Friday, 22nd March 2019

Recent News

2 months ago

ಕುಡಚಿ ಶಾಸಕ ಕಾರ್ಮಿಕನಾಗಿ ಕಲ್ಲು ಒಡೆಯುತ್ತಿರುವ ವಿಡಿಯೋ ವೈರಲ್

ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯ ಕುಡಚಿ ಕ್ಷೇತ್ರದ ಬಿಜೆಪಿ ಶಾಸಕ ಪಿ. ರಾಜೀವ್ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯಾಗುತ್ತಾರೆ. ಆದರೆ ಶಾಸಕ ಪಿ. ರಾಜೀವ್ ಕ್ಷೇತ್ರದ ಜನರಿಗೆ ಅಷ್ಟೇ ಸ್ನೇಹ ಜೀವಿ ಕೂಡ ಆಗಿದ್ದಾರೆ. ಬಹಳಷ್ಟು ಕ್ಷೇತ್ರದ ಶಾಸಕರು ಕ್ಷೇತ್ರದಲ್ಲೇ ಇರುವುದಿಲ್ಲ ಎಂದು ಜನರು ಆರೋಪವನ್ನು ಮಾಡುತ್ತಾರೆ. ಆದರೆ ಕುಡಚಿ ಶಾಸಕ ಪಿ. ರಾಜೀವ್ ಕ್ಷೇತ್ರದಲ್ಲಿ ಕಲ್ಲು ಒಡೆಯುವ ಕಾರ್ಯ ನಿರ್ವಹಿಸಿರುವ ವಿಡಿಯೋ ಈಗ ವೈರಲ್ ಆಗಿದೆ. ಶಾಸಕ ಪಿ. ರಾಜೀವ್ ಕಾಮಗಾರಿ ವೀಕ್ಷಣೆಗೆ ಹೋಗಿ […]

3 months ago

ರಾಜಕಾಲುವೆ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ದುರ್ಮರಣ

ಬೆಂಗಳೂರು: ರಾಜಕಾಲುವೆ ಕಾಮಗಾರಿಯ ವೇಳೆ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ದುರ್ದೈವಿ ಕಾರ್ಮಿಕನನ್ನು 27 ವರ್ಷದ ಮಡಿವಾಳಪ್ಪ ಗೌಡ ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಜಿಲ್ಲೆಯ ಶಹಾಪುರ ತಾಲೂಕಿನ ಆಲಗಡಲಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಮಡಿವಾಳಪ್ಪ ಇಲ್ಲಿ ಕೆಲಸ ಮಾಡುತ್ತಿದ್ದು, ಇಂದು ಈ...

ಕೂಲಿ ಕಾರ್ಮಿಕ ಆತ್ಮಹತ್ಯೆಗೆ ಶರಣು

4 months ago

ಬೀದರ್: ಸಾಲಬಾಧೆಯಿಂದ ಮನನೊಂದು ಕೂಲಿ ಕಾರ್ಮಿಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಬರ್ಗಾನ್ ತಾಂಡದಲ್ಲಿ ನಡೆದಿದೆ. ರಾಮ್‍ರಾವ್ ರಾಥೋಡ್ (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ರಾಮ್‍ರಾವ್ ಖಾಸಗಿಯಾಗಿ ಸಾಲ ಮಾಡಿಕೊಂಡು ಅದನ್ನು ಮರುಪಾವತಿ ಮಾಡಲಾದಗೆ...

6 ಗಂಟೆ ಸಮುದ್ರದಲ್ಲಿ ಈಜಿ ಸಾವನ್ನೇ ಗೆದ್ದು ಬಂದ ಮೀನುಗಾರ!

7 months ago

ಮಂಗಳೂರು: ಮೀನುಗಾರಿಕೆಗೆ ಹೊರಟಿದ್ದ ಬೋಟ್‍ನಿಂದ ಸಮುದ್ರಕ್ಕೆ ಬಿದ್ದಿದ್ದ ಮೀನುಗಾರ 6 ಗಂಟೆಗಳ ಬಳಿಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಗುರುವಾರ ಬೆಳಗ್ಗೆ ಮೀನುಗಾರಿಕೆಗೆ ಹೋಗಿದ್ದಾಗ ಸಂಜೆಯ ವೇಳೆ ಬೋಟ್‍ನಲ್ಲಿದ್ದ ತಮಿಳುನಾಡಿನ ಕಾರ್ಮಿಕ ನಾಗರಾಜ್ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದರು. ತಕ್ಷಣವೇ ಅವರ ರಕ್ಷಣೆಗೆ ಮುಂದಾಗಿದ್ದರೂ ನಾಗರಾಜ್...

