ಹುಟ್ಟುಹಬ್ಬದಂದು ರಜೆ ತೆಗೆದುಕೊಂಡು ಆನಂದಿಸಿ- ಮೋದಿಗೆ ಶಾರುಖ್ ಖಾನ್ ಸಲಹೆ

Advertisements

ಮುಂಬೈ: ಪ್ರಧಾನಿ ನರೇಂದ್ರ ಮೋದಿ(Narendra Modi) ಜನ್ಮದಿನಕ್ಕೆ(Birthday) ಬಾಲಿವುಡ್‍ನ ಸೂಪರ್‌ಸ್ಟಾರ್ ಶಾರುಖ್ ಖಾನ್(Shah Rukh Khan) ಶುಭಕೋರಿದ್ದು, ಈ ದಿನದಂದು ರಜೆ ತೆಗೆದುಕೊಂಡು ಆನಂದಿಸಿ ಎಂದು ತಿಳಿಸಿದ್ದಾರೆ.

Advertisements

ಪ್ರಧಾನಿ ಮೋದಿ ಅವರು ಇಂದು 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು, ಸೆಲಿಬ್ರಿಟಿಗಳು ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ. ಅದೇ ರೀತಿ ಬಾಲಿವುಡ್ ಬಾದ್‍ಶಾ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ದಾರೆ. ಇದನ್ನೂ ಓದಿ: ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್

Advertisements

ಟ್ವೀಟ್‍ನಲ್ಲಿ ಏನಿದೆ?: ನಮ್ಮ ದೇಶ ಮತ್ತು ಅದರ ಜನರ ಕಲ್ಯಾಣಕ್ಕಾಗಿ ನಿಮ್ಮ ಸಮರ್ಪಣೆಯನ್ನು ಹೆಚ್ಚು ಪ್ರಶಂಸಿಸಲಾಗುತ್ತದೆ. ನಿಮ್ಮ ಎಲ್ಲಾ ಗುರಿಗಳನ್ನು ಸಾಧಿಸುವ ಶಕ್ತಿ ಮತ್ತು ಆರೋಗ್ಯವನ್ನು ನೀವು ಹೊಂದಿರಲಿ. ಒಂದು ದಿನ ಬಿಡುವು ಮಾಡಿಕೊಂಡು ನಿಮ್ಮ ಜನ್ಮದಿನವನ್ನು ಆನಂದಿಸಿ ಎಂದು ಹುಟ್ಟುಹಬ್ಬಕ್ಕೆ ಶುಭ ಕೋರಿ ಶುಭ ಹಾರೈಸಿದರು. ಇದನ್ನೂ ಓದಿ: ದುವೆಯಾಗುವ ಹುಡುಗಿಯ ಬಗ್ಗೆ ಕೊನೆಗೂ ಮೌನ ಮುರಿದ ಧನಂಜಯ್

Live Tv

Advertisements
Exit mobile version