ಬೆಂಗಳೂರು: ಶಿವಣ್ಣನ ‘ಟಗರು’ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಓಡುತ್ತಿದೆ. ಟಗರಿಗೆ ನಿರೀಕ್ಷೆಗೂ ಮೀರಿದ ಪ್ರೀತಿ ಸಿಕ್ಕಿದ್ದಕ್ಕೆ ಶಿವರಾಜ್ ಕುಮಾರ್ ಫುಲ್ ಖುಷಿಯಾಗಿದ್ದಾರೆ. ಟಗರು ಚಿತ್ರದ ಬಗ್ಗೆ ಶಿವಣ್ಣ ಏನ್ ಹೇಳಿದ್ರು ಅನ್ನೋ ಕುತೂಹಲ ತಣಿಸೋಕೆ ಮುಂದೆ ಓದಿ.
ಟಗರು ಬಿಡುಗಡೆಯಾಗಿದೆ. ನಿಮ್ಮ ಗಮನಕ್ಕೆ ಬಂದ ವಿಶೇಷಗಳೇನು?
– ಟಗರು ಶಿವನನ್ನು ನೋಡಿ ಜನ ಎಂಜಾಯ್ ಮಾಡೋದರ ಜೊತೆಗೆ ಮತ್ತು ಅದಕ್ಕೆ ಸಮಾನವಾಗಿ ಡಾಲಿ ಡಾಲಿ ಅಂತಾ ಕೂಗಾಡುತ್ತಿದ್ದಾರೆ. ಎರಡೂ ಪಾತ್ರಕ್ಕೆ ಈಕ್ವಲ್ ರೆಸ್ಪಾನ್ಸ್ ಬರುತ್ತಿರೋದು ನೋಡಿ ನಿಜಕ್ಕೂ ನನಗೆ ಸಂತೋಷವಾಗಿದೆ. ಇದನ್ನೂ ಓದಿ: ಅಸಾಧ್ಯವಾಗಿದ್ದನ್ನು ಸಾಧ್ಯ ಮಾಡಿದೆ ಟಗರು: ಚಿತ್ರ ನೋಡಿ ವಿಮರ್ಶೆ ಬರೆದ ಸುದೀಪ್
ಆರಂಭದಲ್ಲಿ ಸೂರಿ ಕಥೆ ಹೇಳಿದಾಗ ಮತ್ತು ಚಿತ್ರೀಕರಣ ಮಾಡುವಾಗ ನಿಮಗೆ ಗೊಂದಲವಾಗಿರಲಿಲ್ಲವಾ?
– ಸಾಮಾನ್ಯವಾಗಿ ಸೂರಿ ಪೂರ್ತಿ ಕತೆಯೇನೂ ಹೇಳೋದಿಲ್ಲ.. ಹೀಗೀಗೆ ಇರತ್ತೆ ಅಂದಷ್ಟೇ ಹೇಳಿರ್ತಾರೆ. ಬಟ್ ಶೂಟಿಂಗ್ ಟೈಮಲ್ಲಿ ನನಗೆ ಏನಂದರೆ ಏನೂ ಗೊತ್ತಾಗುತ್ತಿರಲಿಲ್ಲ. ಸೆಟ್‍ಗೆ ಹೋಗಿ ಸೂರಿ ಹೇಳಿದ್ದಷ್ಟನ್ನೇ ಮಾಡಿ ಬರ್ತಾಇದ್ದೆ. ಒಂದೊಂದು ಸಲ ಸಿಕ್ಕಾಪಟ್ಟೆ ಕನ್ಫ್ಯೂಸ್ ಅನಿಸ್ತಿತ್ತು. ಆಗ ಸೂರಿ ಅವರ ಅಸಿಸ್ಟೆಂಟ್ ಅಭಿಯ ಬಳಿ ಏನ್ ನಡೀತಿದೆ ಅಂತಾ ವಿಚಾರಿಸಿಕೊಳ್ತಿದ್ದೆ. ಆತ ಹೀಗೀಗೆ… ತುಂಬಾ ಬೇರೆನೇ ರೀತಿ ಸೂರಿ ಸರ್ ಪ್ಲಾನ್ ಮಾಡಿದಾರೆ. ಅಂದುಕೊಂಡಿದ್ದಕ್ಕಿಂತಾ ಚನ್ನಾಗಿ ಬರ್ತಿದೆ ಎನ್ನುತ್ತಿದ್ದ. ಈಗ ತೆರೆ ಮೇಲೆ ನೋಡಿ ನನಗೇ ಆಶ್ಚರ್ಯವಾಗುತ್ತಿದೆ. ಇದನ್ನೂ ಓದಿ: ಪೊಗದಸ್ತಾದ ಟಗರು!
