Tuesday, 22nd October 2019

Recent News

4 weeks ago

ಹರೀಶ್ ಸಾಳ್ವೆಗೆ 1 ರೂ. ಗೌರವಧನ ನೀಡಿ, ಅಮ್ಮನ ವಾಗ್ದಾನ ನೆರವೇರಿಸಿದ ಸುಷ್ಮಾ ಪುತ್ರಿ

ನವದೆಹಲಿ: ಹಿರಿಯ ವಕೀಲರಾದ ಹರೀಶ್ ಸಾಳ್ವೆ ಅವರಿಗೆ 1 ರೂ. ಗೌರವಧನ ನೀಡಿ, ಅಮ್ಮನ ವಾಗ್ದಾನವನ್ನು ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ನೆರವೇರಿಸಿದ್ದಾರೆ. ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕುಲಭೂಷನ್ ಜಾಧವ್ ಪ್ರಕರಣದಲ್ಲಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಸಮರ್ಥವಾದ ವಾದ ಮಂಡನೆ ಮಾಡಿದ್ದರು. ಈ ಮೂಲಕ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತಕ್ಕೆ ಗೆಲುವು ತಂದಿದ್ದರು. ಅಷ್ಟೇ ಅಲ್ಲದೆ ಸರ್ಕಾರದಿಂದ ಕೇವಲ 1 ರೂ. ಸಂಭಾವನೆ ಪಡೆದಿದ್ದರು. ಪುತ್ರಿ ಬಾನ್ಸುರಿ ಹರೀಶ್ ಸಾಳ್ವೆ ಅವರಿಗೆ 1 […]

2 months ago

ಪ್ರತಿ ಪಕ್ಷಗಳ ಮಾಟ ಮಂತ್ರಕ್ಕೆ ನಮ್ಮ ನಾಯಕರ ಸಾವು: ಸಾಧ್ವಿ ಪ್ರಜ್ಞಾಸಿಂಗ್

ಭೋಪಾಲ್: ವಿವಾದತ್ಮಾಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿದ್ದು, ತಮ್ಮ ಪಕ್ಷದ ಹಿರಿಯ ನಾಯಕರ ಸಾವಿಗೆ ಪ್ರತಿಪಕ್ಷದವರು ನಡೆಸುತ್ತಿರುವ ಮಾಟ ಮಂತ್ರ ಕಾರಣವೆಂದು ಆರೋಪ ಮಾಡಿದ್ದಾರೆ. ಪಕ್ಷದ ಸಭೆಯೊಂದರಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಹಿಂದೆ ಮಹಾರಾಜ್ ಹೇಳಿದಂತೆ ನಾವು ಈಗ ವಿಪತ್ತಿನ ಸಮಯವನ್ನು ಎದುರಿಸುತ್ತಿದ್ದೇವೆ...

ನಾನು ನಿಮ್ಮನ್ನೇ ಹಿಂಬಾಲಿಸುತ್ತಿದ್ದೇನೆ ಮೇಡಂ- ಸುಷ್ಮಾ ನಿವೃತ್ತಿ ವೇಳೆ ಪತಿ ಮಾಡಿದ್ದ ಟ್ವೀಟ್ ಈಗ ವೈರಲ್

3 months ago

ನವದೆಹಲಿ: ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನಿಧನರಾಗಿದ್ದರಿಂದ ದೇಶಾದ್ಯಂತ ಜನತೆ ಕಂಬನಿ ಮಿಡಿಯುತ್ತಿದ್ದರೆ, ಇದೇ ಸಂದರ್ಭದಲ್ಲಿ ಸುಷ್ಮಾ ರಾಜಕೀಯ ನಿವೃತ್ತಿ ವೇಳೆ ಅವರ ಪತಿ ಮಾಡಿದ ಟ್ವೀಟ್ ವೈರಲ್ ಆಗುತ್ತಿದೆ. ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು...

