ತುಮಕೂರು: ಕಣ್ಣು ಮುಂದೆಯೇ ತಂದೆ ಸಾವನ್ನಪ್ಪಿದ್ದು, ಅದನ್ನು ನೋಡಲಾಗದೇ 8 ವರ್ಷದ ಪುತ್ರ ರೋಧಿಸಿದ ಮನಕಲುಕುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಹುಳಿಯಾರು ಪಟ್ಟಣದಲ್ಲಿ ನಡೆದಿದೆ.
ಶಿವಕುಮಾರ್ (35) ಮೃತ ದುರ್ದೈವಿ. ಶಿವಕುಮಾರ್ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಲಾಳಸಂದ್ರ ಗ್ರಾಮದ ನಿವಾಸಿಯಾಗಿದ್ದು, ಕುಕ್ಕರ್ ಅನ್ಲೋಡ್ ಮಾಡಲು ತನ್ನ ಮಗ ಪುನೀತ್ ಜೊತೆ ಟಾಟಾ ಎಸ್ ನಲ್ಲಿ ಹುಳಿಯಾರಿಗೆ ತೆರಳುತ್ತಿದ್ದರು.
Advertisement
ಟಾಟಾ ಏಸ್ ಚಲಾಯಿಸುವಾಗಲೇ ಶಿವಕುಮಾರ್ ಗೆ ಮೂರ್ಛೆ ಬಂದು ಮೃತಪಟ್ಟಿದ್ದಾರೆ. 8 ವರ್ಷದ ಮಗ ಪುನೀತ್ ಪಕ್ಕದ ಟಾಟಾ ಏಸ್‍ನಲ್ಲಿ ಪಕ್ಕದ ಸೀಟಿನಲ್ಲಿ ಕುಳಿತುಕೊಂಡು ಹೋಗುತ್ತಿದ್ದನು. ಏಕಾಏಕಿ ತಂದೆ ನರಳಾಟವನ್ನು ನೋಡಿ ಪುನೀತ್ ದಿಕ್ಕು ಕಾಣದ ರೋಧಿಸಿದ್ದಾನೆ.
Advertisement
ಪುತ್ರನ ರೋಧನೆ ಕಂಡ ಸಾರ್ವಜನಿಕರು ಕೂಡ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.