿಗೆ ಬಂತೆಂದರೆ ಭವಿಷ್ಯದ ಅಮ್ಮಂದಿರಿಗೆ ಇನ್ನಿಲ್ಲದ ಬೇಸರ. ಗರ್ಭದಲ್ಲಿ ಪುಟ್ಟ ಕಂದಮ್ಮನನ್ನು ಹೊತ್ತುಕೊಂಡು ಬಿರುಬೇಸಿಗೆಯ ತಾಪ ತಾಳಲಾರದೆ ಒದ್ದಾಡುತ್ತಿರುತ್ತಾರೆ. ಯಾವಾಗ ಬೇಸಿಗೆ ಮುಗಿಯುತ್ತಪ್ಪ ಎಂದು ಕಾಯುತ್ತಿರುತ್ತಾರೆ. ತಾಯ್ತನವನ್ನು ಅನುಭವಿಸಲು ಕಾಯುತ್ತಿರುವ ಗರ್ಭಿಣಿಯರು ಆದಷ್ಟು ಬೇಗ ಈ ಸಮ್ಮರ್ ಮುಗಿಲಪ್ಪ ಎಂದು ಬೇಡಿಕೊಳ್ಳುತ್ತಿರುತ್ತಾರೆ.
ಗರ್ಭಿಣಿಯರು ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ಯಾಕಂದ್ರೆ ತಾಯಿ ಆರೋಗ್ಯವಾಗಿದ್ದರೆ ಮಾತ್ರ ಮಗುವೂ ಆರೋಗ್ಯವಾಗಿರುತ್ತದೆ. ಮಹಿಳೆಯ ಗರ್ಭಾವಸ್ಥೆಯ ದಿನಗಳು ಎಂದಿನಂತೆ ಇರುವುದಿಲ್ಲ. ಊಟ, ವಸತಿ, ಬಟ್ಟೆ, ಪಾನಿಯ, ಹೀಗೆ ಹತ್ತು ಹಲವು ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ ಗರ್ಭಿಣಿಯರಿಗಾಗಿ ಕೆಲವೊಂದು ಟಿಪ್ಸ್ ಗಳು ಇಲ್ಲಿವೆ.
Advertisement
Advertisement
* ಪ್ರತಿ ದಿನ 10 ರಿಂದ 12 ಗ್ಲಾಸ್ ನೀರು ಕುಡಿಯುವುದು. ಇದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಲ್ಲ.
* ದಿನಕ್ಕೆ ಅರ್ಧ ಲೀಟರ್ ನಷ್ಟಾದರೂ ಹಾಲು ಕುಡಿಯಬೇಕು.
* ಸಡಿಲವಾದ ಕಾಟನ್ ಬಟ್ಟೆ ಮತ್ತು ಹತ್ತಿ ಬಟ್ಟೆ ಧರಿಸುವುದು ಉತ್ತಮ.
* ಮಾರುಕಟ್ಟೆಯಲ್ಲಿ ಗರ್ಭಿಣಿಯರಿಗಾಗಿಯೇ ಮ್ಯಾಕ್ಸಿ, ಗೌನ್, ಸಡಿಲವಾದ ಹತ್ತಿ ಬಟ್ಟೆ, ತಿಳಿ ಬಣ್ಣದ ಬಟ್ಟೆಗಳು ಸಿಗುತ್ತಿದ್ದು, ಅವುಗಳನ್ನು ಧರಿಸುವುದು ಉತ್ತಮ.
* ಕೇವಲ ಹತ್ತಿ ಬಟ್ಟೆ ದೇಹದ ಉಷ್ಣವನ್ನು ಮತ್ತು ಬೆವರನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ.
* ಬಿಸಿಲಿನಲ್ಲಿ ಹೆಚ್ಚು ಸುತ್ತಾಟ ಬೇಡ. ಹೋಗಲೇಬೇಕಿದ್ದರೆ ಸನ್‍ಗ್ಲಾಸ್, ಛತ್ರಿ, ಸನ್ ಸ್ಕ್ರೀನ್ ಲೋಷನ್ ಬಳಸುವುದು ಒಳ್ಳೆಯದು.
* ಬೆಳಗ್ಗೆ 10 ರಿಂದ ಸಂಜೆ 4.30ರ ವರೆಗೆ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.
Advertisement
* ಆದಷ್ಟು ಕಾಫಿ, ಟೀ ಕಡಿಮೆ ಮಾಡಿ.
* ಉದ್ದವಾದ ಕೂದಲಿದ್ದರೆ, ಅಂತಹವರು ಕೂದಲನ್ನು ಸೇರಿಸಿ ಗಂಟು ಹಾಕಿ, ಬನ್ ಹಾಕಿ. ಇದರಿಂದ ಬೆವರುವುದನ್ನು ಕಡಿಮೆ ಮಾಡಬಹುದು.
* ಬೇಸಿಗೆ ಕಾಲದಲ್ಲಿ ಹೆಚ್ಚು ಮಸಾಲೆ ಪದಾರ್ಥಗಳ ಸೇವನೆ ಬೇಡ.
* ಒಂದೇ ಬಾರಿ ತಿನ್ನುವುದಕ್ಕಿಂತ ಆಗಾಗ ತಿನ್ನುವುದು ಒಳ್ಳೆಯದು.
* ಹೆಚ್ಚೆಚ್ಚು ಸೌತೆಕಾಯಿ ಸೇವಿಸಿ, ಎಳನೀರು ಕುಡಿಯುವುದು, ಮಜ್ಜಿಗೆ, ಲಸ್ಸಿ ಕುಡಿಯಿರಿ
* ಕಿತ್ತಳೆ ಹಣ್ಣಿನ ರಸ, ನಿಂಬೆಹಣ್ಣಿನ ರಸ ಸೇವಿಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.