Sunday, 16th June 2019

3 months ago

ಕೂಲಿ ಕೆಲ್ಸ ಮಾಡ್ತಿದ್ದ ಪೋಷಕರು – ಸಂಪ್‍ನಲ್ಲಿ ಮುಳುಗಿ ಮಕ್ಕಳಿಬ್ಬರು ದುರ್ಮರಣ

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸಂಪ್‍ನಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕೆ.ಆರ್.ಪುರ ಸಮೀಪದ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ನವೀನ್(5) ಮತ್ತು ಬಸಮ್ಮ(1) ಮೃತ ಮಕ್ಕಳು. ಯಾದಗಿರಿ ಮೂಲದ ಮಲ್ಲಪ್ಪ ಹಾಗೂ ಕಾಶಮ್ಮ ದಂಪತಿ ಮಕ್ಕಳು. ದಂಪತಿ ಕೊಡಗಿಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಕಟ್ಟಡದಲ್ಲಿ ಆಟವಾಡಿಕೊಂಡಿದ್ದ ಮಕ್ಕಳು ಸಂಪ್‍ನಲ್ಲಿ ಬಿದ್ದಿದ್ದಾರೆ. ಮಕ್ಕಳ ಚೀರಾಟದ ಸದ್ದು ಕೇಳಿ ಕೂಡಲೇ ಇವರನ್ನು ರಕ್ಷಿಸಿ ಕೆ.ಆರ್.ಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಇಬ್ಬರು […]

1 year ago

ಸಂಪ್‍ಗೆ ಬಿದ್ದು 3 ವರ್ಷದ ಬಾಲಕ ಸಾವು- ಮಗು ಬಿದ್ದಿರುವುದು ತಿಳಿಯದೆ ಮುಚ್ಚಳ ಮುಚ್ಚಿದ್ದ ಪೋಷಕರು!

ಮೈಸೂರು: ತೆರೆದಿದ್ದ ನೀರಿನ ಸಂಪ್‍ಗೆ ಬಿದ್ದು ಮಗು ಮೃತಪಟ್ಟ ಘಟನೆ ಮೈಸೂರು ತಾಲೂಕಿನ ರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶ್ರೇಯಸ್(3) ನೀರಿನ ಸಂಪ್‍ಗೆ ಬಿದ್ದು ಮೃತಪಟ್ಟ ಬಾಲಕ. ಶ್ರೇಯಸ್ ಮನೆಯ ಮುಂದಿದ್ದ ಸಂಪ್‍ಗೆ ಬಿದಿದ್ದಾನೆ. ಆದ್ರೆ ಪೋಷಕರು ಮಗು ಬಿದ್ದಿರುವುದು ತಿಳಿಯದೆ ಸಂಪ್ ಮುಚ್ಚಳ ಮುಚ್ಚಿದ್ದಾರೆ. ಇತ್ತ ಮಗ ಕಾಣೆಯಾದ್ದನ್ನು ಮನಗಂಡ ಪೋಷಕರು ಬಾಲಕನಿಗಾಗಿ ಎಲ್ಲೆಡೆ ಹುಡುಕಾಟ...

ಸಂಪಿಗೆ ಬಿದ್ದು 18 ತಿಂಗಳ ಮಗು ಸಾವು: ಪೋಷಕರಿಂದ ಮಗನ ಕಣ್ಣು ದಾನ

2 years ago

ಹುಬ್ಬಳ್ಳಿ: 18 ತಿಂಗಳ ಮಗುವೊಂದು ಆಟವಾಡಲು ಹೋಗಿ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ಎಂಬುವರ ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಆ ಮಗು ಸಾವನ್ನಪ್ಪಿದ ದುಃಖದಲ್ಲಿಯೂ...

ಸಂಪ್ ಕ್ಲೀನ್ ಮಾಡಲು ಇಳಿದ ಯುವಕರು ಉಸಿರುಗಟ್ಟಿ ಸಾವು

2 years ago

ಬೆಂಗಳೂರು: ಕಲ್ಮಶ ನೀರಿನ ಸಂಸ್ಕರಣ ಘಟಕದ ಸಂಪ್‍ನಲ್ಲಿ ಕ್ಲೀನ್ ಮಾಡಲು ಇಳಿದಿದ್ದ ಇಬ್ಬರು ಯುವಕರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಕನಕಪುರ ತಾಲೂಕಿನ ಹಾರೋಹಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಹಾರಿಜನ್ ಪ್ಯಾಕ್ಸ್ ಪ್ರೈವೇಟ್ ಲಿಮಿಟೆಡ್‍ನ ಕಾರ್ಮಿಕರಾದ ಉಮೇಶ್ ಹಾಗೂ ದಿಲೀಪ್ ಮೃತ ದುರ್ದೈವಿಗಳು....