Connect with us

Bengaluru City

ಮಲಗಿದ್ದ ನಾಯಿ ಮೇಲೆ ಕಲ್ಲು ಎತ್ತಿ ಹಾಕಿ ವಿಕೃತಿ ಮೆರೆದ ಭೂಪ

Published

on

ಬೆಂಗಳೂರು: ನಾಯಿಯೊಂದು ಅಪಾರ್ಟ್‍ಮೆಂಟ್ ಗೇಟ್ ಮುಂದೆ ಮಲಗಿದೆ ಅನ್ನೋ ಒಂದೇ ಕಾರಣಕ್ಕೆ ಅಪಾರ್ಟ್‍ಮೆಂಟ್ ವಾಸಿಯೊಬ್ಬ ಏಕಾಏಕಿ ಕಲ್ಲು ತಂದು ಮಲಗಿದ್ದ ನಾಯಿ ಮೇಲೆ ಎತ್ತಿ ಹಾಕಿರುವ ವಿಲಕ್ಷಣ ಘಟನೆ ನಡೆದಿದೆ.

ಬೆಂಗಳೂರಿನ ಜಾಲಹಳ್ಳಿಯ ಪ್ರಸ್ಟೀಜ್ ಕೆನ್ಸಿಂಗ್ಟನ್ ಅಪಾರ್ಟ್‍ಮೆಂಟ್ ಬಳಿ ಈ ಘಟನೆ ನಡೆದಿದೆ. ಇದೇ ಅಪಾರ್ಟ್‍ಮೆಂಟ್ ವಾಸಿಯಾದ ವರುಣ್ ಅನ್ನೋ ವ್ಯಕ್ತಿಗೆ ನಾಯಿ ಕಂಡ್ರೆ ಅದೇನು ಕೋಪನೋ ಗೊತ್ತಿಲ್ಲ. ಕಳೆದ ಶುಕ್ರವಾರ ವಾಕಿಂಗ್ ಹೋಗಿದ್ದ ವರುಣ್, ವಾಪಸ್ ಅಪಾರ್ಟ್‍ಮೆಂಟ್ ಬಳಿ ಬಂದಿದ್ದನು.

ಈ ವೇಳೆ ನಾಯಿ ಅಪಾರ್ಟ್‍ಮೆಂಟ್ ಮುಂಭಾದ ಗೇಟ್ ಬಳಿ ಮಲಗಿತ್ತು. ಇದನ್ನು ನೋಡಿದ ಭೂಪ ವರುಣ್, ಏಕಾಏಕಿ ಕಲ್ಲೊಂದನ್ನು ತಂದು ಮಲಗಿದ್ದ ನಾಯಿ ಮೇಲೆ ಹಾಕಿ ವಿಕೃತಿ ಮೆರೆದಿದ್ದಾನೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಪ್ರಾಣಿ ದಯಾ ಸಂಘದ ವತಿಯಿಂದ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಾಣಿಗಳ ಮೇಲಿನ ಹಿಂಸೆ ನಿರ್ಮೂಲನೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

www.publictv.in