Sunday, 23rd February 2020

Recent News

2 years ago

193 ಕೋಟಿ ರೂ. ವಂಚನೆ: ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ದೂರು ದಾಖಲು

ಉಡುಪಿ: ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ದೂರು ದಾಖಲಾಗಿದೆ. ಮಧ್ವರಾಜ್ ಅವರು ಸಿಂಡಿಕೇಟ್ ಬ್ಯಾಂಕಿನ ಮಲ್ಪೆ ಶಾಖೆಯಲ್ಲಿ ಕೇವಲ 1.01 ಕೋಟಿ ರೂಪಾಯಿ ಮೌಲ್ಯದ ಸೊತ್ತುಗಳ ದಾಖಲೆ ನೀಡಿ 193 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಈ ಅಕ್ರಮಕ್ಕೆ ಬ್ಯಾಂಕ್ ಅಧಿಕಾರಿಗಳು ಕುಮ್ಮಕ್ಕು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವಾಲಯದ ಹಣಕಾಸು ಸೇವಾ ವಿಭಾಗದಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕಡಿಮೆ ಮೊತ್ತದ ದಾಖಲೆ ನೀಡಿ ನೂರಾರು ಕೋಟಿ ರೂಪಾಯಿ […]

2 years ago

ಸ್ವತಂತ್ರವಾಗಿ ಹೊರಟಿದ್ದ ಶೀರೂರು ಶ್ರೀಗಳಿಗೆ ಜೆಡಿಯು ಗಾಳ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದ ಅಧೀನದಲ್ಲಿರುವ ಶೀರೂರು ಮಠಾಧೀಶರಿಗೆ ಜೆಡಿಯು ಪಕ್ಷ ಗಾಳ ಹಾಕಿದೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಹೇಳಿದ್ದ ಲಕ್ಷ್ಮೀವರ ತೀರ್ಥ ಶ್ರೀಪಾದರಿಗೆ ಜೆಡಿಯು ಪಕ್ಷ ಸೇರುವಂತೆ ಪತ್ರ ಬರೆದಿದೆ. ಜೆಡಿಯು ಜಿಲ್ಲಾಧ್ಯಕ್ಷರು ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ತಾವು ಇಚ್ಛಿಸಿದರೆ ಜೆಡಿಯುನಿಂದ ಟಿಕೆಟ್ ನೀಡುವುದಾಗಿ ಆಫರ್ ಕೊಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಜೆಡಿಯು...

ಶೀರೂರು ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ- ಅವಕಾಶ ಸಿಕ್ಕರೆ ಬಿಜೆಪಿಯಿಂದ್ಲೇ ಸ್ಪರ್ಧೆ

2 years ago

ಉಡುಪಿ: ಇಲ್ಲಿನ ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ಉಡುಪಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ ಅವರು, ಬಿಜೆಪಿಯಿಂದ ಟಿಕೆಟ್ ಕೊಟ್ಟರೆ...

ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್!

2 years ago

ಉಡುಪಿ: ವಿಶೇಷ ನ್ಯಾಯಾಲಯದಿಂದ ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸರ್ಕಾರಿ ಭೂಮಿ ಒತ್ತುವರಿ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದರಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಬೆಂಗಳೂರಲ್ಲಿರುವ ಭೂ ಒತ್ತುವರಿ ಕುರಿತ ವಿಶೇಷ ನ್ಯಾಯಾಲಯ ಬಂಧನದ...

ನವಶಕ್ತಿ ವೈಭವ ನೃತ್ಯದ ವೇಳೆ ಆವೇಶಗೊಂಡ ಯುವತಿಯರು – ವಿಡಿಯೋ ವೈರಲ್

2 years ago

ಉಡುಪಿ: ನವಶಕ್ತಿ ವೈಭವ ನೃತ್ಯ ಪ್ರದರ್ಶನದ ವೇಳೆ ಯುವತಿಯರು ಆವೇಶಗೊಂಡ ಘಟನೆ ಉಡುಪಿಯ ಮಲ್ಪೆ ಪಡುಕೆರೆಯಲ್ಲಿ ನಡೆದಿದೆ. ಇಲ್ಲಿನ ಪಡುಕರೆಯಲ್ಲಿನ ಭಜನಾ ಮಂದಿರವೊಂದರ 25 ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಸದ್ಯ ಯುವತಿಯರು ಆವೇಶಗೊಂಡು ನಂತರ ಸಾರ್ವಜನಿಕರ ಸಹಾಯದಿಂದ...

ಚಿಕ್ಕ ವಯಸ್ಸಲ್ಲೇ ಪಟ್ಟ ಒಲಿದಿದೆ, ಮುಂದೆ ಸಾಗು ಬೆನ್ನ ಹಿಂದೆ ನಾನಿದ್ದೇನೆ- ಮೈಸೂರು ಮಹಾರಾಜರಿಗೆ ದೈವ ಅಭಯ

2 years ago

ಉಡುಪಿ: ಚಿಕ್ಕ ವಯಸ್ಸಿನಲ್ಲೇ ಪಟ್ಟ ಒಲಿದು ಬಂದಿದೆ. ಧೈರ್ಯದಿಂದ ಮುಂದೆ ಸಾಗು, ನಿನ್ನ ಹಿಂದೆ ನಾನಿದ್ದೇನೆ. ಯಾವುದೇ ಭಯ ಬೇಡ. ನಿನಗೆ ನನ್ನ ಅಭಯ ಹಸ್ತವಿದೆ ಎಂದು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗೆ ಬ್ರಹ್ಮ ಬೈದರ್ಕಳ ಮತ್ತು...

ಸೊಂಟಕ್ಕೆ ಹಗ್ಗ, ಕೈಯಲ್ಲಿ ರಾಡ್ ಹಿಡಿದು ಪ್ರಾಣ ಪಣಕ್ಕಿಟ್ಟು 40 ಅಡಿ ಬಾವಿಯಲ್ಲಿದ್ದ ನಾಗರ ಹಾವಿನ ರಕ್ಷಣೆ

2 years ago

ಉಡುಪಿ: ಮನುಷ್ಯ ಮನುಷ್ಯರಿಗೆ ಸಹಾಯ ಮಾಡುವುದು ಕಷ್ಟ. ಆದರೆ ವ್ಯಕ್ತಿಯೊಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಾಗರಹಾವನ್ನು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಆತ್ರಾಡಿಯ ಶ್ರೀನಿವಾಸ ಆಚಾರ್ಯ ಎಂಬವರ ಮನೆಯ ಬಳಿ ಇರುವ 40 ಅಡಿ ಬಾವಿಗೆ ತಿಂಗಳ ಹಿಂದೆ ನಾಗರಹಾವೊಂದು ಬಿದ್ದಿತ್ತು....

ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ: ಉಡುಪಿಯಲ್ಲಿ ಬಹೃತ್ ಏಕತಾ ಸಮಾವೇಶ

2 years ago

ಉಡುಪಿ: ಮುಸ್ಲಿಮರು ಒಗ್ಗಟ್ಟಾಗದಿದ್ದರೆ ಉಳಿಗಾಲವಿಲ್ಲ. ಈ ದೇಶದಲ್ಲಿ ಮುಸ್ಲೀಮರಿಗೆ ರಾಜಕೀಯ ಅಸ್ತಿತ್ವವೇ ಇಲ್ಲದೆ ಅಸಹಾಯಕರಾಗಿದ್ದೇವೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ ಹೇಳಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ...