ರಾಮನಗರ: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅಭಿನಯದ `ಟಗರು’ ಚಿತ್ರ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸ್ತಾ ಇದೆ. ಶಿವಣ್ಣನ ಚಿತ್ರಕ್ಕಾಗಿ ಕಾದು ಕೂತ ಶಿವಣ್ಣನ ಅಭಿಮಾನಿಗಳು ತಮ್ಮ ಅಭಿಮಾನವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸ್ತಿದ್ದಾರೆ.
ಬೊಂಬೆನಗರಿ ಚನ್ನಪಟ್ಟಣದಲ್ಲೊಬ್ಬ ಶಿವಣ್ಣನ ಅಭಿಮಾನಿ `ಟಗರು’ ಚಿತ್ರದ ಟೈಟಲ್‍ನ್ನು ತನ್ನ ಹೇರ್‍ಕಟ್‍ನಲ್ಲಿ ಮೂಡಿಸಿಕೊಂಡಿದ್ದಾರೆ. ಚನ್ನಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಚಂದ್ರಕುಮಾರ್ ತನ್ನ ಹೇರ್ ಸ್ಟೈಲ್ ಮೂಲಕ ಚಿತ್ರದ ಪ್ರಮೋಷನ್ ಮಾಡ್ತಿದ್ದಾನೆ. ಅಲ್ಲದೇ ಚನ್ನಪಟ್ಟಣದ ಶಿವಾನಂದ ಥಿಯೇಟರ್ ಬಳಿ ನಿಂತು ಚಿತ್ರ ವೀಕ್ಷಣೆಗೆ ಬರುತ್ತಿರುವ ಚಿತ್ರರಸಿಕರ ಗಮನ ಸೆಳೆಯುತ್ತಿದ್ದಾರೆ. ಇದನ್ನೂ ಓದಿ; ಪೊಗದಸ್ತಾದ ಟಗರು!
ಶಿವರಾಜ್ ಕುಮಾರ್ ರವರ ಅಪ್ಪಟ ಅಭಿಮಾನಿಯಾಗಿರುವ ಚಂದ್ರಕುಮಾರ್ ತನ್ನ ಹೇರ್ ಸ್ಟೈಲ್ ನೋಡಿ ಟಗರು ಚಿತ್ರವನ್ನ ಹೆಚ್ಚಾಗಿ ವೀಕ್ಷಣೆ ಮಾಡಲು ಅಲ್ಲದೇ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಹಾರೈಸ್ತಿದ್ದಾರೆ.
ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಠ ಸಿಂಹ ಅಭಿನಯಿಸಿದ್ದಾರೆ. ಇನ್ನು ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.