Tuesday, 18th June 2019

Recent News

2 years ago

ಕಲ್ಲು ಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಉಡುಪಿಯಲ್ಲಿ ಹಲ್ಲೆ

ಉಡುಪಿ: ಕಲ್ಲುಕ್ವಾರಿ ವಿರೋಧಿಸಿದ್ದಕ್ಕೆ ದಲಿತ ವ್ಯಕ್ತಿಗೆ ಹಲ್ಲೆ ನಡೆಸಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ನಡೆದಿದೆ. ಸಿದ್ಧಾಪುರದ ಕೆಂಪುಕಲ್ಲು ಕ್ವಾರಿಯಿಂದಾಗಿ ಪರಿಸರದ ನೂರಾರು ಕುಟುಂಬಗಳಿಗೆ ಸಮಸ್ಯೆಯಾಗುತ್ತಿತ್ತು. ಕಲ್ಲುಕ್ವಾರಿ ಸ್ಥಳೀಯರ ನಿದ್ದೆಗೆಡಿಸಿತ್ತು. ಇದರ ವಿರುದ್ಧ ಬಹಳ ಸಮಯದಿಂದ ಹೋರಾಟ ನಡೆಯುತ್ತಿತ್ತು. ಹೋರಾಟದ ಮುಂದಾಳತ್ವ ವಹಿಸಿದ್ದ ಆನಂದ ಕರೋರ್ ಮೇಲೆ, ನಾಲ್ಕೈದು ಮಂದಿ ಕ್ವಾರಿಗೆ ಸಂಬಂಧಿಸಿದ ಪುಂಡರು ಹಲ್ಲೆ ನಡೆಸಿದ್ದಾರೆ. ದ್ವಿಚಕ್ರ ವಾಹನದಲ್ಲಿ ಆನಂದ್ ಹೋಗುವ ವೇಳೆ ಟೆಂಪೋದಲ್ಲಿ ಡಿಕ್ಕಿ ಹೊಡೆಸಿದ್ದಾರೆ. ನಂತರ ಆರೋಪಿಗಳಾದ ಅಭಿಜಿತ್ ಶೆಟ್ಟಿ, ಅರುಣ […]

2 years ago

ಡಾ.ಕೆ.ಸುಧಾಕರ್ ರಾಜೀನಾಮೆ- ಸಂಸದ ವೀರಪ್ಪ ಮೊಯ್ಲಿ ಮನೆ ಮೇಲೆ ಕಲ್ಲು ತೂರಾಟ

ಚಿಕ್ಕಬಳ್ಳಾಪುರ: ಡಾ.ಕೆ.ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶಾಸಕ ಸುಧಾಕರ್ ಬೆಂಬಲಿತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಾಸಕ ಸುಧಾಕರ್ ರಾಜೀನಾಮೆ ಘೋಷಣೆಗೆ ಚಿಕ್ಕಬಳ್ಳಾಪುರ ಸಂಸದ ಮೊಯ್ಲಿಯೂ ಕೂಡ ಕಾರಣಕರ್ತರು ಅಂತ ಸುಧಾಕರ್ ಬೆಂಬಲಿಗರು ವೀರಪ್ಪ ಮೊಯ್ಲಿ ಗೃಹಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ನಗರದ...