ಸುಷ್ಮಾ ಸ್ವರಾಜ್ ಪಂಚಭೂತಗಳಲ್ಲಿ ಲೀನ

3 months ago

ನವದೆಹಲಿ: ಬಿಜೆಪಿ ನಾಯಕಿ, ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಹಿಂದೂ ಸಂಪ್ರದಾಯದಂತೆ ಇಂದು ದೆಹಲಿಯ ಲೋಧಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸುಷ್ಮಾ ಸ್ವರಾಜ್ ಅವರ ಪುತ್ರಿ ಬನ್ಸುರಿ ಸ್ವರಾಜ್ ಅವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು....

ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಸುಷ್ಮಾ ಸ್ವರಾಜ್

3 months ago

ನವದೆಹಲಿ: ಮಂಗಳವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು 2003ರಲ್ಲಿ ಹೆಚ್‍ಐವಿ ಪೀಡಿತ ಮಕ್ಕಳನ್ನು ತಬ್ಬಿ ಮುದ್ದಾಡಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. 2003ರಲ್ಲಿ ಕೇಂದ್ರ ಆರೋಗ್ಯ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಹೆಚ್‍ಐವಿ ರೋಗದ...

ಸುಷ್ಮಾ ಸ್ವರಾಜ್ ಪ್ರೇಮ್ ಕಹಾನಿ – ಸ್ನೇಹಿತರು ಸತಿ, ಪತಿಗಳಾದ ಕಥೆ ಓದಿ

3 months ago

ನವದೆಹಲಿ: ದೇಶದ ಪ್ರಸಿದ್ಧ ವಕೀಲರಲ್ಲಿ ಒಬ್ಬರಾದ ಸ್ವರಾಜ್ ಕೌಶಲ್, ಸುಷ್ಮಾ ಸ್ವರಾಜ್ ಅವರ ಪತಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರದ್ದು ಪ್ರೇಮ ವಿವಾಹ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ. ಹೌದು, ಸುಷ್ಮಾ ಅವರು ಚಂಡೀಗಢದಲ್ಲಿ ಕಾನೂನು ಪದವಿ ಓದುತ್ತಿದ್ದಾಗ ಸ್ವರಾಜ್...

ಜನನಾಯಕಿ ಅಗಲಿಕೆಯಿಂದ ದೇಶಕ್ಕೆ ನಷ್ಟವಾಗಿದೆ: ಕ್ರೀಡಾ ತಾರೆಯರ ಕಂಬನಿ

3 months ago

ನವದೆಹಲಿ: ಮಂಗಳವಾರ ಹೃದಯಾಘಾತದಿಂದ ನಿಧನರಾದ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನೆನೆದು ಟೀಂ ಇಂಡಿಯಾ ಆಟಗಾರರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆ ದೇಶಕ್ಕೆ ನಷ್ಟವನ್ನುಂಟು ಮಾಡಿದೆ ಎಂದು ದುಃಖಿಸಿದ್ದಾರೆ. ಮಾಜಿ ಸಚಿವೆ ಅಗಲಿಕೆಗೆ ಇಡೀ ದೇಶವೇ...

ಅಕ್ಕ, ನೀವು ಭರವಸೆ ಈಡೇರಿಸದೇ ನಮ್ಮನ್ನು ಬಿಟ್ಟು ಹೋಗಿದ್ದೀರಿ: ಸ್ಮೃತಿ ಇರಾನಿ ಕಂಬನಿ

3 months ago

ನವದೆಹಲಿ: ಅಕ್ಕ, ನೀವು ಭರವಸೆ ಈಡೇರಿಸದೇ ನಮ್ಮನ್ನು ಬಿಟ್ಟು ಹೋಗಿದ್ದೀರಿ ಎಂದು ಟ್ವೀಟ್ ಮಾಡುವ ಮೂಲಕ ಸಚಿವೆ ಸ್ಮೃತಿ ಇರಾನಿ ಕಂಬನಿ ಮಿಡಿದಿದ್ದಾರೆ. ಸ್ಮೃತಿ ಇರಾನಿ ಅವರು ತಮ್ಮ ಟ್ವಿಟ್ಟರಿನಲ್ಲಿ, “ಸುಷ್ಮಾ ಅಕ್ಕ, ನನಗೆ ನಿಮ್ಮ ಬಗ್ಗೆ ಒಂದು ದೂರು ಇದೆ....