– ತಹಶೀಲ್ದಾರ್ ಕಚೇರಿ ಮೇಲೆ ಕಲ್ಲು ತೂರಿದ ದುಷ್ಕರ್ಮಿಗಳು
ಬೆಳಗಾವಿ: ಹುತಾತ್ಮ ವೀರ ಯೋಧ ಉಮೇಶ್ ಹೆಳವರ್ ಅವರ ಅಂತ್ಯಕ್ರಿಯೆಗೆ ಸರ್ಕಾರಿ ಜಾಗ ನೀಡಬೇಕು ಅಂತಾ ಒತ್ತಾಯಿಸಿ ಕೆಲ ದುಷ್ಕರ್ಮಿಗಳು ಗೋಕಾಕ್ ತಹಶೀಲ್ದಾರ್ ಕಚೇರಿಗೆ ಕಲ್ಲು ತೂರಿದ್ದಾರೆ.
ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಜಾಗ ನೀಡದ್ದಕ್ಕೆ ಕೋಪಗೊಂಡ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮುಖಂಡರು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ನಡೆಸಿದರು. ಈ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ತೂರಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳ ಪುಂಡಾಟಕ್ಕೆ ತಹಶೀಲ್ದಾರ್ ಕಚೇರಿಯ ಕಿಟಕಿಯ ಗಾಜುಗಳು ಒಡೆದು ಬಿದ್ದಿವೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗೋಕಾಕ್ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನು ಓದಿ: 20 ಜನರ ಪ್ರಾಣ ಉಳಿಸಿ ಗೋಕಾಕ್‍ನ ವೀರಯೋಧ ಹುತಾತ್ಮ!
ಉಮೇಶ್ ಉಮೇಶ್ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ನಿವಾಸಿಯಾಗಿದ್ದು, ಮಣಿಪುರ ರಾಜ್ಯದ ಇಂಫಾಲದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಾಗಂಪಾಲ್ ಎಂಬ ಸ್ಥಳದಲ್ಲಿ ಶನಿವಾರ ಸಂಜೆ ಹ್ಯಾಂಡ್ ಗ್ರೆನೇಡ್ ಸ್ಫೋಟಗೊಂಡು ಮೃತಪಟ್ಟಿದ್ದಾರೆ. ಉಮೇಶ್ ಗ್ರೆನೇಡ್ ಸಮೇತ ಹೊರಗೆ ಹಾರಿ 20 ಜನರ ಪ್ರಾಣ ಉಳಿಸಿ ತಾವು ಹುತಾತ್ಮರಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv