– ಗುಮ್ಮಟದ ಉತ್ತರ ಭಾಗದಲ್ಲಿ ಅಮೃತಶಿಲೆಯ ಮಧ್ಯೆ ಬಿರುಕು
ನವದೆಹಲಿ: ವಿಶ್ವದ ಅದ್ಭುತಗಳಲ್ಲಿ ಒಂದಾದ ತಾಜ್‌ಮಹಲ್‌ನ (TajMahal) ಕೇಂದ್ರ ಗುಮ್ಮಟದ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಈ ಕುರಿತು ಪ್ರವಾಸಿಗರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹಂಚಿಕೊಂಡಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ತೀವ್ರ ಮಳೆಯಾದ ಕಾರಣ ತಾಜ್‌ಮಹಲ್‌ನ ಕೇಂದ್ರ ಗುಮ್ಮಟದ ಅಮೃತಶಿಲೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜೊತೆಗೆ ಆ ಬಿರುಕಿನಲ್ಲಿ ಸಸಿ ಬೆಳೆದಿರುವ ಫೋಟೋ ಕೂಡ ವೈರಲ್ ಆಗಿದೆ.ಇದನ್ನೂ ಓದಿ: ನಿಮ್ಮ ಮಗಳಿಗೆ ಮದುವೆ ಆಗಲ್ಲ- ಸಂಬಂಧಿಕರ ಕೊಂಕು ಮಾತಿನ ಬಗ್ಗೆ ಮಾತನಾಡಿದ ತೃಪ್ತಿ
ಗುಮ್ಮಟದ ಉತ್ತರ ಭಾಗದಲ್ಲಿರುವ ಅಮೃತಶಿಲೆಯ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಆ ಬಿರುಕಿನ ಮೂಲಕ ಮಳೆ ನೀರು ಸೋರಿಕೆಯಾಗಿ ಕೆಳಗಿರುವ ಸಮಾಧಿಯನ್ನು ತಲುಪುತ್ತಿವೆ.
ಡ್ರೋನ್ ಬಳಸಿ ಗುಮ್ಮಟ ಪರೀಕ್ಷೆ ಮಾಡಿದಾಗ ಅಮೃತಶಿಲೆಯ ತಳದಲ್ಲಿ ತುಕ್ಕು ಹಿಡಿದಿರುವುದು ಕಂಡುಬಂದಿದೆ. ತುಕ್ಕು ಹಿಡಿದಿರುವುದರಿಂದ ಬಿರುಕು ಉಂಟಾಗಿದ್ದು, ನೀರು ಸೋರಿಕೆಗೆ ಕಾರಣವಾಗಿದೆ.
ಭವಿಷ್ಯದ ದೃಷ್ಟಿಯಿಂದ ನೀರಿನ ಸೋರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು. ಗುಮ್ಮಟದ ಮೇಲ್ಮೈ ಒಣಗಿದಂತೆ, ದುರಸ್ತಿ ಕಾರ್ಯವನ್ನು ಪ್ರಾರಂಭಿಸಲಾಗುವುದು. ಸ್ವಲ್ಪ ಕಾಲವಕಾಶ ತೆಗೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ
ಟೂರಿಸ್ಟ್ ಗೈಡ್ ಫೆಡರೇಶನ್ ಆಫ್ ಇಂಡಿಯಾದ (Tourist Guide Federation Of India) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಕೀಲ್ ಚೌಹಾಣ್ ಮಾತನಾಡಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ತಾಜ್‌ಮಹಲ್ ಸಂರಕ್ಷಣೆಗೆ ವಾರ್ಷಿಕವಾಗಿ 4 ಕೋಟಿ ರೂ. ವ್ಯಯಿಸುತ್ತದೆ. ಇಂತಹ ಚಿತ್ರಗಳು ಸ್ಮಾರಕದ ಖ್ಯಾತಿಗೆ ಮಸಿ ಬಳಿಯುತ್ತವೆ. ಮಳೆಗಾಲದ ನಂತರ ಸಂರಕ್ಷಣಾ ಕಾರ್ಯಕ್ಕೆ ಕರೆ ನೀಡಲಾಗುವುದು ಮತ್ತು ಈಗ ಕಾಣಿಸಿಕೊಂಡಿರುವ ಸಸ್ಯ ಕಳೆದ 15 ದಿನಗಳಲ್ಲಿ ಬೆಳೆದಿದ್ದು, ತಕ್ಷಣವೇ ತೆಗೆದುಹಾಕಲಾಗುವುದು ಎಂದು ತಿಳಿಸಿದ್ದಾರೆ.