Sunday, 26th May 2019

Recent News

1 year ago

ಕ್ಷೇತ್ರದ ಜನರು ಪೊರಕೆ ಏಟು ನೀಡಿದರೂ ಸ್ವೀಕರಿಸುತ್ತೇನೆ :ಡಿಕೆಶಿ

ತುಮಕೂರು: ಜನರು ಬೇಕಾದರೆ ಪೊರಕೆ ಏಟು ನೀಡಲಿ, ಅವರು ಯಾವಾಗ ಬೇಕಾದರೂ ಹೊಡೆಯಲಿ ನಾನು ತಿನ್ನುತ್ತೇನೆ. ಇದು ರಾಜಕೀಯ ಬದ್ಧತೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಚನ್ನಪಟ್ಟಣವನ್ನು ನಾನು ರಾಜಕೀಯವಾಗಿ ಮದುವೆಯಾಗಿದ್ದೇನೆ ಎಂದು ಬುಧವಾರ ಡಿಕೆ ಶಿವ ಕುಮಾರ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಟೀಕಿಸಿ ಯೋಗೇಶ್ವರ್, ಮಹಿಳೆಯಿಂದ ಪೊರಕೆಯಲ್ಲಿ ಡಿಕೆಶಿಗೆ ಹೊಡೆಸುತ್ತೇನೆ ಎಂದು ಹೇಳಿದ್ದಕ್ಕೆ ಸಚಿವರು ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. ತುಮಕೂರಿನ ತುರುವೇಕೆರೆಯಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದ ಒಂದು ಹೋಬಳಿಯ ಜನತೆ […]

1 year ago

ಬೆಳ್ಳಿ ತಟ್ಟೆಯಲ್ಲಿ ಸಿಎಂ ಸಿದ್ದರಾಮಯ್ಯ ಉಪಹಾರ ಸೇವನೆ- ಶಾಸಕ ಕೆ.ಎನ್ ರಾಜಣ್ಣರಿಂದ ರಾಜಾತಿಥ್ಯ

ತುಮಕೂರು: ಜಿಲ್ಲೆಯ ಮಧುಗಿರಿ ಕ್ಷೇತ್ರ ಶಾಸಕದ ಕೆ.ಎನ್ ರಾಜಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಾತಿಥ್ಯವನ್ನು ನೀಡಿದ್ದು, ಸಿಎಂ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ್ದಾರೆ. ಗುರುವಾರ ಜಿಲ್ಲೆಯಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಸಾಧನಾ ಸಮಾವೇಶದಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ಶಿರಾಗೆ ಆಗಮಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾವಹಿಸುವ ಮುನ್ನ ಕ್ಯಾತಸಂದ್ರದಲ್ಲಿರುವ ಮಧುಗಿರಿಯ ಶಾಸಕ ಕೆ.ಎನ್ ರಾಜಣ್ಣ ಅವರ...

ಪುರುಷರಿಗೆ ನಾವೂ ಸೆಕ್ಯೂರಿಟಿ ಇದ್ದ ಹಾಗೆ: ಉಮಾಶ್ರೀ ಮಾತಿಗೆ ನಗೆಗಡಲಲ್ಲಿ ತೇಲಾಡಿದ ಜನ

1 year ago

ತುಮಕೂರು: ಜಿಲ್ಲೆಯ ಕೊರಟಗೆರೆ ಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಮಹಿಳಾ ಸಮಾವೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಅವರು ಸಮಾರಂಭದಲ್ಲಿ ನೆರೆದಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಸಮಾರಂಭದಲ್ಲಿ ಮಹಿಳೆಯರ ದಿನನಿತ್ಯದ ಕಾರ್ಯಕ್ರಮಗಳಲ್ಲಿ ಶ್ರಮವಹಿಸುವ ಕುರಿತು ಮತನಾಡಿದ ಅವರು, ನಾವು ಮಹಿಳೆಯರು...

ಸಾಲ ತೀರಿಸುವಂತೆ ಬ್ಯಾಂಕ್‍ ನಿಂದ ನೋಟಿಸ್- ಹೃದಯಾಘಾತವಾಗಿ ರೈತ ಸಾವು

1 year ago

ತುಮಕೂರು: ಸಾಲ ತೀರಿಸುವಂತೆ ಬ್ಯಾಂಕ್ ನವರು ಕಳಿಸಿದ ನೋಟಿಸ್ ನೋಡಿ ಹೃದಯಾಘಾತಕ್ಕೊಳಗಾಗಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿಯ 65 ವರ್ಷದ ಬಡಯ್ಯ ಮೃತ ರೈತ. ವಿವಿಧ ಬ್ಯಾಂಕ್ ಗಳಲ್ಲಿ 6 ಲಕ್ಷ ರೂಪಾಯಿಗೂ...