ಪ್ರತ್ಯೇಕ ಕಡೆ ವಿದ್ಯುತ್ ತಂತಿ ಸ್ಪರ್ಶಿಸಿ ಓರ್ವ ಕಾರ್ಮಿಕ ಹಾಗೂ ಇಬ್ಬರು ರೈತರ ಸಾವು

8 months ago

ಕಾರವಾರ: ವಿದ್ಯುತ್ ತಂತಿ ತಗುಲಿ ಪ್ರತ್ಯೇಕ ಕಡೆ ಮೂವರು ಸಾವನ್ನಪ್ಪಿದ ಘಟನೆ ಯಲ್ಲಾಪುರ ನಗರ ಹಾಗೂ ದುಂಡ್ಯಾನಕೊಪ್ಪ ಗ್ರಾಮದಲ್ಲಿ ನಡೆದಿದೆ. ನಾಗರಾಜ್ ಚನ್ನಪ್ಪ ಕಲಸೂರು(35) ಮೃತಪಟ್ಟ ಕಾರ್ಮಿಕ. ನಾಗರಾಜ್ ಮೂಲತಃ ಕಲಘಟಗಿ ತಾಲೂಕಿನ ತಂಬೂರು ಗ್ರಾಮದವರಾಗಿದ್ದಾರೆ ಎಂದು ತಿಳಿದು ಬಂದಿದೆ.  ಕಾರ್ಮಿಕ...

ಮೇಯರ್, ಆಯುಕ್ತರು ಆದೇಶಿಸಿದ್ರೂ ಪೌರಕಾರ್ಮಿಕರಿಗೆ ಇನ್ನೂ ಸಂಬಳವಾಗಿಲ್ಲ!

8 months ago

ಬೆಂಗಳೂರು: ನಗರದ ಪೌರ ಕಾರ್ಮಿಕರ ಪರಿಸ್ಥಿತಿ ದೇವರು ಕೊಟ್ರೂ ಪೂಜಾರಿ ಕೊಡ್ತಿಲ್ಲ ಎಂಬಂತಾಗಿದೆ. ಎಲ್ಲಾ ಪೌರಕಾರ್ಮಿಕರ ಅಕೌಂಟ್ ಗೂ ಸಂಬಳ ಹಾಕಿ ಅಂತ ಆದೇಶ ಆಗಿ ಎರಡು ದಿನವಾದ್ರೂ ದುಡ್ಡು ಮಾತ್ರ ಇನ್ನೂ ಬಿದ್ದಿಲ್ಲ. ಈ ಬಗ್ಗೆ ಗುರುವಾರ ಬಿಬಿಎಂಪಿ ಕೌನ್ಸಿಲ್...

ವೈಟಿಪಿಎಸ್‍ನಲ್ಲಿ ಅವಘಡ- 30 ಅಡಿ ಆಳದಲ್ಲಿ ಮಣ್ಣು ಕುಸಿದು ಬಿದ್ದು ಕಾರ್ಮಿಕ ಗಂಭೀರ

12 months ago

ರಾಯಚೂರು: ನಗರದ ವೈಟಿಪಿಎಸ್‍ನಲ್ಲಿ ಭೀಕರ ಅವಘಡವೊಂದು ಸಂಭವಿಸಿದ ಪರಿಣಾಮ ಕಾರ್ಮಿಕ ಗಂಭೀರವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ರಾಯಚೂರಿನ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ರೈಲ್ವೆ ಹಳಿಗಾಗಿ ಭೂಮಿ ಅಗೆಯುವಾಗ ಮಣ್ಣು ಕುಸಿದು ಬಿದ್ದುದರಿಂದ 30 ಅಡಿ ಆಳದಲ್ಲಿದ್ದ ಕಾರ್ಮಿಕ ಮಣ್ಣಿನಡಿ ಸಿಲುಕಿ...

ಮೈಸೂರು ಮೃಗಾಲಯದಲ್ಲಿ ಕಾರ್ಮಿಕನ ಬೆರಳುಗಳನ್ನು ಕಚ್ಚಿ ತಿಂದ ಮೊಸಳೆ!

1 year ago

ಮೈಸೂರು: ಇಲ್ಲಿನ ಮೃಗಾಲಯದಲ್ಲಿ ಭಾರೀ ಅವಘಡವೊಂದು ನಡೆದಿದೆ. ಮೊಸಳೆಯೊಂದು ಮೃಗಾಲಯದ ಕಾರ್ಮಿಕನ ಕಾಲು ಕಚ್ಚಿ ತಿಂದ ಆಘಾತಕಾರಿ ಘಟನೆ ಮೊಸಳೆ ಮನೆಯಲ್ಲಿ ನಡೆದಿದೆ. ಮಂಗಳವಾರ ಮೃಗಾಲಯಕ್ಕೆ ವಾರದ ರಜೆ ಇತ್ತು. ಹೀಗಾಗಿ ಮೊಸಳೆ ಮನೆಯ ಕಾರ್ಮಿಕ ಪುಟ್ಟಸ್ವಾಮಿ ಶುಚಿತ್ವದ ಕೆಲಸ ಮಾಡುತ್ತಿದ್ದರು....