ಕೊಪ್ಪಳ: ಅಭಿಮಾನಿಯೊಬ್ಬರು ತನ್ನ ಮಗಳಿಗೆ ದೆಹಲಿಯ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಎಂದು ನಾಮಕರಣ ಮಾಡಲು ಮುಂದಾಗಿದ್ದಾನೆ.
Advertisement
ಹೌದು, ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಮೈಲಾಪೂರ ನಿವಾಸಿಯಾಗಿರುವ ಬಿಜೆಪಿ ಕಾರ್ಯಕರ್ತ ದೇವರಾಜ್ ಅವರು ತಮ್ಮ ಮಗಳಿಗೆ ದಿವಂಗತೆ ಸುಷ್ಮಾ ಸ್ವರಾಜ್ ಹೆಸರಿಡಲು ಮುಂದಾಗಿದ್ದಾರೆ. ವಿಶೇಷವೆಂದರೆ ಈ ಹೆಸರು ನಾಮಕರಣ ಮಾಡಲು ಸುಷ್ಮಾ ಸ್ವರಾಜ್ ಅವರ ಮಾನಸಪುತ್ರರಾದ ಸಚಿವ ಬಿ. ಶ್ರೀರಾಮುಲು ಹಾಗೂ ಜಿ. ಜನಾರ್ದನರಡ್ಡಿ ಅವರೇ ಬರಬೇಕು ಎಂದು ದೇವರಾಜ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮೆಟ್ರೋದಲ್ಲಿ ಮಹಿಳೆಗೆ ಕಿರುಕುಳ – ಸೀನಿಯರ್ ಮ್ಯಾನೇಜರ್, ಎಂಬಿಎ ವಿದ್ಯಾರ್ಥಿ ಅರೆಸ್ಟ್
Advertisement
Advertisement
ಸುಷ್ಮಾ ಸ್ವರಾಜ್ ಅವರಿಗೆ ಜನಾರ್ದನ ರೆಡ್ಡಿ ಹಾಗೂ ರಾಮುಲು ಮಾನಸ ಪುತ್ರರು. ಹೀಗಾಗಿ ನನ್ನ ಮಗಳಿಗೆ ಅವರು ಬಂದು ನಾಮಕಾರಣ ಮಾಡಬೇಕು. ಅವರು ಬರುವವರೆಗೂ ಮಗಳಿಗೆ ನಾಮಕಾರಣ ಮಾಡಲ್ಲ ಎಂದು ದೇವರಾಜ್ ಹಠ ಹಿಡಿದು ಕುಳಿತುಕೊಂಡಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ, ರಾಮುಲು ಆಪ್ತ ಸಹಾಯಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.
Advertisement
ಅಪ್ಪಟ ಸುಷ್ಮಾ ಸ್ವರಾಜ್ ಅಭಿಮಾನಿಯಾಗಿರುವ ದೇವರಾಜ್ ತನಗೆ ಹೆಣ್ಣು ಮಗು ಜನಿಸಿದರೆ ಸುಷ್ಮಾ ಸ್ವರಾಜ್ ಎಂದು ನಾಮಕಾರಣ ಮಾಡುತ್ತೇನೆ ಅಂದುಕೊಂಡಿದ್ದೆ. ಮೊದಲನೆಯದು ಗಂಡು ಮಗುವಾದ ಕಾರಣ ಹೆಸರನ್ನಿಡಲು ಆಗಲಿಲ್ಲ. ಇತ್ತೀಚೆಗೆ ಎರಡನೇಯದಾಗಿ ಹೆಣ್ಣು ಮಗು ಜನಿಸಿದೆ. ಆ ಮಗುವಿಗೆ ನನ್ನ ಆಸೆಯಂತೆ ಸುಷ್ಮಾ ಸವರಾಜ್ ಎಂದು ಹೆಸರಿಡಲು ನಿರ್ಧರಿಸಿರುವುದಾಗಿ ದೇವರಾಜ್ ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವದ ದೊಡ್ಡಣ್ಣನಿಗೆ ಸೆಡ್ಡು ಹೊಡೆದ ಚೀನಾ: ಅಮೆರಿಕದ ಹೌಸ್ ಆಫ್ ಸ್ಪೀಕರ್‌ಗೆ ನಿರ್ಬಂಧ