ಸಿನಿಮಾದಲ್ಲಿ ಡಾಲಿ ಮತ್ತು ಕಾಕ್ರೋಜ್ ನಿಮ್ಮನ್ನು ಬಯ್ಯುವ ದೃಶ್ಯಗಳಿವೆಯಲ್ಲಾ? ನೀವು ಅದನ್ನು ಹೇಗೆ ಸ್ವೀಕಾರ ಮಾಡಿದಿರಿ?
– ನೋಡಿ… ಸಿನಿಮಾವನ್ನು ಸಿನಿಮಾ ಆಗಿ ನೋಡಬೇಕೇ ಹೊರತು ಪರ್ಸನಲ್ ಆಗಿ ತೆಗೆದುಕೊಳ್ಳಬಾರದು. ನಾವು ರಸ್ತೆಯಲ್ಲಿ ಹೋಗಬೇಕಾದರೆ ಯಾರಾದರೂ ಸಡನ್ ಆಗಿ ಅಡ್ಡ ಬಂದ್ರೆ ನಮಗೇ ಗೊತ್ತಿಲ್ಲದಂತೆ ಬೈದುಕೊಳ್ಳೋದಿಲ್ಲವಾ? ಅವೆಲ್ಲಾ ಮನುಷ್ಯ ಸಹಜ ಗುಣಗಳು. ಅದನ್ನೆಲ್ಲಾ ಸಿನಿಮಾದಲ್ಲಿ ತೋರಿಸಿದರೇನೇ ತಾನೆ ನ್ಯಾಚುರಲ್ ಅನಿಸೋದು. ಆದರೂ ಎಲ್ಲರ ಒತ್ತಾಯದ ಮೇರೆ ಆ ದೃಶ್ಯಗಳ ಸಂಭಾಷಣೆಯನ್ನು ಮ್ಯೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಭರ್ಜರಿಯಾಗಿ ನಡೆದ ಟಗರು ಸಿನಿಮಾದ ಶೂಟಿಂಗ್- ಫೋಟೋಗಳಲ್ಲಿ ನೋಡಿ
ಭೈರತಿ ರಣಗಲ್ ಆಯ್ತು ಈಗ ಟಗರು ಶಿವ… ನಿಮಗೆ ಈ ಸಂದರ್ಭಕ್ಕೆ ಒಪ್ಪುವಂಥಾ ಕ್ಯಾರೆಕ್ಟರುಗಳು ಕ್ರಿಯೇಟ್ ಆಗುತ್ತಿವೆ ಅನಿಸುತ್ತಿದೆಯಾ?
– ಎಸ್… ಖಂಡಿತಾ. ನೋಡಿ ನೂತನ್ ಎಂಥಾ ಒಳ್ಳೇ ಪಾತ್ರವನ್ನ ಬರೆದರು. ಈಗ ಸೂರಿ ಕೂಡಾ ನನಗೆ ಹೇಳಿಮಾಡಿಸಿದಂತಾ ಕ್ಯಾರೆಕ್ಟರ್ ಸೃಷ್ಟಿಸಿದ್ದಾರೆ. ಇನ್ನು ನನ್ನ ಮುಂದಿನ ಸಿನಿಮಾ ಕವಚದಲ್ಲಿ ಕೂಡಾ ಅಷ್ಟೇ. ಅದು ರಿಮೇಕ್ ಸಿನಿಮಾ ಆದರೂ ಆ ಸಿನಿಮಾದ ಕ್ಯಾರೆಕ್ಟರ್ ಭಾಳಾ ಪವರ್ ಫುಲ್. ಒಬ್ಬ ಕುರುಡನ ಪಾತ್ರವದು. ಅದು ಬೇರೆಲ್ಲಾ ಪಾತ್ರಕ್ಕಿಂತಾ ಭಿನ್ನವಾಗಿದೆ. ಕಣ್ಣು ಕಾಣದವನಂತೆ ಎಲ್ಲವನ್ನೂ ಫೀಲ್ ಮಾಡಿ ನಟಿಸೋದು ಕೂಡಾ ಚಾಲೆಂಜಿಂಗ್ ವಿಚಾರ.