ಎರಡು ಕೈ ಕಾಲು ಕಳೆದುಕೊಂಡ ಯುವಕನಿಗೆ ಸ್ವಾವಲಂಬಿ ಜೀವನ ನಡೆಸಲು ಬೇಕಿದೆ ಆಸರೆ

2 years ago

ತುಮಕೂರು: ಒಂದು ವರ್ಷದ ಮಗುವಿದ್ದಾಗ ಪೊಲೀಯೋಗೆ ತುತ್ತಾಗಿ ಕೈಕಾಲುಗಳೆರಡೂ ಸ್ವಾಧೀನ ಕಳೆದುಕೊಂಡಿರುವ ಯುವಕ ನಂದೀಶ್. ಮೂಲತಃ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದೊಡ್ಡಕೊಂಡ್ಲಿ ಗ್ರಾಮದ ನಿವಾಸಿ. ತಾನು ಅಂಗವಿಕಲನಾದ್ರೂ ಸ್ವಾಭಿಮಾನದಿಂದ ಬದುಕಬೇಕೆಂಬ ಛಲ ಹೊಂದಿದ್ದು, ಸಣ್ಣದೊಂದು ಚಿಲ್ಲರೆ ಅಂಗಡಿ ವ್ಯವಸ್ಥೆ ಮಾಡಿಕೊಟ್ಟರೆ...

ಫೇಸ್ ಬುಕ್ ನಲ್ಲಿ ಕೋಮು ಜಾತಿ ಕಮೆಂಟ್: ತುಮಕೂರು ಪೇದೆ ಅಮಾನತು

2 years ago

ತುಮಕೂರು: ಫೇಸ್ ಬುಕ್ ನಲ್ಲಿ ಕೋಮು ಭಾವನೆ ಕೆರಳಿಸುವಂತಹ ಕಾಮೆಂಟ್ ಮಾಡಿದ ಪೊಲೀಸ್ ಪೇದೆಯನ್ನು ತುಮಕೂರು ಎಸ್ಪಿ ಅಮಾನತುಗೊಳಿಸಿದ್ದಾರೆ. ತುಮಕೂರಿನ ಹೆಬ್ಬೂರು ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಮ್. ಸಿ ಮಹೇಶ್ ಅಮಾನತುಗೊಂಡಿರುವ ಪೇದೆ. ಬಿಜೆಪಿ ಜಿಲ್ಲಾಧ್ಯಕ್ಷ ಜ್ಯೋತಿ ಗಣೇಶ್ ಅವರ ಉಚಿತ...

ಆರತಕ್ಷತೆಯಲ್ಲಿ ನಗ್ತಿದ್ದ ವಧು ಧಾರೆಗೆ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

2 years ago

ತುಮಕೂರು: ಮದುವೆ ಮಂಟಪದಿಂದಲೇ ವಧು ಓಡಿಹೋದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಿಯಕರನ ಟಿಟಿ ವಾಹನದಲ್ಲಿ ಬಂದಿದ್ದ ವಧು ಅದೇ ಟಿಟಿಯ ಡ್ರೈವರ್ ರಮೇಶ್ ಜೊತೆ ಓಡಿ ಹೋಗಿದ್ದಾಳೆ. ಮಧ್ಯರಾತ್ರಿಯೇ ತಾವು ಬಂದಿದ್ದ ಟಿಟಿಯಲ್ಲೇ ಇಬ್ಬರೂ ಎಸ್ಕೇಪ್ ಆಗಿದ್ದಾರೆ. ಭಾನುವಾರ ರಾತ್ರಿ...

ಯಡಿಯೂರು ಸಿದ್ದಲಿಂಗೇಶ್ವರನಿಗೆ ಬಿಎಸ್‍ವೈ ಪೂಜೆ – ಕೆಲವೇ ಕ್ಷಣಗಳಲ್ಲಿ 2ನೇ ದಿನದ ಯಾತ್ರೆ

2 years ago

ತುಮಕೂರು: ಬಿಜೆಪಿಯ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಇಂದು 2ನೇ ದಿನ. ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಚಿಕ್ಕನಾಯಕನಹಳ್ಳಿಯ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಗಳಲ್ಲಿ ಪರಿವರ್ತನಾ ಯಾತ್ರೆ ಸಂಚರಿಸಲಿದೆ. ಗುರುವಾರ ರಾತ್ರಿ ಬಿ.ಎಸ್ ಯಡಿಯೂರಪ್ಪ ಮತ್ತವರ ಟೀಂ ಯಡಿಯೂರು ಕ್ಷೇತ್ರದಲ್ಲಿ ವಾಸ್ತವ್ಯ...